ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಸ್ತೆ ಅಪಘಾತದಲ್ಲಿ ಸಾವನ್ನಪ್ಪುವವರಲ್ಲಿ ಯುವಜನಾಂಗವೇ ಅಧಿಕ

|
Google Oneindia Kannada News

ಬೆಂಗಳೂರು ಫೆಬ್ರವರಿ 16: ದೇಶದಲ್ಲಿ ಆಗುತ್ತಿರುವ ರಸ್ತೆ ಅಪಘಾತಗಳಲ್ಲಿ ಶೇಕಡಾ 70 ರಷ್ಟು ಯುವಜನಾಂಗದವರಾಗಿರುವುದು ಬಹಳ ವಿಷಾದನೀಯ ಸಂಗತಿಯಾಗಿದ್ದು, ಸೂಕ್ತ ಜಾಗೃತಿಯನ್ನು ಮೂಡಿಸುವ ಮೂಲಕ ಇದನ್ನ ತಡೆಗಟ್ಟಬೇಕಾಗಿದೆ ಎಂದು ಸಾರಿಗೆ ಆಯುಕ್ತ ಶಿವಕುಮಾರ್‌ ಹೇಳಿದರು.

ಮೈಸೂರು ರಸ್ತೆಯಲ್ಲಿರುವ ಅರವಿಂದ್‌ ಲಿಮಿಟೆಡ್‌ ನ ಮಿಲ್‌ ನ ಆವರಣದಲ್ಲಿ ಇಂದು ಜ್ಞಾನಭಾರತಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ವತಿಯಿಂದ 32 ನೇ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಸ್ತೆ ಅಪಘಾತಗಳ ಪರಿಣಾಮದಿಂದ ಅವರ ಕುಟುಂಬದವರು ಜೀವನ ಪೂರ್ತಿ ತೊಂದರೆಯನ್ನು ಅನುಭವಿಸುತ್ತಾರೆ. ತಾವು ತೀವ್ರ ನೋವನ್ನು ಅನುಭವಿಸುವುದಕ್ಕಿಂತ ರಸ್ತೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಅಪಘಾತಗಳು ಆಗುವುದನ್ನು ತಡೆಗಟ್ಟಬೇಕು ಎಂದು ಹೇಳಿದರು.

Transport Commissioner Shivakumar call Young riders to follow safety rules

ದೇಶದಲ್ಲಿ ನಡೆಯುತ್ತಿರುವ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುವವರಲ್ಲಿ ಶೇಕಡಾ 70 ರಷ್ಟು ಯುವಜನಾಂಗದವರಾಗಿದ್ದಾರೆ. ಇದು ಬಹಳ ಆಘಾತಕಾರಿ ಅಂಶವಾಗಿದೆ. ಕುಟುಂಬದ ಯುವ ಸದಸ್ಯರನ್ನು ಕಳೆದುಕೊಂಡು ಜನರು ಜೀವನಪೂರ್ತಿ ತೊಂಧರೆಯನ್ನು ಅನುಭವಿಸುತ್ತಾರೆ. ಈ ಹಿನ್ನಲೆಯಲ್ಲಿ ಜನರು ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

Transport Commissioner Shivakumar call Young riders to follow safety rules

Recommended Video

ದೇಶದ್ರೋಹಿಗಳ ಬೆಂಬಲಿಸುವ ಸಂಘಟನೆಗಳಿಗೆ ಬೀದಿಯೇ ಗತಿ-ಬಿಜೆಪಿ ವಕ್ತಾರ ಅಶ್ವತ್ಥ್ ನಾರಾಯಣ್ | Oneindia Kannada

ಕಾರ್ಯಕ್ರಮದಲ್ಲಿ ಆರ್‌ ಟಿ ಒ ಕೆ.ಎಸ್‌ ಸೌಂದರ್ಯ, ಸಹಾಯಕ ಆರ್‌ ಟಿ ಓ ರಾಜಣ್ಣ ಹೆಚ್‌, ಅರವಿಂದ್‌ ಲಿಮಿಟೆಡ್‌ ಸಿ ಓ ಓ ಪ್ರಕಾಶ್‌ ಪೊನ್ನುಸ್ವಾಮಿ ಭಾಗವಹಿಸಿದ್ದರು. ಜಾಗೃತಿ ಗೀತೆಗಳು, ಬೀದಿ ನಾಟಕಗಳ ಮೂಲಕ ಜನರಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು.

English summary
Transport Commissioner Shivakumar call Young riders to follow safety rules and said more than 70% of younger generatin is prone to accidents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X