ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ತೃತೀಯ ಲಿಂಗಿ ಹಕ್ಕುಗಳ ಬಿಲ್ ವಿರುದ್ಧ ಪ್ರತಿಭಟನೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 19: ತೃತೀಯ ಲಿಂಗಿಗಳ ಹಕ್ಕುಗಳಿಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಮಂಡಿಸಲಾಗಿರುವ ಬಿಲ್ ವಿರುದ್ಧ ತೃತೀಯ ಲಿಂಗಿಗಳ ಸಮುದಾಯದವರು ಬುಧವಾರ ಬೆಂಗಳೂರಲ್ಲಿ ಪ್ರತಿಭಟನೆ ನಡೆಸಿದರು.

 ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಸರ್ಕಾರಿ ಹುದ್ದೆ ಪಡೆದ ತೃತೀಯ ಲಿಂಗಿ ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಸರ್ಕಾರಿ ಹುದ್ದೆ ಪಡೆದ ತೃತೀಯ ಲಿಂಗಿ

ಈ ಬಿಲ್ ಮಂಡಿಸುವ ಮುನ್ನ ತೃತೀಯ ಲಿಂಗಿಗಳ ಸಮುದಾಯದವರನ್ನು ಭೇಟಿ ಮಾಡಬೇಕಿತ್ತು, ಬಿಲ್ ಬಗ್ಗೆ ಅಭಿಪ್ರಾಯವನ್ನು ಸಂಗ್ರಹಿಸಬೇಕಿತ್ತು. ಈಗ ಮಂಡಿಸಲಾದ ಬಿಲ್‌ನಲ್ಲಿ ಉದ್ಯೋಗದಲ್ಲಿ ಮೀಸಲಾತಿ, ಶಿಕ್ಷಣ ಇನ್ನಿತರೆ ಪ್ರಮುಖ ವಿಷಯವನ್ನೇ ಕೈಬಿಡಲಾಗಿದೆ.

ಚಿಕ್ಕಮಗಳೂರಿನಲ್ಲಿ ಮಂಗಳಮುಖಿಯರಿಂದ ಕೃಷಿ, ಹೈನುಗಾರಿಕೆ ಚಿಕ್ಕಮಗಳೂರಿನಲ್ಲಿ ಮಂಗಳಮುಖಿಯರಿಂದ ಕೃಷಿ, ಹೈನುಗಾರಿಕೆ

ಈ ಬಿಲ್ ಇನ್ನಷ್ಟು ಜನರನ್ನು ಭಿಕ್ಷುಕರನ್ನಾಗಿ ಮಾಡುವುದರಲ್ಲಿ ಸಂದೇಹವಿಲ್ಲ, ಉದ್ಯೋಗದಲ್ಲಿ ಮೀಸಲಾತಿ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೊಸ ಬಿಲ್ ಮಂಡನೆ ಮಾಡಬೇಕು ಎಂದು ಒತ್ತಾಯಿಸಿ ತೃತೀಯ ಲಿಂಗಿಗಳು ಪ್ರತಿಭಟನೆ ನಡೆಸಿದರು.

Transgenders hold protest over passing of Transgender Persons Bill in Lok Sabha

ಹಲವಾರು ವರ್ಷಗಳಿಂದ ತಮಗೆ ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಮೀಸಲಾತಿ ನೀಡಿ, ಆಗ ನಾವು ಸಮಾಜದಲ್ಲಿ ಎಲ್ಲರಂತೆ ಬದುಕಲು ಸಾಧ್ಯ, ಭಿಕ್ಷಾಟನೆ ಇನ್ನಿತರೆ ಸುಲಿಗೆ ಕೆಲಸವನ್ನು ಬಿಡಲು ಸಾಧ್ಯ ಎಂದು ಹೋರಾಟ ಮಾಡುತ್ತಾ ಬಂದಿದ್ದಾರೆ.

ಆದರೆ ಇದೀಗ ಬಿಲ್ ಪಾಸ್ ಮಾಡಿದ್ದರೂ ಕೂಡ ಇದರಿಂದ ತೃತೀಯ ಲಿಂಗಿಗಳಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನುವುದು ಅವರ ಅಳಲಾಗಿದೆ.

English summary
Transgenders hold protest over passing of Transgender Persons (Protection of Rights) Bill in Lok Sabha. Protestors say, The community wasn't consulted. Bill doesn't consider reservations in jobs & education, most of us are forced to beg & the bill criminalises begging.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X