ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಏರ್‌ಪೋರ್ಟ್‌ಗೆ ರೈಲು ಸೇವೆ: 11 ಖಾಲಿ ಟ್ರಿಪ್,ನಷ್ಟ

|
Google Oneindia Kannada News

ಬೆಂಗಳೂರು,ಜನವರಿ 21: ಕೆಂಪೇಗೌಡ ಏರ್‌ಪೋರ್ಟ್‌ಗೆ ಇತ್ತೀಚೆಗಷ್ಟೇ ರೈಲು ಸೇವೆಯನ್ನು ಆರಂಭಿಸಲಾಗಿತ್ತು. ಇಲ್ಲಿ ರೈಲು ನಿಲ್ದಾಣ ನಿರ್ಮಿಸಿರುವುದು ಅಂತಾರಾಷ್ಟ್ರೀಯ ಪ್ರಯಾಣಿಕರಿಗಷ್ಟೇ ಅಲ್ಲದೆ, ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಸಿಬ್ಬಂದಿಗೆ ನೆರವಾಗಲಿದೆ ಎಂದು ಹೇಳಲಾಗಿತ್ತು.

ಆದರೆ ಈಗಾಗಲೇ 11 ಖಾಲಿ ಟ್ರಿಪ್ ಹೊಡೆದಿದೆ.ಕೇವಲ 10 ರೂ ಮತ್ತು 15 ರೂಗಳಲ್ಲೇ ವಿಮಾನ ನಿಲ್ದಾಣಕ್ಕೆ ರೈಲು ಮೂಲಕ ಪ್ರಯಾಣಿಸಬಹುದು ಎಂಬ ಕಾರಣಕ್ಕೇ ಈ ಯೋಜನೆ ಭಾರಿ ಸುದ್ದಿಗೆ ಗ್ರಾಸವಾಗಿತ್ತು. ಆದರೆ ಈ ಯೋಜನೆ ಚಾಲನೆ ಪಡೆದ ಕೇವಲ 15 ದಿನದಲ್ಲೇ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು, ಯೋಜನೆಗೆ ಜನರಿಂದ ಸರಿಯಾದ ಸಹಕಾರ ದೊರೆಯದ ಹಿನ್ನಲೆಯಲ್ಲಿ ರೈಲುಗಳು ಖಾಲಿ ಟ್ರಿಪ್ ನಡೆಸುತ್ತಿವೆ.

ಕೆಂಪೇಗೌಡ ಏರ್‌ಪೋರ್ಟ್‌ಗೆ ರೈಲು ಸೇವೆ ಆರಂಭ: ಟಿಕೆಟ್ ದರ ಕೇವಲ 10 ರೂ.ಕೆಂಪೇಗೌಡ ಏರ್‌ಪೋರ್ಟ್‌ಗೆ ರೈಲು ಸೇವೆ ಆರಂಭ: ಟಿಕೆಟ್ ದರ ಕೇವಲ 10 ರೂ.

ವಿಮಾನ ನಿಲ್ಗಾಣಕ್ಕೆ ಪ್ರಯಾಣಿಸುತ್ತಿರುವ ರೈಲುಗಳಲ್ಲಿ ಕೇವಲ ಬೆರಳಿಕೆ ಪ್ರಯಾಣಿಕರು ಮಾತ್ರ ಪ್ರಯಾಣಿಸುತ್ತಿದ್ದಾರೆ. ಇದೇ ಜನವರಿ 4ರಂದು ಕೆಂಪೇಗೌಡ ವಿಮಾನ ನಿಲ್ದಾಣದ ಹಾಲ್ಟ್ ಸ್ಟೇಷನ್ ಗೆ 3 ಜೊತೆ ರೈಲುಗಳನ್ನು ನಿಯೋಜಿಸಲಾಗಿತ್ತು.

Train To KIA Ran Empty 11 Times, Ferried Only One On Six Runs

ಈ ರೈಲುಗಳು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಯಲಹಂಕ ರೈಲು ನಿಲ್ದಾಣ ಮತ್ತು ವಿಮಾನ ನಿಲ್ದಾಣದ ಹಾಲ್ಟ್ ನಿಲ್ದಾಣಗಳಿಂದ ಕಾರ್ಯ ನಿರ್ವಹಿಸುತ್ತಿದ್ದವು. ಪ್ರಯಾಣಿಕರ ಈ ನಡೆಗೆ ಕಾರಣವನ್ನು ಹುಡುಕಲಾಗುತ್ತಿದ್ದು, ಪ್ರಯಾಣಿಕರು ರೈಲಿನತ್ತ ಮುಖ ಮಾಡದೇ ಇರಲು ಇರುವ ಅಂಶಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಶೀಘ್ರದಲ್ಲೇ ವಿಮಾನ ನಿಲ್ದಾಣ ಆಪರೇಟರ್ - ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ಜೊತೆ ಮಾತುಕತೆ ನಡೆಸಲು ಯೋಜಿಸಿದ್ದೇವೆ.

ಅಂತೆಯೇ ರೈಲಿನ ವೇಳಾಪಟ್ಟಿ ಬದಲಾವಣೆ ಕುರಿತೂ ಚಿಂತನೆಯಲ್ಲಿ ತೊಡಗಿದ್ದು, 15 ನಿಮಿಷದಿಂದ ಅರ್ಧ ಘಂಟೆಗೆ ಬದಲಾಯಿಸಬಹುದು. ಇದರಿಂದ ವಿಮಾನ ನಿಲ್ದಾಣದ ನೌಕರರು ಮತ್ತು ವಿಮಾನ ಪ್ರಯಾಣಿಕರು ಈ ರೈಲುಗಳನ್ನು ಬಳಸಿಕೊಳ್ಳ ಬಹುದು. ಪ್ರಸ್ತುತ, ವಿಮಾನ ಪ್ರಯಾಣಿಕರು ಮಾತ್ರ ಬಳಕೆ ಮಾಡುವಂತೆ ರೈಲುಗಳ ಸಮಯ ನಿಗದಿ ಪಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೆಲವೊಮ್ಮೆ ರೈಲುಗಳು ಪ್ರಯಾಣಿಕರೇ ಇಲ್ಲದೇ ಪ್ರಯಾಣ ಮಾಡಿರುವ ನಿದರ್ಶನ ಕೂಡ ಇದೆ. ಈ ವರೆಗೂ 11 ಬಾರಿ ರೈಲುಗಳು ಪ್ರಯಾಣಿಕರೇ ಇಲ್ಲದೇ ಟ್ರಿಪ್ ಹೊಡೆದಿದೆ. ಈ ಪೈಕಿ 7 ಬಾರಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದ್ದರೆ, 4 ಬಾರಿ ಪ್ರಯಾಣಿಕರೇ ಇಲ್ಲದೇ ವಿಮಾನ ನಿಲ್ದಾಣದಿಂದ ಮರಳಿದೆ.

Recommended Video

49ನೇ ಅಧ್ಯಕ್ಷರಾಗಿ Joe Biden ಅಧಿಕಾರ ಸ್ವೀಕಾರ..! | Oneindia Kannada

ಆರು ಬಾರಿ ಕೇವಲ ಓರ್ವ ಪ್ರಯಾಣಿಕನನ್ನು ಹೊತ್ತು ಟ್ರಿಪ್ ಮಾಡಿದೆ ಎಂದು ನೈಋತ್ಯ ರೈಲ್ವೆ ವಲಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಂತೆಯೇ ಪ್ರಯಾಣಿಕರ ಈ ನಡೆಗೆ ಕಾರಣವನ್ನು ಹುಡುಕಲಾಗುತ್ತಿದ್ದು, ಪ್ರಯಾಣಿಕರು ರೈಲಿನತ್ತ ಮುಖ ಮಾಡದೇ ಇರಲು ಇರುವ ಅಂಶಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

English summary
The euphoria over train connectivity to the Kempegowda International Airport (KIA) for prices as low as Rs 10 to Rs 15 and the massive buzz it generated on social media platforms has not translated into occupancy on the trains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X