ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಏರ್‌ಪೋರ್ಟ್‌ಗೆ ರೈಲು ಸಂಚಾರ ರದ್ದು!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 27: ರೈಲು ಸಂಚಾರ ಆರಂಭವಾಗಿ ಸುಮಾರು 8 ತಿಂಗಳ ಬಳಿಕ ಏರ್‌ಪೋರ್ಟ್ ರೈಲ್ವೆ ಹಾಲ್ಟ್ ಸ್ಟೇಷನ್‌ಗೆ ರೈಲು ಸಂಚಾರ ಸ್ಥಗಿತವಾಗಿದೆ. ಪ್ರಯಾಣಿಕರ ಸಂಖ್ಯೆ ಕಡಿಮೆಯಾದ ಹಿನ್ನಲೆಯಲ್ಲಿ ರೈಲು ಸಂಚಾರ ರದ್ದುಗೊಂಡಿದೆ.

ಭಾರೀ ನಿರೀಕ್ಷೆಯೊಂದಿಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ರೈಲ್ವೆ ಹಾಲ್ಟ್ ಸ್ಟೇಷನ್‌ ಆರಂಭಿಸಲಾಗಿತ್ತು. ಕೋವಿಡ್ 2ನೇ ಅಲೆ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿತವಾದ ಹಿನ್ನಲೆಯಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.

 ಕೆಎಸ್‌ಆರ್ ರೈಲು ನಿಲ್ದಾಣದಲ್ಲಿ ದೇಶದ ಮೊದಲ ಚಹರೆ ಪತ್ತೆ ತಂತ್ರಜ್ಞಾನ ಅಳವಡಿಕೆ ಕೆಎಸ್‌ಆರ್ ರೈಲು ನಿಲ್ದಾಣದಲ್ಲಿ ದೇಶದ ಮೊದಲ ಚಹರೆ ಪತ್ತೆ ತಂತ್ರಜ್ಞಾನ ಅಳವಡಿಕೆ

2021ರ ಜನವರಿ 4ರಂದು ನೈಋತ್ಯ ರೈಲ್ವೆ ಏರ್‌ಪೋರ್ಟ್ ರೈಲ್ವೆ ಹಾಲ್ಟ್ ಸ್ಟೇಷನ್‌ಗೆ ರೈಲು ಸಂಚಾರ ಆರಂಭಿಸಲಾಗಿತ್ತು. ಪ್ರತಿದಿನ ನಗರದಿಂದ 10 ರೈಲುಗಳು ಈ ನಿಲ್ದಾಣಕ್ಕೆ ಸಂಚಾರ ನಡೆಸುತ್ತಿತ್ತು. ಆದರೆ ಪ್ರಯಾಣಿಕರ ಕೊರತೆ ಕಾರಣ ರೈಲು ರದ್ದಾಗಿದೆ.

 ಕೆಐಎ ಸಂಪರ್ಕಿಸುವ ಮೆಟ್ರೋ ಕಾಮಗಾರಿಗೆ ರಸ್ತೆ ಅಗಲೀಕರಣದ ತೊಂದರೆ ಕೆಐಎ ಸಂಪರ್ಕಿಸುವ ಮೆಟ್ರೋ ಕಾಮಗಾರಿಗೆ ರಸ್ತೆ ಅಗಲೀಕರಣದ ತೊಂದರೆ

ಅತಿ ಕಡಿಮೆ ದರದಲ್ಲಿ ನಗರದಿಂದ ವಿಮಾನ ನಿಲ್ದಾಣ ತಲುಪಲು ಈ ರೈಲು ಸಹಾಯಕವಾಗಿತ್ತು. ರೈಲು ಸಂಚಾರ ಆರಂಭವಾದಾಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆದಿತ್ತು. ಆದರೆ ಪ್ರಯಾಣಿಕರು ರೈಲು ಸಂಚಾರದ ಬಗ್ಗೆ ಉತ್ಸಾಹ ತೋರದ ಕಾರಣ ಏರ್‌ಪೋರ್ಟ್ ರೈಲ್ವೆ ಹಾಲ್ಟ್ ಸ್ಟೇಷನ್‌ ಉಪಯೋಗಕ್ಕೆ ಬರುತ್ತಿಲ್ಲ.

 ಹೊಸ ವಿನ್ಯಾಸದೊಂದಿಗೆ ಕಂಗೊಳಿಸುತ್ತಿದೆ ಯಶವಂತಪುರ ರೈಲ್ವೆ ನಿಲ್ದಾಣ ಹೊಸ ವಿನ್ಯಾಸದೊಂದಿಗೆ ಕಂಗೊಳಿಸುತ್ತಿದೆ ಯಶವಂತಪುರ ರೈಲ್ವೆ ನಿಲ್ದಾಣ

ಪ್ರಯಾಣಿಕರ ಸಂಖ್ಯೆ ಕುಸಿತ

ಪ್ರಯಾಣಿಕರ ಸಂಖ್ಯೆ ಕುಸಿತ

ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ರೈಲಿನಲ್ಲಿ ಜನರು ಸಂಚಾರ ನಡೆಸುತ್ತಿಲ್ಲ. ನೈಋತ್ಯ ರೈಲ್ವೆ ಪಿಆರ್‌ಒ ಅನೀಶ್ ಹೆಗಡೆ ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. "ಜನವರಿಯಿಂದ ಏಪ್ರಿಲ್ ತನಕ 2098 ಪ್ರಯಾಣಿಕರ ಸಂಚಾರ ನಡೆಸಿದ್ದಾರೆ. 20,830 ರೂ. ಆದಾಯ ಟಿಕೆಟ್‌ನಿಂದ ಬಂದಿದೆ" ಎಂದು ಹೇಳಿದ್ದಾರೆ.

ಯಲಹಂಕ ಮತ್ತು ದೇವನಹಳ್ಳಿ ನಡುವಿನ ವಿದ್ಯುತ್ ಕಾಮಗಾರಿ ಅಕ್ಟೋಬರ್ ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ. ಆಗ ಮೆಮು ರೈಲುಗಳನ್ನು ಓಡಿಸಲು ಸಹಾಯಕವಾಗಲಿದೆ ಎಂದು ರೈಲು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

3 ಕೋಟಿ ವೆಚ್ಚದಲ್ಲಿ ನಿಲ್ದಾಣ ನಿರ್ಮಾಣ

3 ಕೋಟಿ ವೆಚ್ಚದಲ್ಲಿ ನಿಲ್ದಾಣ ನಿರ್ಮಾಣ

ಬಿಐಎಎಲ್ ವಿಮಾನ ನಿಲ್ದಾಣದಿಂದ 3.5 ಕಿ. ಮೀ. ದೂರದಲ್ಲಿ ಈ ಏರ್‌ಪೋರ್ಟ್ ರೈಲ್ವೆ ಹಾಲ್ಟ್ ಸ್ಟೇಷನ್‌ ನಿರ್ಮಿಸಿತ್ತು. ಇದಕ್ಕಾಗಿ ಸುಮಾರು 3 ಕೋಟಿ ರೂ. ಖರ್ಚು ಮಾಡಿತ್ತು. ಇದರಿಂದಾಗಿ ವಿಮಾನ ನಿಲ್ದಾಣದಲ್ಲಿ ಕಾರ್ಯ ನಿರ್ವಹಣೆ ಮಾಡುವ ಸುಮಾರು 28,000 ಉದ್ಯೋಗಿಗಳಿಗೆ ಸಹಾಯಕವಾಗಲಿದೆ ಎಂದು ನಿರೀಕ್ಷಿಸಿತ್ತು. ಈ ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಬಸ್ ಸೌಲಭ್ಯವನ್ನು ಸಹ ಕಲ್ಪಿಸಲಾಗಿತ್ತು. ನಗರದಿಂದ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸಲು 10 ರಿಂದ 15 ರೂ. ದರವಿದ್ದರೂ ಸಹ ಪ್ರಯಾಣಿಕರ ಕೊರತೆ ಕಾಡಿದೆ.

ಓಡಲಿವೆ ಎಕ್ಸ್‌ಪ್ರೆಸ್ ರೈಲು

ಓಡಲಿವೆ ಎಕ್ಸ್‌ಪ್ರೆಸ್ ರೈಲು

ಬೆಂಗಳೂರು ನಗರದಿಂದ ವಿಮಾನ ನಿಲ್ದಾಣದ ರೈಲ್ವೆ ಹಾಲ್ಟ್ ಸ್ಟೇಷನ್‌ಗೆ ಕೆಲವೇ ನಿಲ್ದಾಣಗಳಲ್ಲಿ ಮಾತ್ರ ನಿಲ್ಲುವ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ಇಲಾಖೆ ಚಿಂತನೆ ನಡೆಸಿದೆ. ಈ ಮೂಲಕ ಪ್ರಯಾಣಿಕರನ್ನು ಸೆಳೆಯಲು ಯೋಜನೆ ರೂಪಿಸಲಾಗಿದೆ.

ರೈಲ್ವೆ ಇಲಾಖೆ ಯಲಹಂಕ, ಯಶವಂತಪುರ, ಕೆಎಸ್‌ಆರ್ ಬೆಂಗಳೂರು, ವೈಟ್‌ಫೀಲ್ಡ್‌ ನಿಲ್ದಾಣದಿಂದಲೂ ಹೆಚ್ಚಿನ ರೈಲುಗಳನ್ನು ಓಡಿಸಲು ಚಿಂತನೆ ನಡೆಸಿದೆ. ಎಲೆಕ್ಟ್ರಾನಿಕ್ ಸಿಟಿ ಹತ್ತಿರದಿಂದಲೂ ವಿಮಾನ ನಿಲ್ದಾಣಕ್ಕೆ ರೈಲು ಓಡಿಸಬೇಕು ಎಂಬ ಬೇಡಿಕೆ ಸಹ ಇದೆ.

Recommended Video

ಭಾರತದ ಡೇಟಾಬೇಸ್ ಕದ್ದು ಚೀನಾ ಮಾಡೋದೇನು? ಆಘಾತಕಾರಿ ಮಾಹಿತಿ ಬಯಲು | Oneindia Kannada
ಪ್ರಯಾಣಿಕರು ಹೇಳುವುದೇನು?

ಪ್ರಯಾಣಿಕರು ಹೇಳುವುದೇನು?

ಬಿಐಎಎಲ್ ಮತ್ತು ನೈಋತ್ಯ ರೈಲ್ವೆ ವಿಮಾನ ನಿಲ್ದಾಣದ ರೈಲ್ವೆ ಹಾಲ್ಟ್ ಸ್ಟೇಷನ್‌ಗೆ ರೈಲುಗಳನ್ನು ಓಡಿಸುವ ಸಮಯದ ಕುರಿತು ಸರಿಯಾದ ಸಮೀಕ್ಷೆ ನಡೆಸಿಲ್ಲ. ಇದರಿಂದಾಗಿ ಪ್ರಯಾಣಿಕರ ಕೊರತೆ ಉಂಟಾಗಿದೆ. ಒಮ್ಮೆ ಹಾಲ್ಟ್‌ ಸ್ಟೇಷನ್‌ನಿಂದ ಹೊರಟ ರೈಲು ನಗರ ತಲುಪಲು 2 ಗಂಟೆ 40 ನಿಮಿಷ ತೆಗೆದುಕೊಂಡಿದೆ. ಇಷ್ಟು ಹೊತ್ತು ಯಾರು ಕಾಯುತ್ತಾರೆ? ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ.

ಬಿಎಂಟಿಸಿ ಬಸ್, ಟ್ಯಾಕ್ಸಿಗಳು ವಿಮಾನ ನಿಲ್ದಾಣದಿಂ ನಗರಕ್ಕೆ ಸಂಚಾರ ನಡೆಸುತ್ತಿದ್ದು, ಅವುಗಳ ಮೂಲಕವೇ ಜನರು ಸಂಚಾರ ನಡೆಸುತ್ತಿದ್ದು, ರೈಲಿನ ಮೇಲೆ ಅವಲಂಬಿಸಿಲ್ಲ.

English summary
Train service to KIA halt station from Bengaluru city suspended. SWR operated 10 trains a day to KIA from city. SWR had introduced trains to KIA on January 4, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X