ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಎಫ್ ಸಲ್ಲಿಸದಿದ್ದರೆ ಕೇಬಲ್ ಸಂಪರ್ಕ ಕಟ್

|
Google Oneindia Kannada News

digital TV
ಬೆಂಗಳೂರು, ಜ.18 : ಸೆಟ್ ಟಾಪ್ ಬಾಕ್ಸ್ ಮೂಲಕ ಕೇಬಲ್ ಟಿವಿ ಸಂಪರ್ಕ ಪಡೆದಿರುವ ಮೈಸೂರು ಮತ್ತು ಬೆಂಗಳೂರಿನ ಗ್ರಾಹಕರಿಗೆ ಹೊಸ ಸಂಕಷ್ಟ ಎದುರಾಗಿದೆ. ಗ್ರಾಹಕ ನಮೂನೆ ಅರ್ಜಿ(ಸಿಎಎಫ್)ಸಲ್ಲಿಸದ ಗ್ರಾಹಕರ ಕೇಬಲ್ ಸಂಪರ್ಕ ಕಡಿತಗೊಳಿಸುವುದಾಗಿ ಟ್ರಾಯ್ ಎಚ್ಚರಿಕೆ ನೀಡಿದೆ.

ಬೆಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಕರ್ನಾಟಕ-ಕೇರಳ ವಿಭಾಗ ಸಲಹೆಗಾರ ಡಾ. ಸಿಬಿಚ್ಚನ್ ಕೆ.ಮ್ಯಾಥ್ಯೂ ಗ್ರಾಹಕ ಅರ್ಜಿ ನಮೂನೆ ಅರ್ಜಿಯನ್ನು ಜ.31ರೊಳಗೆ ಸಲ್ಲಿಸದಿದ್ದರೆ, ಕೇಬಲ್ ಸಂಪರ್ಕ ಕಡಿತ ಮಾಡಲಾಗುವುದು ಎಂದು ಹೇಳಿದ್ದಾರೆ. [ಸದ್ದಿಲ್ಲದೇ ಕೇಬಲ್ ಬಿಲ್ ಹೆಚ್ಚಳ]

ಸಿಎಫ್ ಸಲ್ಲಿಕೆಗೆ ಮೂರು ಬಾರಿ ಗಡುವು ನೀಡಲಾಗಿತ್ತು. ಆದರೆ, ಬೆಂಗಳೂರಿನಲ್ಲಿ ಶೇ.80 ಹಾಗೂ ಮೈಸೂರಿನಲ್ಲಿ ಶೇ.90ರಷ್ಟು ಅರ್ಜಿಗಳು ಮಾತ್ರ ಸಲ್ಲಿಕೆಯಾಗಿದೆ. ಆದ್ದರಿಂದ ಗ್ರಾಹಕರಿಗೆ ಜ.31ರ ಗಡುವು ನೀಡಿದ್ದು, ನಂತರವೂ ಸಲ್ಲಿಸದಿದ್ದರೆ, ಕೇಬಲ್ ಪ್ರಸಾರ ಸ್ಥಗಿತಗೊಳ್ಳಲಿದೆ ಎಂದು ತಿಳಿಸಿದರು.

ಮೊದಲ ಹಂತದಲ್ಲಿ ಸೆಟ್ ಬಾಕ್ಸ್ ಅಳವಡಿಕೆ ಮಾಡಿದ ದೇಶದ 23 ನಗರಗಳಲ್ಲಿ ಸಿಎಎಫ್ ಸಲ್ಲಿಕೆ ಕಡ್ಡಾಯಗೊಳಿಸಲಾಗಿದೆ. ಇದರಲ್ಲಿ ಬೆಂಗಳೂರು ಹೊರತುಪಡಿಸಿ ಉಳಿದ ನಗರಗಳಲ್ಲಿ ಶೇ.90ರಷ್ಟು ಸಲ್ಲಿಕೆಯಾಗಿವೆ. ಕೇಬಲ್ ಆಪರೇಟರ್‌ಗಳು ಸೆಟ್ ಟಾಪ್ ಬಾಕ್ಸ್, ಬಾಡಿಗೆ ಹಾಗೂ ಚಾನೆಲ್ ಪ್ರಸಾರ ಆಧರಿಸಿ ನಿಯಮದಂತೆ ಶುಲ್ಕ ವಸೂಲಿ ಮಾಡುತ್ತಿದ್ದು, ನಮೂನೆ ಸಂಗ್ರಹವೂ ಆ ಸಂಸ್ಥೆಗಳ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ ಎಂದರು.

ಡಿಜಿಟಲೀಕರಣ ವಿಸ್ತರಣೆ : ಮುಂಬರು ಮಾರ್ಚ್ ನೊಳಗೆ ದೇಶದ ಎರಡನೇ ಹಂತದಲ್ಲಿ ಮಹಾನಗರ ಪಾಲಿಕೆ ಹಾಗೂ ನಗರ-ಪಟ್ಟಣ ಪ್ರದೇಶದ ಗ್ರಾಹಕರು ಸಿಎಎಫ್‌ಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. 2014ರ ಅಂತ್ಯದಲ್ಲಿ ದೇಶದ ಎಲ್ಲಾ ನಗರಗಳ ಗ್ರಾಹಕರಿಂದ ಸಿಎಎಫ್ ಗಳನ್ನು ಪಡೆಯಲಾಗುವುದು ಎಂದು ಮ್ಯಾಥ್ಯೂ ಹೇಳಿದರು.

ದೇಶದ ಎಲ್ಲಾ ನಗರಗಳಲ್ಲಿ ಸಿಎಎಫ್ ಸಲ್ಲಿಕೆಯಾದ ನಂತರ ಪೂರ್ಣ ಪ್ರಮಾಣದಲ್ಲಿ ಕೇಬಲ್ ಪ್ರಸಾರವೂ ಡಿಜಿಟಲೀಕರಣ ಆಗುತ್ತದೆ. ಇದಕ್ಕಾಗಿ ಸೆಟ್ ಟಾಪ್ ಬಾಕ್ಸ್ ಅಭಾವ ಅಥವಾ ಇನ್ಯಾವುದೇ ಸಮಸ್ಯೆ ಇಲ್ಲ. ಗ್ರಾಹಕರ ದೃಷ್ಟಿಯಿಂದ ಮಲ್ಟಿ ಸಿಸ್ಟಂ ಆಪರೇಟರ್‌ಗಳು ತಮ್ಮ ವ್ಯಾಪ್ತಿಯಲ್ಲಿ ದೂರು ಸ್ವೀಕಾರ ಕೇಂದ್ರಗಳನ್ನು ತೆರೆಯುವುದು ಕಡ್ಡಾಯಗೊಳಿಸಲಾಗಿದೆ ಎಂದರು.

ಬಿಲ್ ನೀಡುವುದು ಕಡ್ಡಾಯ : ಕೇಬಲ್ ಆಪರೇಟರ್‌ಗಳು ಗ್ರಾಹಕರು ಬಳಸುವ ಚಾನೆಲ್ ಆಧಾರದ ಮೇಲೆ ಶುಲ್ಕ ವಸೂಲು ಮಾಡಬೇಕಾಗುತ್ತದೆ. ಹೆಚ್ಚುವರಿ ಹಣ ಪಡೆದರೆ ದೂರು ನೀಡಿಲು ಅವಕಾಶವಿದೆ. ಗ್ರಾಹಕರು ಬಳಸುವ ಚಾನೆಲ್ ಗಳಿಗೆ ಅನ್ವಯವಾಗಿ ಬಿಲ್ ನೀಡಿಕೆ ವ್ಯವಸ್ಥೆ ಮಾ.1ರಿಂದ ಜಾರಿಗೆ ಬರಲಿದೆ. ಕೇಬಲ್ ಆಪರೇಟರ್ ಗಳಿಗೆ ಬಿಲ್ ನೀಡುವಂತೆ ಕಡ್ಡಾಯವಾಗಿ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ದರ ನಿಗದಿ ಮಾಡಿಲ್ಲ : ಜನರು ಸೆಟ್ ಟಾಪ್ ಬಾಕ್ಸ್ ಉಪಕರಣವನ್ನು ನಿರ್ದಿಷ್ಟ ಕಂಪನಿಯಿಂದ ಖರೀದಿಸುವಂತೆ ಟ್ರಾಯ್ ಯಾವುದೇ ಸೂಚನೆ ನೀಡಿಲ್ಲ. ಬಾಕ್ಸ್ ದರವನ್ನು ನಿಗದಿಗೊಳಿಸಿಲ್ಲ. ಮಾರುಕಟ್ಟೆಯಲ್ಲಿ ಗುಣಮಟ್ಟ ಹಾಗೂ ಬ್ರಾಂಡ್ ಆಧರಿಸಿ ದರ ನಿಗದಿ ಆಗಿರುತ್ತದೆ. ಇದರಲ್ಲಿ ಟ್ರಾಯ್ ಪಾತ್ರ ಇಲ್ಲ ಎಂದು ಮ್ಯಾಥ್ಯೂ ಸ್ಪಷ್ಟಪಡಿಸಿದರು. [ಸೆಟ್ ಟಾಪ್ ಬಾಕ್ಸ್ ಗೆ ಎಷ್ಟು ಕೊಟ್ರಿ]

ಸಿಎಎಫ್ ಸಲ್ಲಿಸದಿದ್ದರೆ ನಿಮ್ಮ ಕೇಬಲ್ ಟಿವಿ ಪ್ರಸಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಅರ್ಜಿ ಸಲ್ಲಿಸಿದ್ದೀರಾ? ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ಈ ಕುರಿತು ಹೆಚ್ಚಿನ ಮಾಹಿತಿಗೆ ನಿಮ್ಮ ಕೇಬಲ್ ಆಪರೇಟರ್ ಅವರನ್ನು ಸಂಪರ್ಕಿಸಿ.

English summary
The Telecom Regulatory Authority of India (TRAI) has set January 31 as the deadline for ‘Digital Addressable Cable TV System’ consumers in Bangalore and Mysore. This would mean that installation of set-top boxes, collecting consumer application forms (CAF) and updating of subscriber management system (SMS) is to be completed by the end of the month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X