ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾವುಕತೆ ನನ್ನ ರಕ್ತದಲ್ಲೇ ಇದೆ, ಜನರಿಗೆ ನನ್ನ ಬಗ್ಗೆ ಅನುಕಂಪವಿದೆ: ಕುಮಾರಸ್ವಾಮಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 4: ಕರ್ನಾಟಕದಲ್ಲಿ ಮೈತ್ರಿ ಸರಕಾರದ ಸಮಸ್ಯೆಗಳು ದಿನದಿನಕ್ಕೂ ಹೆಚ್ಚುತ್ತಿದ್ದು, ಭಾವುಕರಾಗಿ ಒತ್ತಡವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಿದ್ದಾರೆ. ಸೋಮವಾರ ಈ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ನನ್ನ ರಕ್ತದಲ್ಲೇ ಭಾವುಕತೆ ಇದೆ. ನನ್ನ ಬಗ್ಗೆ ಜನರಿಗೆ ಅನುಕಂಪ ಇದೆ ಎಂದಿದ್ದಾರೆ.

ನೀವು ಈ ರೀತಿ ಭಾವುಕವಾಗಿ ವರ್ತಿಸುವ ಮೂಲಕ 'ದುರಂತ ನಾಯಕ' ಎನಿಸಿಕೊಳ್ಳಲು ಬಯಸುತ್ತೀರಾ ಹಾಗೂ ಜನರು ಇದನ್ನು ಒಪ್ಪಿಕೊಳ್ಳುತ್ತಾರಾ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ದುರಂತ ನಾಯಕರು ಯಶಸ್ವಿಯಾಗಿದ್ದಾರೆ. ನೀವು ಅದನ್ನು ಸಿನಿಮಾದಲ್ಲಿ ನೋಡಿರಬಹುದು ಎಂದು ಹೇಳಿದ್ದಾರೆ.

ಅಣ್ಣ ಎಂದು ಕರೆದಿದ್ದಕ್ಕೆ ಬಿಜೆಪಿಗೆ ಎಚ್‌ಡಿಕೆ ಧನ್ಯವಾದ! ಅಣ್ಣ ಎಂದು ಕರೆದಿದ್ದಕ್ಕೆ ಬಿಜೆಪಿಗೆ ಎಚ್‌ಡಿಕೆ ಧನ್ಯವಾದ!

ಭಾವುಕತೆ ನನ್ನ ದೌರ್ಬಲ್ಯ. ಅದು ನನ್ನ ರಕ್ತದಲ್ಲೇ ಇದೆ. ಅದರ ನಿಯಂತ್ರಣ ನನಗೆ ಬಹಳ ಕಷ್ಟ. ನನಗೆ ಜನರ ಅನುಕಂಪ ಸಿಕ್ಕಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಕಾಂಗ್ರೆಸ್ಸಿನಲ್ಲಿರುವ ಸಿದ್ದರಾಮಯ್ಯ ಅವರು ಕೆಲ ಬೆಂಬಲಿಗರು ಸಾರ್ವಜನಿಕವಾಗಿ, ಸಿದ್ದರಾಮಯ್ಯ ಅವರೇ ಈಗಲೂ ನಮ್ಮ ಮುಖ್ಯಮಂತ್ರಿ ಎಂದು ಹೇಳಿದ್ದಾರೆ. ಅದರಿಂದ ಕುಮಾರಸ್ವಾಮಿ ಸಿಟ್ಟಾಗಿದ್ದರು.

Tragic heroes have been successful, CM Kumaraswamy on emotional outbursts

ಈ ರೀತಿ ಆದರೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ನಾನು ಸಿದ್ಧ ಎಂದು ಹೇಳಿದ್ದರು. ಕಳೆದ ವರ್ಷ ಜುಲೈನಲ್ಲಿ ಕಣ್ಣೀರಿಡುತ್ತಾ ಮಾತನಾಡಿದ್ದ ಕುಮಾರಸ್ವಾಮಿ, ನಾನು ಮುಖ್ಯಮಂತ್ರಿ ಸ್ಥಾನದಲ್ಲಿ ಸಂತೋಷವಾಗಿಯೇನೂ ಇಲ್ಲ. ವಿಷಕಂಠ (ಶಿವ)ನ ರೀತಿಯಲ್ಲಿ ವಿಷವನ್ನು ನುಂಗಿಕೊಂಡು ಈ ಸ್ಥಾನದಲ್ಲಿ ಇದ್ದೇನೆ ಎಂದಿದ್ದರು.

ರವಿ ಪೂಜಾರಿ ಇರಲಿ, ಶಾಸಕ ಗಣೇಶ್‌ ಅನ್ನು ಹಿಡಿಯಿರಿ: ಸಿಎಂಗೆ ಬಿಜೆಪಿ ಟಾಂಗ್ ರವಿ ಪೂಜಾರಿ ಇರಲಿ, ಶಾಸಕ ಗಣೇಶ್‌ ಅನ್ನು ಹಿಡಿಯಿರಿ: ಸಿಎಂಗೆ ಬಿಜೆಪಿ ಟಾಂಗ್

ಆ ನಂತರ ಈ ಸಂಗತಿ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿತು. ಆ ಸಂದರ್ಭದಲ್ಲಿ, ನಾನು ಈಗಿನ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರದ ಬಗ್ಗೆ ಹೇಳಿದ್ದಲ್ಲ ಎಂದು ಹೇಳಿದ್ದರು.

English summary
Prone to sentimental outbursts over coalition troubles, Karnataka chief minister HD Kumaraswamy Monday said emotions were in “his blood” and he was getting sympathy of the people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X