ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ಸಂಚಾರ ನಿಯಮ ಉಲ್ಲಂಘನೆ ಮೇಲೆ ಕಣ್ಣು, ಮನೆಗೆ ನೋಟಿಸ್

|
Google Oneindia Kannada News

ಬೆಂಗಳೂರು, ಆಗಸ್ಟ್‌. 1: ನೀವು ಬೈಕ್‌ ಸವಾರಿ ಮಾಡುವಾಗ ಅರ್ಧ ಹೆಲ್ಮೆಟ್‌ ಧರಿಸುವುದು, ಮೊಬೈಲ್‌ನಲ್ಲಿ ಮಾತನಾಡಿಕೊಂಡು ಹೋಗುವುದು, ಸಿಗ್ನಲ್‌ ಜಂಪ್‌ ಮಾಡುವುದು ಮಾಡಿದರೆ ಸಾವಿರಗಟ್ಟಲೇ ದಂಡದ ರಶೀದಿ ಮನೆಗೆ ಹುಡುಕಿಕೊಂಡು ಬರಲಿದೆ.

ಹೌದು, ಇದಕ್ಕಾಗಿಯೇ ಗೂಗಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಬೆಂಗಳೂರು ಟ್ರಾಫಿಕ್‌ ಪೊಲೀಸರು, ಗೂಗಲ್‌ ಸ್ಟ್ರೀಟ್‌ ವೀವ್‌ ನೊಂದಿಗೆ ನಗರದ ಸಿಗ್ನಲ್‌ಗಳಲ್ಲಿ ಕ್ಯಾಮಾರಗಳನ್ನು ಅಳವಡಿಸಿ ನಿಯಮ ಉಲ್ಲಂಘಿಸಿರುವವರ ಮಾಹಿತಿಯನ್ನು ಸಂಗ್ರಹಿಸಿ ಆಧಾರ ಸಹಿತ ದಂಡದ ರಶೀದಿಯನ್ನು ನಿಯಮ ಉಲ್ಲಂಘಿಸಿದವರ ಮನೆಗೆ ಕಳುಹಿಸಲಿದ್ದಾರೆ. ಅಷ್ಟೇ ಅಲ್ಲದೆ ಗೂಗಲ್‌ ಸ್ಟ್ರೀಟ್‌ ವಿವ್ಯೂ ಟ್ರಾಫಿಕ್‌ ದಟ್ಟಣೆ ಕಡಿಮೆ ಮಾಡಲು ಸಹಕಾರಿಯಾಗಿದೆ.

ಟ್ರಾಫಿಕ್ ಕಡಿಮೆ ಮಾಡಲು ಬೆಂಗಳೂರು ಪೊಲೀಸರ ಜೊತೆ ಒಪ್ಪಂದ ಮಾಡಿಕೊಂಡ ಗೂಗಲ್ಟ್ರಾಫಿಕ್ ಕಡಿಮೆ ಮಾಡಲು ಬೆಂಗಳೂರು ಪೊಲೀಸರ ಜೊತೆ ಒಪ್ಪಂದ ಮಾಡಿಕೊಂಡ ಗೂಗಲ್

ಈ ಬಗ್ಗೆ ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಬಿ. ಆರ್. ರವಿಕಾಂತೇಗೌಡ ಮಾತನಾಡಿ, ಈಗಾಗಲೇ 50 ಜಂಕ್ಷನ್‌ಗಳಲ್ಲಿ ಸ್ವಯಂಚಾಲಿತ ಕ್ಯಾಮೆರಾಗಳನ್ನು ಅಳವಡಿಸಿದ್ದೇವೆ. ಆಗಸ್ಟ್‌ನಿಂದ ಈ ಕ್ಯಾಮೆರಾಗಳು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿವೆ. ಹಾಗಾಗಿ ಅರ್ಧ ಹೆಲ್ಮೆಟ್ ಧರಿಸುವುದು, ಮೊಬೈಲ್ ಫೋನ್ ಬಳಕೆ, ಸಿಗ್ನಲ್ ಜಂಪಿಂಗ್ ಮುಂತಾದ ಸಂಚಾರ ಉಲ್ಲಂಘನೆಗಳನ್ನು ಕ್ಯಾಮರಾದಲ್ಲಿ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಂಚಾರ ದಟ್ಟಣೆಯು 30% ರಷ್ಟು ಕಡಿಮೆ

ಸಂಚಾರ ದಟ್ಟಣೆಯು 30% ರಷ್ಟು ಕಡಿಮೆ

ನಿಯಮಗಳ ಪ್ರಕಾರ, ಸವಾರ ಮತ್ತು ಹಿಂಬದಿ ಕುತಿರುವವರು ಇಬ್ಬರೂ ಪೂರ್ಣ ಹೆಲ್ಮೆಟ್ ಧರಿಸಬೇಕು. ಇಲ್ಲದಿದ್ದರೆ ಕ್ಯಾಮೆರಾಗಳು ವಾಹನಗಳ ಫೋಟೋಗಳನ್ನು ಸಹ ಸೆರೆಹಿಡಿಯುತ್ತವೆ. ಗೂಗಲ್ ಜೊತೆಗಿನ ಒಪ್ಪಂದದ ಕುರಿತು ಮಾತನಾಡಿದ ಜಂಟಿ ಆಯುಕ್ತರು, ಬೆಂಗಳೂರು ನಗರದ ಎಲ್ಲಾ ಟ್ರಾಫಿಕ್ ಪೊಲೀಸ್ ಠಾಣೆಗಳನ್ನು ಇಲ್ಲಿ ಮ್ಯಾಪ್ ಮಾಡಲಾಗುವುದು. ಈ ಗೂಗಲ್‌ ಮ್ಯಾಪ್‌ನಿಂದ ಆಯ್ದ ಜಂಕ್ಷನ್‌ಗಳಲ್ಲಿ ಸಂಚಾರ ದಟ್ಟಣೆಯು 30% ರಷ್ಟು ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.

ವಾಹನ ತಡೆದರೆ ಕಠಿಣ ಕ್ರಮ: ಬೆಂಗಳೂರು ಪೊಲೀಸ್ ಆಯುಕ್ತರ ಖಡಕ್ ಎಚ್ಚರಿಕೆವಾಹನ ತಡೆದರೆ ಕಠಿಣ ಕ್ರಮ: ಬೆಂಗಳೂರು ಪೊಲೀಸ್ ಆಯುಕ್ತರ ಖಡಕ್ ಎಚ್ಚರಿಕೆ

ಟ್ರಾಫಿಕ್ ಆಪ್ಟಿಮೈಸೇಶನ್ ಕಾರ್ಯಗತ

ಟ್ರಾಫಿಕ್ ಆಪ್ಟಿಮೈಸೇಶನ್ ಕಾರ್ಯಗತ

ಸಂಚಾರ ಪೊಲೀಸರು ಕತ್ರಿಗುಪ್ಪೆ ಜಂಕ್ಷನ್ ಅನ್ನು ಪ್ರಾಯೋಗಿಕ ಈ ಯೋಜನೆಗೆ ಆಯ್ಕೆ ಮಾಡಿದ್ದಾರೆ. ಸಿಗ್ನಲ್ ದೀಪಗಳನ್ನು ಸಂಚಾರ ಹರಿವಿನ ಮಾದರಿಯೊಂದಿಗೆ ಸಿಂಕ್ರೊನೈಸ್ ಮಾಡಲಾಗಿದೆ. ಕತ್ರಿಗುಪ್ಪೆ ಸಿಗ್ನಲ್ ಯೋಜನೆ ಯಶಸ್ವಿಯಾದರೆ ಇತರ ಟ್ರಾಫಿಕ್ ಜಂಕ್ಷನ್‌ಗಳಲ್ಲೂ ಕ್ಯಾಮಾರ ಅಳವಡಿಸಿ ಯೋಜನೆ ತರಲಾಗುವುದು. ಜಾಗತಿಕ ಟ್ರಾಫಿಕ್ ಆಪ್ಟಿಮೈಸೇಶನ್ ಅನ್ನು ಕಾರ್ಯಗತಗೊಳಿಸಲು ಗೂಗಲ್ ನಾಲ್ಕು ನಗರಗಳನ್ನು ಗುರುತಿಸಿದೆ. ಇದು ಸಂಚಾರ ದಟ್ಟಣೆಯ ಅಂಕಿ ಅಂಶವನ್ನು ಹೊಂದಿದೆ. ಇದರ ಪ್ರಕಾರ, ನಾವು ಈಗ ಯಾವ ಸಮಯ ಮತ್ತು ಯಾವ ದಿನ ಹೆಚ್ಚು ಟ್ರಾಫಿಕ್ ದಟ್ಟಣೆ ಹೊಂದಿದೆ ಎಂಬ ದತ್ತಾಂಶವನ್ನು ಸಂಗ್ರಹಿಸಿದ್ದೇವೆ. ಇದರ ಆಧಾರದ ಮೇಲೆ ಯಾವ ಕಡೆ ಎಷ್ಟು ಸಮಯ ಪ್ರಯಾಣಕ್ಕೆ ಬೇಕು ಎಂಬುದಕ್ಕೆ ಅಂದಾಜು ಹಾಕಬಹುದು ಎಂದರು.

ಸಿಗ್ನಲ್‌ಗಳಿಗೆ 214 ಟ್ರಾಫಿಕ್ ಸಿಗ್ನಲ್‌ಗಳಿಗೆ ಕ್ಯಾಮಾರ

ಸಿಗ್ನಲ್‌ಗಳಿಗೆ 214 ಟ್ರಾಫಿಕ್ ಸಿಗ್ನಲ್‌ಗಳಿಗೆ ಕ್ಯಾಮಾರ

ಟ್ರಾಫಿಕ್ ಜಂಕ್ಷನ್‌ಗಳನ್ನು ವಿವರವಾಗಿ ಅಧ್ಯಯನ ಮಾಡಿ ಸಿಗ್ನಲ್ ಸಮಯವನ್ನು ನಿಗದಿಪಡಿಸಲಾಗುವುದು. ಗೂಗಲ್ ಈಗಾಗಲೇ ಕೆಆರ್ ಸರ್ಕಲ್, ಹಡ್ಸನ್ ವೃತ್ತ, ಮಿನರ್ವ ವೃತ್ತ, ಟೌನ್ ಹಾಲ್ ವೃತ್ತ, ದೇವಾಂಗ ಜಂಕ್ಷನ್‌ನಲ್ಲಿ ಟ್ರಾಫಿಕ್ ಜಂಕ್ಷನ್‌ಗಳ ಅಧ್ಯಯನ ನಡೆಸಿದೆ. ನಾವು 214 ಟ್ರಾಫಿಕ್ ಸಿಗ್ನಲ್‌ಗಳನ್ನು ಸಿಂಕ್ರೊನೈಸ್ ಮಾಡಲು ಯೋಜಿಸುತ್ತಿದ್ದೇವೆ. ಈ ಸಿಗ್ನಲ್‌ಗಳಿಗೆ ಸಂವೇದಕಗಳ ಜೊತೆಗೆ ಹೆಚ್ಚಿನ ಸಾಂದ್ರತೆಯ ಕ್ಯಾಮೆರಾಗಳನ್ನು ಅಳವಡಿಸಲಾಗುವುದು.

ರಸ್ತೆ ಮುಚ್ಚಿರುವ ಮಾಹಿತಿಯೂ ಲಭ್ಯ

ರಸ್ತೆ ಮುಚ್ಚಿರುವ ಮಾಹಿತಿಯೂ ಲಭ್ಯ

ಇದು ಟ್ರಾಫಿಕ್ ಸಿಗ್ನಲ್ ಹಸಿರು ಬಣ್ಣಕ್ಕೆ ತಿರುಗಿದರೆ ಆ ಮಾರ್ಗದಲ್ಲಿನ ನಂತರದ ಸಿಗ್ನಲ್‌ಗಳು ಹಸಿರು ಬಣ್ಣಕ್ಕೆ ತಿರುಗುತ್ತದೆ. ಪೊಲೀಸ್- ಗೂಗಲ್ ಪಾಲುದಾರಿಕೆಯು ರಸ್ತೆ ಸವಾರರಿಗೆ ಅಪಘಾತ ಮತ್ತು ಇತರ ಕಾರಣಗಳಿಂದ ರಸ್ತೆ ಮುಚ್ಚುವಿಕೆಯ ಕುರಿತು ನಿರ್ದಿಷ್ಟ ನವೀಕರಣಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಪ್ರಸ್ತುತ, ನಾವು ಗೂಗಲ್ ನಕ್ಷೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ಸ್ಥಳದಲ್ಲಿರುವ ಟ್ರಾಫಿಕ್ ಪೊಲೀಸರು ಗೂಗಲ್‌ನೊಂದಿಗೆ ಲೈವ್ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದರಿಂದ ಪ್ರಯಾಣಿಕರಿಗೆ ಮಾಹಿತಿ ಲಭ್ಯವಾಗುವಂತೆ ಮಾಡಿ ಪ್ರಯಾಣ ದಟ್ಟಣೆ ನಿಗ್ರಹಕ್ಕೆ ಸಹಾಯವಾಗಲಿದೆ ಎಂದು ಅವರು ಹೇಳಿದರು.

Recommended Video

T20 ಸರಣಿಯಿಂದ KL ರಾಹುಲ್ ಗೆ ಗೇಟ್ ಪಾಸ್!! ಸಂಜು ಸ್ಯಾಮ್ಸನ್ ಗೆ ಹೊಡೀತು ಲಕ್.. | *Cricket | OneIndia Kannada

English summary
Bengaluru Traffic Police, which has tied up with Google, will install cameras on city signals with Google Street View to collect the information of the violators and send a fine receipt along with the basis to the violators' homes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X