ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಚಾರ ನಿಯಮ ಉಲ್ಲಂಘನೆ: ವಿಶೇಷ ಕಾರ್ಯಾಚರಣೆ ಹೇಗಿರಲಿದೆ ಗೊತ್ತೇ?

|
Google Oneindia Kannada News

ಬೆಂಗಳೂರು, ಜನವರಿ 20: ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿರುವ ಪೊಲೀಸರು ಒಂದು ತಿಂಗಳ ಕಾಲ ವಿಶೇಷ ಕಾರ್ಯಾಚರಣೆ ನಡೆಸಲಿದ್ದಾರೆ.

ಒಂದು ತಿಂಗಳು ಪೂರ್ತಿ ದಿನಕ್ಕೊಂದು ನಿಯಮ ಉಲ್ಲಂಘನೆ ಬಗ್ಗೆ ನಿಗಾವಹಿಸಿ ದಂಡ ವಿಧಿಸಲು ಮುಂದಾಗಿದ್ದಾರೆ.

ನಗರ ವ್ಯಾಪ್ತಿಯಲ್ಲಿ ಜ.18ರಿಂದ ಫೆ.17ರವರೆಗೆ ರಸ್ತೆ ಸುರಕ್ಷತಾ ಸಪ್ತಾಹವನ್ನು ಪೊಲೀಸರು ಆಚರಿಸುತ್ತಿದ್ದು,ರಸ್ತೆ ಸುರಕ್ಷತೆ-ಜೀವನ ರಕ್ಷೆ ಘೋಷಣೆಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

 ಹೆಲ್ಮೆಟ್ ರಹಿತ ಚಾಲನೆ ವಿರುದ್ಧ ಕ್ರಮ

ಹೆಲ್ಮೆಟ್ ರಹಿತ ಚಾಲನೆ ವಿರುದ್ಧ ಕ್ರಮ

ಒಂದು ತಿಂಗಳ ಅವಧಿಯಲ್ಲಿ ದಿನಕ್ಕೊಂದು ಸಂಚಾರ ನಿಯಮದ ಮೇಲೆ ಕಣ್ಣಿಟ್ಟು ಉಲ್ಲಂಘಿಸುವವರಿಗೆ ದಂಡ ಪ್ರಯೋಗಿಸಲು ನಿರ್ಧರಿಸಿದ್ದಾರೆ.
ನಗರವ್ಯಾಪಿ ಹೆಲ್ಮೆಟ್ ರಹಿತ ಚಾಲನೆ ವಿರುದ್ಧ ಮಂಗಳವಾರ ಕಾರ್ಯಾಚರಣೆ ನಡೆದಿದೆ. ಬುಧವಾರ ವಾಹನ ಚಾಲನೆ ವೇಳೆ ಮೊಬೈಲ್ ಬಳಸುವವರಿಗೆ ಬಿಸಿ ಮುಟ್ಟಿಸಲಿದ್ದಾರೆ.

 ಕಾರ್ಯಾಚರಣೆ ದೈನಂದಿನ ವರದಿ

ಕಾರ್ಯಾಚರಣೆ ದೈನಂದಿನ ವರದಿ

ಕಾರ್ಯಾಚರಣೆ ದೈನಂದಿನ ವರದಿಯನ್ನು ಮರುದಿನ ಬೆಳಗ್ಗೆ 10ರೊಳಗೆ ಎಸಿಪಿ ಮತ್ತು ಡಿಸಿಪಿ ಅವರಿಗೆ ಸಲ್ಲಿಸುವಂತೆ ಜಂಟಿ ಪೊಲೀಸ್ ಆಯುಕ್ತ ಡಾ ಬಿಆರ್ ರವಿಕಾಂತೇಗೌಡ ಸೂಚಿಸಿದ್ದಾರೆ.

 ಸೀಟ್ ಬೆಲ್ಡ್ ರಹಿತ ಚಾಲನೆ

ಸೀಟ್ ಬೆಲ್ಡ್ ರಹಿತ ಚಾಲನೆ

ಸೀಟ್ ಬೆಲ್ಟ್ ರಹಿತ(ಜ.21), ಟ್ರಾಫಿಕ್ ಸಿಗ್ನಲ್ ಜಂಪಿಂಗ್ (ಜ.22), ಅತಿ ವೇಗದ ಚಾಲನೆ(ಜ.23), ಕರೆದ ಕಡೆ ಬಾಡಿಗೆಗೆ ಬರಲು ನಕಾರ(ಜ.24), ದುಬಾರಿ ಬಾಡಿಗೆಗೆ ಒತ್ತಾಯ(ಜ.25), ಪಥಶಿಸ್ತು ಉಲ್ಲಂಘನೆ(ಜ.26), ಅಪಾಯಕಾರಿ ಚಾಲನೆ(ಜ.27), ಏಕ ಮುಖ ಸಂಚಾರ ರಸ್ತೆ ಉಲ್ಲಂಘನೆ(ಜ.28)ರಂದು ಕಾರ್ಯಾಚರಣೆ ನಡೆಯಲಿದೆ.

Recommended Video

ಪೊಲೀಸರು ಎಲ್ಲಿ ತಡೆಯುತ್ತಾರೋ ಅಲ್ಲಿಯೇ ಪ್ರತಿಭಟನೆ ಮಾಡಿ- ಡಿಕೆ ಶಿವಕುಮಾರ್ ಕರೆ | Oneindia Kannada
 ಪಾದಚಾರಿ ರಸ್ತೆಯಲ್ಲಿ ವಾಹನ ಚಾಲನೆ

ಪಾದಚಾರಿ ರಸ್ತೆಯಲ್ಲಿ ವಾಹನ ಚಾಲನೆ

ಪಾದಚಾರಿ ರಸ್ತೆಯಲ್ಲಿ ವಾಹನ ಚಾಲನೆ (ಜ.29),ಕರ್ಕಶ ಶಬ್ದ(ಜ.30), ದೋಷಪೂರಿತ ಸೈಲೆನ್ಸರ್(ಜ.31), ಸರಕು ಸಾಗಣೆ ಆಟೋದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದು(ಫೆ.1), ಆಟೋದಲ್ಲಿ ನಿಗದಿಗಿಂತ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುವುದು(ಫೆ.2), ಹಾಗೂ ಫೆ.3 ರಿಂದ ಫೆ.17ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಲಿದ್ದಾರೆ.

English summary
The Traffic police will conduct special operations for a month to take action against traffic violators In Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X