• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿಗೆ ಮೋದಿ, ಮಾರ್ಕೆಲ್, ವಿವಿಧೆಡೆ ಸಂಚಾರ ಬದಲು

By Mahesh
|

ಬೆಂಗಳೂರು, ಅ. 04: ಪ್ರಧಾನಿ ನರೇಂದ್ರ ಮೋದಿ ಹಾಗೂ ಜರ್ಮನಿಯ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಅವರು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರಿನ ಹಲವೆಡೆ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ವಾಹನ ನಿಲುಗಡೆ ನಿಷೇಧ, ಮಾರ್ಗ ಬದಲಾವಣೆ, ಸಂಚಾರ ನಿರ್ಬಂಧ ಇರುವ ಬಗ್ಗೆ ಟ್ರಾಫಿಕ್ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.

ವಾಹನ ನಿಲುಗಡೆಗೆ ನಿಷೇಧ: ಬಳ್ಳಾರಿ ರಸ್ತೆಯಲ್ಲಿ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೇಖ್ರಿ ವೃತ್ತದ ವರೆಗೆ, ರಮಣಮಹರ್ಷಿ ರಸ್ತೆ, ಮೇಖ್ರಿ ವೃತ್ತದಿಂದ ಕಾವೇರಿ ಜಂಕ್ಷನ್ ವರೆಗೆ, ಟಿ.ಚೌಡಯ್ಯ ರಸ್ತೆ, ಕಾವೇರಿ ವೃತ್ತದಿಂದ ವಿಂಡ್ಸರ್ ಮ್ಯಾನರ್ ವೃತ್ತದ ವರೆಗೆ, ಕೆ.ಕೆ.ರಸ್ತೆಯಲ್ಲಿ, ವಿಂಡ್ಸರ್ ಮ್ಯಾನರ್ ವೃತ್ತದಿಂದ ಶಿವಾನಂದ ವೃತ್ತದ ವರೆಗೆ, ಹರೇ ಕೃಷ್ಣ ರಸ್ತೆ, ಶಿವಾನಂದ ವೃತ್ತದಿಂದ ಟ್ರಿಲೈಟ್ ವೃತ್ತದ ವರೆಗೆ, ರೇಸ್ ಕೋರ್ಸ್ ರಸ್ತೆ, ಟ್ರಿಲೈಟ್ ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. [ಬೆಂಗಳೂರಿಗೆ ಬರ್ತಾರೆ ಮೋದಿ]

ಅ.6ರಂದು ರೇಸ್ ಕೋರ್ಸ್ ರಸ್ತೆ, ಟ್ರಿಲೈಟ್ ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ, ಪ್ಯಾಲೇಸ್ ರಸ್ತೆ, ಮಹಾರಾಣಿ ವೃತ್ತದಿಂದ ಹಳೇ ಹೈಗ್ರೌಂಡ್ಸ್ ಪಿ.ಎಸ್. ಜಂಕ್ಷನ್ ವರೆಗೆ, ಟಿ.ಚೌಡಯ್ಯ ರಸ್ತೆ, ಕಾವೇರಿ ವೃತ್ತದಿಂದ ರಾಜಭವನ ಜಂಕ್ಷನ್ ವರೆಗೆ.

ಅಲಿ ಆಸ್ಕರ್ ರಸ್ತೆ, ರಾಜಭವನ ಜಂಕ್ಷನ್ ನಿಂದ ಇನ್‌ಫ್ಯಾಂಟ್ರಿ ರಸ್ತೆ ವರೆಗೆ, ಇನ್‌ಫ್ಯಾಂಟ್ರಿ ರಸ್ತೆ, ಅಲಿ ಆಸ್ಕರ್ ಜಂಕ್ಷನ್ ನಿಂದ ಟ್ರಾಫಿಕ್ ಹೆಡ್‌ಕ್ವಾರ್ಟರ್ ವರೆಗೆ, ಕ್ವೀನ್ಸ್ ರಸ್ತೆ, ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆ, ಕಸ್ತೂರಿಬಾ ರಸ್ತೆ, ಕ್ವೀನ್ಸ್ ವೃತ್ತದಿಂದ ಸಿದ್ದಲಿಂಗಯ್ಯ ವೃತ್ತದ ವರೆಗೆ, ಮಲ್ಯ ಆಸ್ಪತ್ರೆ ರಸ್ತೆ, ಸಿದ್ದಲಿಂಗಂಯ್ಯ ವೃತ್ತದಿಂದ ಆರ್.ಆರ್.ಎಂ.ಆರ್. ಜಂಕ್ಷನ್‌ವರೆಗೆ.

ಆರ್.ಆರ್.ಎಂ.ಆರ್. ರಸ್ತೆ, ರಿಚ್‌ಮಂಡ್ ವೃತ್ತದ ವರೆಗೆ ಹಾಗೂ ಶಾಂತಿನಗರ ಜಂಕ್ಷನ್ ವರೆಗೆ, ಲಾಂಗ್‌ಫೋರ್ಡ್ ರಸ್ತೆ, ಶಾಂತಿನಗರ ವೃತ್ತದಿಂದ ಸಿ.ಎಂ.ಪಿ. ಜಂಕ್ಷನ್ ವರೆಗೆ, ಹೊಸೂರು ರಸ್ತೆ, ಅಶೋಕನಗರ ಸಿಗ್ನಲ್ ಲೈಟ್ ನಿಂದ ಯುಕೋ ಬ್ಯಾಂಕ್ ವರೆಗೆ, ಮೈಕೋ ಇನ್ನರ್ ರಸ್ತೆ, ಆಡುಗೋಡಿ ಜಂಕ್ಷನ್ ನಿಂದ ಮೈಕೋ ಬಂಡೆ ವರೆಗೆ, ಸರ್ಜಾಪುರ ರಸ್ತೆ, ಮಡಿವಾಳ ಚೆಕ್ ಪೋಸ್ಟ್ ನಿಂದ ಕೋರಮಂಗಲ ವಾಟರ್ ಟ್ಯಾಂಕ್ ವರೆಗೆ, ಕೋರಮಂಗಲ ಇನ್ನರ್ ರಿಂಗ್ ರಸ್ತೆ, ಕೋರಮಂಗಲ ವಾಟರ್ ಟ್ಯಾಂಕ್ ನಿಂದ ಇಂದಿರಾನಗರ 100 ಅಡಿ ರಸ್ತೆ ವರೆಗೆ ನಿಷೇಧಿಸಲಾಗಿದೆ. [ಬಿಡದಿಯಲ್ಲಿ ಬಾಷ್ ಅತ್ಯಾಧುನಿಕ ಉತ್ಪಾದನಾ ಘಟಕ]

ಹಳೇ ವಿಮಾನ ನಿಲ್ದಾಣ ರಸ್ತೆ, ಹೆಚ್.ಎ.ಎಲ್. ವಿಮಾನ ನಿಲ್ದಾಣದಿಂದ ಎ.ಎಸ್.ಸಿ.ಸೆಂಟರ್ ವರೆಗೆ, ಟ್ರಿನಿಟಿ ಚರ್ಚ್ ರಸ್ತೆ, ಎ.ಎಸ್.ಸಿ. ವೃತ್ತದಿಂದ ಟ್ರಿನಿಟಿ ವೃತ್ತದ ವರೆಗೆ, ಎಂ.ಜಿ.ರಸ್ತೆ, ಟ್ರಿನಿಟಿ ವೃತ್ತದಿಂದ ವೆಬ್ಸ್ ಜಂಕ್ಷನ್ ವರೆಗೆ, ಡಿಕನ್ಸನ್ ರಸ್ತೆ, ವೆಬ್ಸ್ ಜಂಕ್ಷನ್ ನಿಂದ ಮಣಿಪಾಲ್ ಸೆಂಟರ್ ವರೆಗೆ. ಕಬ್ಬನ್ ರಸ್ತೆ, ಮಣಿಪಾಲ್ ಸೆಂಟರ್ ನಿಂದ ಸಿ.ಟಿ.ಓ. ವೃತ್ತದ ವರೆಗೆ, ರಾಜಭವನ ರಸ್ತೆ, ಸಿ.ಟಿ.ಓ. ವೃತ್ತದಿಂದ ರಾಜಭವನ ವರೆಗೆ, ಎಲ್.ಹೆಚ್.ರಸ್ತೆ, ರಾಜಭವನ ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ, ವಿಕ್ಟೋರಿಯಾ ರಸ್ತೆ, ಎ.ಎಸ್.ಸಿ. ವೃತ್ತದಿಂದ ಡಿಸೋಜಾ ವೃತ್ತದ ವರೆಗೆ, ರಿಚ್‌ಮಂಡ್ ರಸ್ತೆ, ಡಿಸೋಜಾ ವೃತ್ತದಿಂದ ಅಶೋಕನಗರ ಸಿಗ್ನಲ್ ಲೈಟ್ ವರೆಗೆ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಜರ್ಮನಿಯ ಚಾನ್ಸಲರ್ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಯಾವ ರೀತಿಯ ಭದ್ರತೆ ಕೈಗೊಳ್ಳಬೇಕು ಎಂಬ ಕುರಿತು ಪೊಲೀಸ್ ಪ್ರಧಾನ ಕಚೇರಿಯಲ್ಲಿ ಪೊಲೀಸ್ ಮಹಾನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಮೇಲ್ಕಂಡ ಸಂಚಾರ ಬದಲಾವಣೆಗಳನ್ನು ಗಮನದಲ್ಲಿರಿಸಿಕೊಂಡು ಸಾಧ್ಯವಾದಷ್ಟು ಮಟ್ಟಿಗೆ ಪರ್ಯಾಯ ರಸ್ತೆಗಳಲ್ಲಿ ಸಂಚರಿಸುವಂತೆ ಸಂಚಾರ ವಿಭಾಗದ ಅಪರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ ಬೆಂಗಳೂರು ಟ್ರಾಫಿಕ್ ಪೊಲೀಸರ ಫೇಸ್ ಬುಕ್ ಪುಟ ನೋಡುತ್ತಿರಿ.

English summary
Prime Minister Narendra Modi and Chancellor of the Federal Republic of Germany Angela Merkel are visiting Bosch Company in Bengaluru, Bengaluru city traffic police have imposed traffic restriction and diversion of routes and parking of vehicles in many areas on Oct 5 and 6th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more