ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ 16,194 ಡಿಎಲ್, 497 ಆರ್‌ಸಿ ಬುಕ್ ಅಮಾನತಿಗೆ ಶಿಫಾರಸು

By Kiran B Hegde
|
Google Oneindia Kannada News

ಬೆಂಗಳೂರು, ಜ. 9: ರಾಜಧಾನಿ ಬೆಂಗಳೂರು ನಗರದಲ್ಲಿ ಒಂದು ವರ್ಷದಲ್ಲಿ ಸಂಚಾರ ನಿಯಮ ಉಲ್ಲಂಘನೆಯಡಿ 16,194 ಚಾಲನಾ ಪರವಾನಗಿ ಹಾಗೂ 497 ವಾಹನ ನೋಂದಣಿ ಪುಸ್ತಕ ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ಅಮಾನತುಪಡಿಸಲು ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾಗಿದೆ.

ಈ ಕುರಿತು ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಬಿ. ದಯಾನಂದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಆದರೆ, ಪೊಲೀಸ್ ಇಲಾಖೆ ಕೈಗೊಂಡ ಕಟ್ಟುನಿಟ್ಟು ಕ್ರಮಗಳಿಂದ ಅಪಘಾತಗಳ ಪ್ರಮಾಣ ಶೇ. 6ರಷ್ಟು ಕಡಿಮೆಯಾಗಿದೆ. ಸಂಚಾರ ನಿಯಮ ಪಾಲನೆಯನ್ನು ಕಟ್ಟುನಿಟ್ಟು ಮಾಡಿರುವುದು ಇದಕ್ಕೆ ಕಾರಣ ಎಂದು ತಿಳಿಸಿದರು. [ಸಿವಿ ರಾಮನ್ ನಗರದ ಸಿಂಗಂ ಭಾಸ್ಕರ್]

traffic

ವಾಹನ ಸಂಖ್ಯೆ 10 ವರ್ಷದಲ್ಲಿ ಡಬಲ್ : ಬೆಂಗಳೂರಿನಲ್ಲಿ 2005ರಲ್ಲಿ ವಾಹನಗಳ ಸಂಖ್ಯೆ 24.67 ಲಕ್ಷ ಇತ್ತು. ಆದರೆ, 2014ರ ನವೆಂಬರ್ ವೇಳೆಗೆ ಈ ಸಂಖ್ಯೆ 53.93 ಲಕ್ಷಕ್ಕೆ ಏರಿದೆ. ಜನಸಂಖ್ಯೆಯೂ ಅತಿಯಾಗಿ ಹೆಚ್ಚುತ್ತಿದೆ ಎಂದು ತಿಳಿಸಿದರು. [ಕರೆ ಮಾಡಿ ಟ್ರಾಫಿಕ್ ಪೊಲೀಸರಿಗೆ ಮತ ನೀಡಿ]

ಕಟ್ಟುನಿಟ್ಟು ಕ್ರಮ ಕೈಗೊಂಡಿರುವ ಕಾರಣ ಕಳೆದ ವರ್ಷ ಸಂಚಾರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ 737 ಮಾರಣಾಂತಿಕ ಪ್ರಕರಣ, 4,493 ಮಾರಣಾಂತಿಕವಲ್ಲದ ಮತ್ತು 489 ಗಾಯಗೊಂಡ ಪ್ರಕರಣಗಳನ್ನು ದಾಖಲಿಸಲಾಗಿದೆ. ನಗರದಲ್ಲಿ 10 ಅಪಘಾತ ವಲಯಗಳನ್ನು ಗುರುತಿಸಲಾಗಿದೆ ಎಂದು ಬಿ. ದಯಾನಂದ್ ಹೇಳಿದ್ದಾರೆ.

English summary
Traffic police has recommended to suspend 16,194 driving license and 497 Registration book in Bengaluru city. Additional police comissioner (traffic) B Dayanand said it in the press meet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X