ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೋಂಡಾ, ಬೆಂಗ್ಳೂರ್ ಪೊಲೀಸರಿಂದ ಸೇಫ್ ಡ್ರೈವಿಂಗ್ ಪಾಠ

|
Google Oneindia Kannada News

ಬೆಂಗಳೂರು, ಅ 6: ಹೋಂಡಾ ಮೋಟರ್ ಸೈಕಲ್ & ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಚ್‍ಎಂಎಸ್‍ಐ), ಬೆಂಗಳೂರು ಸಂಚಾರಿ ಪೊಲೀಸರ ಸಹಯೋಗದಲ್ಲಿ ಬೆಂಗಳೂರಿನಲ್ಲಿ ರಸ್ತೆ ಸುರಕ್ಷತೆ ತರಬೇತಿ ಕೇಂದ್ರವನ್ನು ಆರಂಭಿಸಿದೆ. ಹೋಂಡಾ ಸಂಸ್ಥೆಯು ಈಗಾಗಲೇ ಏಳು ರಾಜ್ಯಗಳಲ್ಲಿ 1.9 ಲಕ್ಷ ಕಲಿಕಾ ಲೈಸನ್ಸ್ ಅರ್ಜಿದಾರರಿಗೆ & ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಯಶಸ್ವಿಯಾಗಿ ರಸ್ತೆ ಸುರಕ್ಷತೆ ಅರಿವು ಮೂಡಿಸಿದೆ. ಈ ತರಬೇತಿ ಕೇಂದ್ರವು ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ತರಬೇತಿ ನೀಡುವ ಉದ್ದೇಶಕ್ಕೆ ಸೀಮಿತವಾಗಿರುತ್ತದೆ.

ಬೆಂಗಳೂರಿನ ಹೋಂಡಾ ಸುರಕ್ಷಾ ಚಾಲನೆ ಶಿಕ್ಷಣ ಕೇಂದ್ರ ಭಾರತದಲ್ಲೇ ಆರನೆಯದಾಗಿದ್ದು, ಬೆಂಗಳೂರು ಸಂಚಾರ ಪೊಲೀಸ್ ವಿಭಾಗದ ಜಂಟಿ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಕೇಂದ್ರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹೋಂಡಾ ಮೋಟರ್ ಸೈಕಲ್ & ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಚ್‍ಎಂಎಸ್‍ಐ) ಉಪ ಪ್ರಧಾನ ವ್ಯವಸ್ಥಾಪಕ ವಿವೇಕ್ ತಲೂಜಾ, ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳು ಮತ್ತು ಹೋಂಡಾ 2ವ್ಹೀಲರ್ಸ್ ಇಂಡಿಯಾದ ಅಧಿಕಾರಿಗಳು ಉಪಸ್ಥಿತರಿದ್ದರು.

ಸಂಚಾರ ನಿಮಯ ಉಲ್ಲಂಘಿಸಿದವರಿಗೆ ಚಾಲನಾ ನಿಮಯಗಳು ಮತ್ತು ನಿಬಂಧನೆಗಳ ಬಗ್ಗೆ ಹಾಗೂ ರಸ್ತೆಗಳಲ್ಲಿ ಚಾಲಕನ ಕರ್ತವ್ಯಗಳ ಬಗ್ಗೆ ಸಂವೇದನಾಶೀಲತೆ ಬೆಳೆಸುವ ಉದ್ದೇಶದಿಂದ ಬೆಂಗಳೂರು ಸಂಚಾರಿ ಪೊಲೀಸ್ ಇಲಾಖೆ ಈ ಹೊಣೆಯನ್ನು ಹೋಂಡಾಗೆ ವಹಿಸಿದ್ದು, ನಗರದ ಎಲ್ಲ ದ್ವಿಚಕ್ರ ವಾಹನ & ನಾಲ್ಕು ವಾಹನ ಚಲನ್ ಹೊಂದಿರುವವರಿಗೆ ರಸ್ತೆ ಸುರಕ್ಷತೆ ಜಾಗೃತಿ ತರಬೇತಿಯನ್ನು ನೀಡಲು ಸೂಚಿಸಿದೆ. ಹೋಂಡಾದ ಕೌಶಲಯುಕ್ತ ಬೋಧಕರು, ಬೆಂಗಳೂರಿನ ಥಣಿಸಂದ್ರದಲ್ಲಿರುವ ಸಂಚಾರಿ ತರಬೇತಿ ಮತ್ತು ರಸ್ತೆ ಸುರಕ್ಷತೆ ಸಂಸ್ಥೆಯಲ್ಲಿ (ಟಿಟಿಆರ್‍ಎಸ್‍ಐ) ಎಲ್ಲ ಸುರಕ್ಷಾ ಕ್ರಮಗಳು & ಸಾಮಾಜಿಕ ಅಂತರ ನಿಯಮ ಕಾಪಾಡಿಕೊಂಡು ಎಲ್ಲ ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ತರಬೇತಿ ನೀಡುವರು.

 ಹಿರಿಯ ಉಪಾಧ್ಯಕ್ಷ ಪ್ರಭು ನಾಗರಾಜ್

ಹಿರಿಯ ಉಪಾಧ್ಯಕ್ಷ ಪ್ರಭು ನಾಗರಾಜ್

ಹೊಸ ರಸ್ತೆ ಸುರಕ್ಷತೆ ತರಬೇತಿ ಯೋಜನೆಯ ಬಗ್ಗೆ ತಮ್ಮ ಯೋಚನೆಗಳನ್ನು ಹಂಚಿಕೊಂಡ ಹೋಂಡಾ ಮೋಟರ್ ಸೈಕಲ್ & ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಬ್ರಾಂಡ್ & ಕಮ್ಯುನಿಕೇಶನ್ ವಿಭಾಗದ ಹಿರಿಯ ಉಪಾಧ್ಯಕ್ಷ ಪ್ರಭು ನಾಗರಾಜ್, "ಭಾರತದಲ್ಲಿ ರಸ್ತೆ ಸುರಕ್ಷತೆಯು ಪ್ರಮುಖ ಕಳಕಳಿಯ ಅಂಶವಾಗಿದೆ. ಕರ್ನಾಟಕದಲ್ಲಿ 2018ರಲ್ಲಿ 41 ಸಾವಿರ ರಸ್ತೆ ಅಪಘಾತಗಳು ಸಂಭವಿಸಿದ್ದು, ದೇಶದಲ್ಲೇ ಗರಿಷ್ಠ ರಸ್ತೆ ಅಪಘಾತಗಳು ದಾಖಲಾದ ರಾಜ್ಯಗಳ ಪೈಕಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಜವಾಬ್ದಾರಿಯುತ ದ್ವಿಚಕ್ರ ವಾಹನ ಉತ್ಪಾದಕ ಕಂಪನಿಯಾಗಿ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುವುದು ಮತ್ತು ಸುರಕ್ಷಿತ ರಸ್ತೆ ಬಳಕೆದಾರರನ್ನು ಸೃಷ್ಟಿಸುವುದು ಸಮಾಜದ ಅವಿಭಾಜ್ಯ ಅಂಗವಾಗಿದೆ. ಈ ಕಾರ್ಯಕ್ರಮದ ಮೂಲಕ, ಬೆಂಗಳೂರಿನ ಸಂಚಾರಿ ನಿಯಮ ಉಲ್ಲಂಘಿಸುವವರರನ್ನು ರಸ್ತೆ ಸುರಕ್ಷತೆ ಬಗ್ಗೆ ಸಂವೇದನಾಶೀಲಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದರು

ಬೆಂಗಳೂರಿನಲ್ಲಿ ರಸ್ತೆ ಸುರಕ್ಷತೆ ತರಬೇತಿ ಬಗ್ಗೆ

ಬೆಂಗಳೂರಿನಲ್ಲಿ ರಸ್ತೆ ಸುರಕ್ಷತೆ ತರಬೇತಿ ಬಗ್ಗೆ

ಬೆಂಗಳೂರಿನ ಸವಾರರಲ್ಲಿ ಮತ್ತು ವಾಹನ ಚಾಲಕರ ನಡವಳಿಕೆಯಲ್ಲಿ ಬದಲಾವಣೆ ತರುವ ಉದ್ದೇಶದಿಂದ ಹೋಂಡಾ ರಸ್ತೆ ಸುರಕ್ಷೆ ಬೋಧಕರು ಪ್ರತಿ ದಿನ ಮೂರು ತರಬೇತಿ ತರಗತಿಗಳನ್ನು ನಡೆಸಲಿದ್ದಾರೆ. 2 ಗಂಟೆ ಅವಧಿಯ ಉಚಿತ ತರಬೇತಿಯಲ್ಲಿ ರಸ್ತೆ ನಿಮಯ ಉಲ್ಲಂಘಕರಿಗೆ ರಸ್ತೆ ನಿಯಮ, ರಸ್ತೆ ಸಂಕೇತಗಳು ಮತ್ತು ಮಾರ್ಕಿಂಗ್, ಸವಾರಿ ಗೇರ್ ಮತ್ತು ಕುಳಿತುಕೊಳ್ಳುವ ಭಂಗಿ ಹಾಗೂ ಸುರಕ್ಷಿತ ಸವಾರಿಯ ಪ್ರಮುಖ ಅಂಶಗಳ ಬಗ್ಗೆ ಸೈದ್ಧಾಂತಿಕ ತರಬೇತಿ ನೀಡುವರು.

ಇದಾದ ಬಳಳಿಕ ಹೋಂಡಾ ವರ್ಚುವಲ್ ರಸ್ತೆ ಸುರಕ್ಷೆ ಸಿಮ್ಯುಲೇಟ್ ಮೂಲಕ ತರಬೇತಿ ನೀಡಲಾಗುತ್ತದೆ. ಇದು ರಸ್ತೆಗಳಲ್ಲಿ ವಾಸ್ತವ ಸವಾರಿಗೆ ಮುನ್ನ ವ್ಯಕ್ತಿಗಳ ಅಪಾಯ ಸಾಧ್ಯತೆ ಅಂದಾಜಿಸುವಿಕೆ ಸಾಮಥ್ರ್ಯವನ್ನು ಅಂದಾಜಿಸುತ್ತದೆ. ಸ್ತೆ ಸುರಕ್ಷತೆ ಜಾಗೃತಿ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಪಾಲ್ಗೊಳ್ಳುವಿಕೆ ಪ್ರಮಾಣಪತ್ರ ದೊರಕಲಿದೆ ಹಾಗೂ ಈ ಮೂಲಕ ಅವರ ಚಲನ್ ಪೇಆಫ್ ಮಾಡಲು ಇದು ನೆರವಾಗುತ್ತದೆ.

ಸಂಪರ್ಕ ರಹಿತ ಕಲಿಕಾ ಕ್ರಮ

ಸಂಪರ್ಕ ರಹಿತ ಕಲಿಕಾ ಕ್ರಮ

ಕೋವಿಡ್-19 ಸಾಂಕ್ರಾಮಿಕದಿಂದ ಉದ್ಭವಿಸಿರುವ ಹೊಸ ಸಹಜ ಸ್ಥಿತಿಯಲ್ಲಿ, ಹೋಂಡಾದ ಸುರಕ್ಷಾ ಬೋಧಕರು, ಪಾಲ್ಗೊಂಡ ಪ್ರತಿಯೊಬ್ಬರ ಸುರಕ್ಷತೆಯನ್ನು ಖಾತರಿಪಡಿಸುವ ಸಲುವಾಗಿ ಸಾಮಾಜಿಕ ಅಂತರ ಕಾಪಾಡುವುದು, ಸ್ಯಾನಿಟೈಸೇಷನ್, ಪ್ರವೇಶದ್ವಾರದಲ್ಲಿ, ತರಗತಿ ಕೊಠಡಿಯಲ್ಲಿ ಎಲ್ಲ ಅರ್ಜಿದಾರರ ನಡುವೆ ಕನಿಷ್ಠ ಆರು ಅಡಿಗಳ ಅಂತರ ಕಾಪಾಡುವುದು, ದೇಹದ ಉಷ್ಣಾಂಶ ತಪಾಸಣೆ ಹೀಗೆ ಸರ್ಕಾರದ ಸೂಚಿಸಿದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವರು. ಜತೆಗೆ ಪ್ರಮಾಣಪತ್ರ ಹಸ್ತಾಂತರ ಹಾಗೂ ನಿರ್ಗಮನ ವಿಚಾರ ಸೇರಿದಂತೆ ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮವನ್ನು ಪ್ರಮುಖವಾಗಿ ಸಂಪರ್ಕ ರಹಿತ ಕಲಿಕಾ ಕ್ರಮವಾಗಿ ಜಾರಿಗೊಳಿಸಲಾಗುತ್ತದೆ.

ರಸ್ತೆ ಸುರಕ್ಷತೆ ಪ್ರಚಾರದಲ್ಲಿ ಹೋಂಡಾದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಪ್ರಯತ್ನಗಳು
ಜವಾಬ್ದಾರಿಯುತ ಕಾರ್ಪೊರೇಟ್ ಸಂಸ್ಥೆಯಾಗಿ ಹೋಂಡಾ ರಸ್ತೆ ಸುರಕ್ಷತೆ ಜಾಗೃತಿಯನ್ನು ಹರಡುವಲ್ಲಿ ಸಕ್ರಿಯ ಕೊಡುಗೆ ನೀಡುತ್ತಿದ್ದು, ಇದುವರೆಗೆ ಕರ್ನಾಟಕದಲ್ಲಿ 86 ಸಾವಿರಕ್ಕೂ ಅಧಿಕ ಮಂದಿಗೆ ನಿಯತ ಚಟುವಟಿಕೆಗಳು ಮತ್ತು ಶಾಲೆ- ಕಾಲೇಜುಗಳಲ್ಲಿ ಮತ್ತು ಕಾರ್ಪೊರೇಟ್ ಸಂಸ್ಥೆಗಳಲ್ಲಿ ಶಿಬಿರಗಳನ್ನು ಆಯೋಜಿಸುವ ಮೂಲಕ ರಸ್ತೆ ಸುರಕ್ಷತೆ ಬಗ್ಗೆ ಶಿಕ್ಷಣ ನೀಡಿದೆ.

Recommended Video

ಶಾಲಾ ಕಾಲೇಜುಗಳು ಪುನರಾರಂಬದ ಬಗ್ಗೆ Sriramulu ಹೇಳಿದ್ದೇನು | Oneindia Kannada
ರಸ್ತೆ ಸುರಕ್ಷತಾ ಜಾಗೃತಿ ಚಟುವಟಿಕೆ

ರಸ್ತೆ ಸುರಕ್ಷತಾ ಜಾಗೃತಿ ಚಟುವಟಿಕೆ

ಹೋಂಡಾ ಈ ವಿಚಾರದಲ್ಲಿ ಎಲ್ಲ ವಯೋಮಾನದವರನ್ನು ಸಂವೇದನಾಶೀಲಗೊಳಿಸುತ್ತಿದ್ದು, ತನ್ನ 14 ಸಂಚಾರ ತರಬೇತಿ ಪಾರ್ಕ್‍ಗಳಲ್ಲಿ (ದೆಹಲಿಯಲ್ಲಿ 2, ಜೈಪುರ, ಚಂಡೀಗಢ, ಭುವನೇಶ್ವರ, ಕಟಕ್, ಯೆವೋಲಾ, ಹೈದರಾಬಾದ್, ಚೆನ್ನೈ, ಲೂಧಿಯಾನಾ, ಕೊಯಮತ್ತೂರು, ತಿರುಚ್ಚಿ, ಕರ್ನಾಲ್ ಮತ್ತು ಥಾಣೆ) 36 ಲಕ್ಷ ಮಂದಿಗೆ ರಸ್ತೆ ಸುರಕ್ಷತೆ ಜಾಗೃತಿಯ ಅರಿವು ಮೂಡಿಸಿದೆ.

ಕರ್ನಾಲ್, ಭುವನೇಶ್ವರ, ತಿರುಚ್ಚಿ ಮತ್ತು ಕೊಯಮತ್ತೂರು ಹೀಗೆ ನಾಲ್ಕು ಕೇಂದ್ರಗಳಲ್ಲಿ ಕಲಿಕಾ ಲೈಸನ್ಸ್ ಅರ್ಜಿದಾರರಿಗೆ & ಸಂಚಾರಿ ನಿಮಯ ಉಲ್ಲಂಘಕರಿಗೆ ತರಬೇತಿ ನೀಡಲಾಗುತ್ತಿದೆ. ಜತೆಗೆ ವಿಶಾಖಪಟ್ಟಣಂ, ರಾಂಚಿ, ಕೋಳಿಕ್ಕೋಡ್, ವಿಜಯವಾಡ ಹಾಗೂ ಉನಾ ಹೀಗೆ ಐದು ಕೇಂದ್ರಗಳಲ್ಲಿ ಸುರಕ್ಷಿತ ಚಾಲನಾ ಶಿಕ್ಷಣ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಇದಲ್ಲದೇ ಶಾಲೆ, ಕಾಲೇಜುಗಳು, ಕಾರ್ಪೊರೇಟ್ ಸಂಸ್ಥೆಗಳು ಮತ್ತು ಸೊಸೈಟಿಗಳಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.

ಇದರ ಜತೆಗೆ ಹೋಂಡಾ ರಸ್ತೆ ಸುರಕ್ಷತೆ ಜಾಗೃತಿಯನ್ನು ಡಿಜಿಟಲ್ ವೇದಿಕೆಗಳಲ್ಲಿ ಕೂಡಾ ಹರಡುತ್ತಿದ್ದು, ಇದಕ್ಕಾಗಿಯೇ ತನ್ನ ಪ್ರಮುಖ ರಸ್ತೆ ಸುರಕ್ಷತಾ ಇ-ಗುರುಕುಲವನ್ನು 2020ರ ಮೇ ತಿಂಗಳಲ್ಲಿ ಆರಂಭಿಸಲಾಗಿದೆ. ಇ-ಗುರುಕುಲ ಮೂಲಕ 83 ನಗರಗಳು ಮತ್ತು 19 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ 1.27 ಲಕ್ಷ ಮಂದಿಗೆ ಶಿಕ್ಷಣ ನೀಡಲಾಗಿದೆ. ನಾಗರಿಕ ಸಮಾಜದ ಬೆಂಬಲದೊಂದಿಗೆ ಹೋಂಡಾ, ಭವಿಷ್ಯದಲ್ಲಿ ಅನ್‍ಲಾಕ್ ಪ್ರಕ್ರಿಯೆ ಮುಂದುವರಿಯುತ್ತಿರುವ ನಡುವೆಯೇ ಭಾರತೀಯರು ಭಾರತೀಯ ರಸ್ತೆಗಳಲ್ಲಿ ಸುರಕ್ಷಿತವಾಗಿರುವಂತೆ ಮಾಡುವ ದೃಷ್ಟಿಯಿಂದ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ.

English summary
Bengaluru Traffic Police & Honda 2Wheelers India inaugurated first Safety Driving Education Centre in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X