ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಬೈಕ್ ಸವಾರನಿಗೆ 23 ಸಾವಿರ ರೂ. ದಂಡ!

|
Google Oneindia Kannada News

ಬೆಂಗಳೂರು, ಡಿಸೆಂಬರ್ 11: ಬೆಂಗಳೂರು ನಗರದಲ್ಲಿ ಸಂಚಾರಿ ಪೊಲೀಸರು ಬೈಕ್ ಸವಾರನೊಬ್ಬನಿಗೆ 23,000 ರೂ. ದಂಡವನ್ನು ಹಾಕಿದ್ದಾರೆ. ಬೈಕ್ ಸವಾರನನ್ನು ಸಂಚಾರಿ ನಿಯಮದ ಅರಿವು ತರಬೇತಿಗೆ ಕಳಿಸಲಾಗಿದೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಶುಕ್ರವಾರ ಸಂಚಾರಿ ಪೊಲೀಸ್ ಪೂರ್ವ ವಿಭಾಗದ ಹಲಸೂರು ಸಂಚಾರಿ ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಬಿ. ಜಿ. ಮ್ಯಾಥ್ಯೂ ಬೈಕ್ ಸವಾರನನ್ನು ಹಿಡಿದಿದ್ದಾರೆ. ಸಿ. ಕೆ. ಡಿ -8524 ನಂಬರ್‌ನ ಸವಾರನ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.

61 ಬಾರಿ ಸಂಚಾರಿ ನಿಯಮ ಉಲ್ಲಂಘನೆ; ಸವಾರನಿಗೆ ತರಬೇತಿ! 61 ಬಾರಿ ಸಂಚಾರಿ ನಿಯಮ ಉಲ್ಲಂಘನೆ; ಸವಾರನಿಗೆ ತರಬೇತಿ!

ಆಗ ಬೈಕ್ ಸವಾರ 27 ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದೆ. ಬೈಕ್ ಮಾಲೀಕನಿಗೆ ಪೊಲೀಸರು 23,000 ರೂ. ದಂಡವನ್ನು ಹಾಕಿದರು. ಈ ಕುರಿತು ಸಂಚಾರಿ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಸಂಚಾರಿ ನಿಯಮ ಉಲ್ಲಂಘಿಸಿದರೆ ಪರೀಕ್ಷೆ; ಶೇ 60ರಷ್ಟು ಅಂಕ ಕಡ್ಡಾಯ! ಸಂಚಾರಿ ನಿಯಮ ಉಲ್ಲಂಘಿಸಿದರೆ ಪರೀಕ್ಷೆ; ಶೇ 60ರಷ್ಟು ಅಂಕ ಕಡ್ಡಾಯ!

Traffic Police Fined 23 Thousand For Bike Rider

ದಂಡವನ್ನು ಹಾಕಿದ ಬಳಿಕ ಬೈಕ್ ಸವಾರನನ್ನು ಸಂಚಾರಿ ನಿಯಮಗಳ ಅರಿವು ತರಬೇತಿಯನ್ನು ಪಡೆಯಲು ಕಳುಹಿಸಲಾಗಿದೆ. ತರಬೇತಿ ಪಡೆದು ಆತನಿಗೆ ನಿಯಮಗಳು ತಿಳಿದಿದೆ ಎಂದು ಪ್ರಮಾಣ ಪತ್ರ ನೀಡಿದ ಬಳಿಕ ವಾಹವನ್ನು ವಾಪಸ್ ನೀಡಲಾಗುತ್ತದೆ.

ಬೆಂಗಳೂರು; ದಂಡ ಸಂಗ್ರಹಕ್ಕೆ ಮನೆಗೆ ಬರ್ತಾರೆ ಸಂಚಾರಿ ಪೊಲೀಸ್ಬೆಂಗಳೂರು; ದಂಡ ಸಂಗ್ರಹಕ್ಕೆ ಮನೆಗೆ ಬರ್ತಾರೆ ಸಂಚಾರಿ ಪೊಲೀಸ್

ಬೆಂಗಳೂರು ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದವರನ್ನು ಪುನಃ ತರಬೇತಿಗಾಗಿ ಕಳಿಸಲಾಗುತ್ತಿದೆ. 10ಕ್ಕೂ ಹೆಚ್ಚು ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರು ತರಬೇತಿ ಪಡೆದು, ಪ್ರಮಾಣ ಪತ್ರ ಪಡೆದ ಬಳಿಕ ವಾಹನಗಳನ್ನು ವಾಪಸ್ ನೀಡಲಾಗುತ್ತಿದೆ.

English summary
Halasuru traffic police fined 23,000 Rs for bike rider who violate traffic rules for 27 times. Bike rider sent to course on how to follow traffic rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X