ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಚಾರಿ ನಿಯಮ ಉಲ್ಲಂಘಿಸುವವರ ಮೇಲೆ ಹೈ-ಟೆಕ್ ಕ್ಯಾಮೆರಾ ಕಣ್ಣು

|
Google Oneindia Kannada News

ಬೆಂಗಳೂರು, ಏಪ್ರಿಲ್ 25 : ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರ ಮೇಲೆ ಹದ್ದಿನ ಕಣ್ಣಿಡಲು ನಗರದ ಹಲವು ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್‌ (ANPR)ಕ್ಯಾಮೆರಾಗಳನ್ನ ಅಳವಡಿಕೆ ಮಾಡಲಾಗಿದೆ. ಈ ಕ್ಯಾಮೆರಗಳು ಈ ಹಿಂದೆ ಬಾಕಿ ಉಳಿಸಿಕೊಂಡಿರುವಂತ ವಾಹನಗಳನ್ನ ಗುರುತಿಸಿ ಟ್ರಾಫಿಕ್ ಪೊಲೀಸರು ದಂಡ ವಸೂಲಿ ಮಾಡುವುದಕ್ಕೆ ಸಹಾಯ ಮಾಡಲಿದೆ.

ಈ ಹೈಟೆಕ್ ಕ್ಯಾಮೆರಗಳು ದಂಡ ಬಾಕಿ ಉಳಿಸಿಕೊಂಡಿರುವ ಸುಮಾರು 1 ಲಕ್ಷದವರೆಗಿನ ವಾಹನಗಳನ್ನು ಪತ್ತೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಈಗಾಗಲೇ ಪೂರ್ವ ವಿಭಾಗದ ಸಂಚಾರಿ ಪೊಲೀಸರು 12 ಎಎನ್‌ಪಿಆರ್ ಕ್ಯಾಮೆರಾಗಳನ್ನು ಬಳಸುತ್ತಿದ್ದರೆ, ಪಶ್ಚಿಮ ವಿಭಾಗದ ಕಡೆ 8 ಕ್ಯಾಮೆರಗಳನ್ನ ನಿಯೋಜನೆ ಮಾಡಲಾಗಿದೆ. ವಾರದ ಆರಂಭದಲ್ಲಿ ಈ ಎಎನ್‌ಪಿಆರ್‌ ಕ್ಯಾಮೆರಾವು ರೇಸ್‌ಕೋರ್ಸ್‌ ರಸ್ತೆಯಲ್ಲಿ ಒಂದೇ ದಿನದಲ್ಲಿ ದಂಡ ಕಟ್ಟದೆ ಬಾಕಿ ಉಳಿಸಿಕೊಂಡಿರುವ 25 ವಾಹನಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿದೆ. ಪರಿಣಾಮ ಒಂದೇ ದಿನದಲ್ಲೇ ಪೊಲೀಸರು 19,900 ರೂಪಾಯಿ ದಂಡವನ್ನ ಬಾಕಿ ಉಳಿಸಿಕೊಂಡಿದ್ದ ವಾಹನ ಸವಾರರಿಂದ ವಸೂಲಿ ಮಾಡಿದ್ದಾರೆ.

ನಗರದ ಕಬ್ಬನ್ ಪಾರ್ಕ್ ರಸ್ತೆ, ಹೈಗ್ರೌಂಡ್ಸ್‌, ಬಾಳೇಕುಂದ್ರಿ ಜಂಕ್ಷನ್ ಮತ್ತು ಪಶ್ಚಿಮ ವಿಭಾಗದ ಮಲ್ಲೇಶ್ವರಂ, ರಾಜಾಜಿನಗರ, ವಿವಿ ಪುರಂ ಸೇರಿದಂತೆ ಇತರೆಡೆ ಈ ಕ್ಯಾಮೆರಗಳನ್ನು ಅಳವಡಿಸಲಾಗಿದೆ ಎಂದು ಡಿಸಿಪಿ ಕೆ.ಎಂ ಶಾಂತರಾಜು ತಿಳಿಸಿದ್ದಾರೆ. ಅಲ್ಲದೆ ಬಾಕಿ ಉಳಿಸಿಕೊಂಡಿರುವ ವಾಹನಗಳನ್ನ ಪತ್ತೆ ಹಚ್ಚಲು ನಾವು ಸಾಕಷ್ಟು ಕಷ್ಟ ಪಡುತ್ತಿದ್ದೇವು. ಆದರೆ ಈಗ ಕ್ಯಾಮೆರಾ ಅವುಗಳನ್ನು ಸ್ವಯಂಚಾಲಿತವಾಗಿ ಗುರುತಿಸುತ್ತವೇ ಇದರಿಂದ ನಮಗೆ ಬಹಳ ಅನುಕೂಲವಾಗಿದೆ ಎಂದು ಹೇಳಿದ್ದಾರೆ.

Bangalore Traffic Police deploys Armed with hi-tech cameras to auto-detect offenders

ದಂಡ ಕಟ್ಟದೇ ಬಾಕಿ ಉಳಿಸಿಕೊಂಡಿರುವ ವಾಹನವನ್ನು ಕಂಡಾಗ ಈ ಕ್ಯಾಮೆರಾಗಳು ಆಟೋಮ್ಯಾಟಿಕ್ ತನ್ನ ಸಾಫ್ಟವೇರ್‌ನ್ನ ಬಳಸಿಕೊಂಡು ವಾಹನ ಹಾಗೂ ವಾಹನ ಸವಾರನ ಸಂಪೂರ್ಣ ವಿವರವನ್ನು ತಕ್ಷಣವೇ ಹತ್ತಿರದಲ್ಲಿರುವ ಪೊಲೀಸರಿಗೆ ವರ್ಗಾಯಿಸುತ್ತದೆ. ಇನ್ನು ಪೊಲೀಸರು ಕೂಡಲೇ ಕಾರ್ಯ ಪ್ರವೃತ್ತರಾಗಿ ಆ ವಾಹನವನ್ನು ತಡೆದು ದಂಡ ವಸೂಲಿ ಮಾಡುತ್ತಾರೆ.

ಈ ಕ್ಯಾಮೆರಾ ವಾಹನ ಸವಾರ 25 ಬಾರಿಗಿಂತ ಹೆಚ್ಚು ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದರೂ ಸಹ ಆ ವ್ಯಕ್ತಿಯ ಸಂಪೂರ್ಣ ವಿವರವನ್ನು ತಕ್ಷಣದಲ್ಲೇ ಪತ್ತೆ ಹಚ್ಚುವಲ್ಲಿ ಈ ಕ್ಯಾಮೆರಾ ಸಂಪೂರ್ಣ ಕಾರ್ಯನಿರ್ವಹಿಸುತ್ತದೆ.

ಈ ಕ್ಯಾಮೆರಾಗಳಿಗೆ ನಿರ್ದಿಷ್ಟ ಸಂಖೆಯನ್ನು ಓದುವಂತೆ ಸೆಟ್ಟಿಂಗ್ಸ್ ಮಾಡಿಕೊಳ್ಳಬಹುದಾಗಿದೆ. ದ್ವಿಚಕ್ರ ವಾಹನಗಳನ್ನ ಮಾತ್ರ ಹಿಡಿಯಬೇಕಾದರೆ ದ್ವಿಚಕ್ರ ವಾಹನಗಳ ನಂಬರ್ ಪ್ಲೇಟ್‌ಗಳನ್ನ ಕ್ಯಾಮೆರಾಗೆ ಇನ್‌ಪುಟ್ ಮಾಡಬಹುದು ಇಲ್ಲ, ಕೇವಲ ಕಾರುಗಳನ್ನ ಮಾತ್ರ ಪತ್ತೆ ಹಚ್ಚ ಬೇಕೆಂದರೆ ಕಾರುಗಳ ನಂಬರ್ ಪ್ಲೇಟ್‌ ಇನ್‌ಪುಟ್‌ ಮಾಡಿ ಸೆಟ್ಟಿಂಗ್ ಮಾಡಬಹುದಾಗಿ ಎರಡು ರೀತಿಯಲ್ಲೂ ಇದು ಬಹಳ ಸಹಾಯಕಾರಿಯಾಗಿದೆ ಎಂದು ಹಿರಿಯ ಟ್ರಾಫಿಕ್ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಸದ್ಯಕ್ಕೆ ಈಗ ಟ್ರಾಫಿಕ್ ಪೊಲೀಸರ ಬಳಿ 2,028 ದೇಹ-ಧಾರಿತ ಕ್ಯಾಮೆರಾಗಳು, 250 ಎನ್‌ಪಿಆರ್‌ ಕ್ಯಾಮೆರಾಗಳು ಮತ್ತು 80 ಆರ್‌ವಿಡಿ ಕ್ಯಾಮೆರಗಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಹೈಟೆಕ್ ಕ್ಯಾಮೆರಾಗಳನ್ನು ಖರೀದಿಸಲಾಗುವುದು ಎಂದು ಹಿರಿಯ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ಮುಂದೆ ಬೆಂಗಳೂರಿನ ವಾಹನ ಸವಾರರು ಟ್ರಾಫಿಕ್ ಪೊಲೀಸರ ಕಣ್ಣು ತಪ್ಪಿಸಿದ್ದರೂ ಈ ಹೈಟೆಕ್ ಕ್ಯಾಮೆರಾ ಕಣ್ಣಿನಿಂದ ಮಾತ್ರ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಎಷ್ಟೇ ದೂರದಲ್ಲಿದ್ದರೂ ಈ ಕ್ಯಾಮೆರಾಗಳು ಪತ್ತೆ ಮಾಡಿ ಆ ವಾಹನದ ಸಂಪೂರ್ಣ ಮಾಹಿತಿಯನ್ನು ಪೊಲೀಸರಿಗೆ ರವಾನಿಸಲಿದೆ. ಇದರಿಂದ ಟ್ರಾಫಿಕ್ ಪೊಲೀಸರಿಗೂ ದಂಡ ವಸೂಲಿ ಮಾಡಲು ಸುಲಭವಾದಂತಾಗಿದೆ. ಅದಕ್ಕಾಗಿ ಇನ್ನುಮುಂದೆ ಆದರೂ ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘಿಸದೇ ಇದ್ದರೆ ದಂಡದಿಂದ ಬಚಾವ್ ಆಗಬಹುದಾಗಿದೆ.

Recommended Video

ದಿನೇಶ್ ಕಾರ್ತಿಕ್ ಗೆ ಈತನಿಂದ ವಿಶ್ವಕಪ್ ಆಡಲು ಚಾನ್ಸ್ ಸಿಗಲ್ಲ!! | Oneindia Kannada

English summary
Deployment of Automatic Number plate recognition(ANPR) cameras, capable of Identifying vehicles with pending fines even in the densest of city areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X