ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂಜಿ ರಸ್ತೆಯಲ್ಲಿ ವಾಹನ ನಿಲ್ಲಿಸಬಹುದು, ಚಾಲಕರು ಫುಲ್ ಖುಷ್

|
Google Oneindia Kannada News

ಬೆಂಗಳೂರು, ಆಗಸ್ಟ್ 3: ಸದಾ ವಾಹನಗಳಿಂದ ಗಿಜಿಗುಡುತ್ತಿರುವ ಎಂಜಿರಸ್ತೆಯಲ್ಲಿ ವಾಹನಗಳ ನಿಲುಗಡೆಯೇ ದೊಡ್ಡ ಸಮಸ್ಯೆಯಾಗಿತ್ತು, ಇದೀಗ ಆ ತಾಪತ್ರಯ ಬಗೆಹರಿದಿದೆ.

ಹೌದು ಇದೀಗ ಎಂಜಿ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಲು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ. ನಾಲ್ಕುದಿನಗಳ ಕಾಲ ಟ್ರಯಲ್ ನೋಡಿ ಬಳಿಕ ಅನುಮತಿ ನೀಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕಬ್ಬನ್ -ಎಂಜಿ ರಸ್ತೆ ನಡುವಿನ ಕಾಮರಾಜ ರಸ್ತೆ 4 ವರ್ಷ ಬಂದ್ ಕಬ್ಬನ್ -ಎಂಜಿ ರಸ್ತೆ ನಡುವಿನ ಕಾಮರಾಜ ರಸ್ತೆ 4 ವರ್ಷ ಬಂದ್

ಶುಕ್ರವಾರದಿಂದ ವಾಹನ ನಿಲುಗಡೆಗೆ ಅವಕಾಶ ನೀಡಿದ್ದಾರೆ ಸೋಮವಾರದಷ್ಟೊತ್ತಿದೆ, ಈ ವಾಹನಗಳ ನಿಲುಗಡೆಯಿಂದ ದಿನನಿತ್ಯದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವುದೇ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

Traffic Police Allowed Parking in MG Road

ನಮ್ಮ ಮೆಟ್ರೋ ಕಾಮಗಾರಿ ನಡೆಯುವ ಕಾರಣ, ಜೂನ್ 15ರಿಂದ ಎಂಜಿ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡುವಂತಿಲ್ಲ ಎನ್ನುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಎಂಜಿ ರಸ್ತೆ ಹಾಗೂ ಕಾಮರಾಜ ರಸ್ತೆಯ ಮಧ್ಯೆ ಸುರಂಗ ನಿಲ್ದಾಣಗಳ ಕಾಮಗಾರಿ ಆರಂಭಿಸಲಾಗಿತ್ತು.

ಆದರೆ ಈ ನಿರ್ಣಯದಿಂದ ಸಾರ್ವಜನಿಕರಿಗೆ ತೊಂದರೆಯುಂಟಾಗಿತ್ತು. ಅಂಗಡಿ, ಬಿಲ್ಡಿಂಗ್‌ಗಳ ಮಾಲೀಕರು ಕೂಡ ತಮ್ಮ ವಾನಗಳನ್ನು ನಿಲ್ಲಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಎಲ್ಲರ ಒತ್ತಡದ ಮೇರೆಗೆ ಮತ್ತೆ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಿಕೊಡಲು ಸಂಚಾರ ಪೊಲೀಸರು ಮುಂದಾಗಿದ್ದಾರೆ.

ಎಂಜಿ ರಸ್ತೆಯಲ್ಲಿ ಒಂದು ಬದಿಯಲ್ಲಿ ಮಾತ್ರ ವಾಹನ ನಿಲುಗಡೆ ಮಾಡಲಾಗುತ್ತದೆ. ಪಾರ್ಕಿಂಗ್ ನಿಷೇಧದಿಂದಾಗಿ ದ್ವಿಚಕ್ರ ವಾಹನ ಸವಾರರಿಗೆ ತುಂಬಾ ತೊಂದರೆಯಾಗಿತ್ತು. ಶುಕ್ರವಾರ ರಾತ್ರಿ ಅಷ್ಟೊತ್ತಿಗೆ ಟ್ರಾಫಿಕ್ ಸ್ವಲ್ಪ ನಿಯಂತ್ರಣಕ್ಕೆ ಬಂದಿತ್ತು.

English summary
Traffic Police Allowed Parking in MG Road on trial basis for 4 days. to study whether it would affect regular vehicle movement on the stretch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X