• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಧರ್ಮರಾಯನ ಕರಗ ಬರುತ್ತಿದೆ, ದಾರಿ ಬಿಡಿ

|
Google Oneindia Kannada News

ಬೆಂಗಳೂರು, ಏ.2 : ಇತಿಹಾಸ ಪ್ರಸಿದ್ಧ ಶ್ರೀ ಧರ್ಮರಾಯನ ಕರಗಕ್ಕೆ ಬೆಂಗಳೂರು ಶೃಂಗಾರಗೊಳ್ಳುತ್ತಿದೆ. ಹತ್ತಾರು ವರ್ಷಗಳಿಂದ ನಡೆದು ಬಂದ ಸಂಪ್ರದಾಯದಂತೆ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಏ.3ರ ಶುಕ್ರವಾರ ಹೂವಿನ ಕರಗ ತಿಗಳರ ಪೇಟೆಯಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರಟು, ಸುತ್ತಮುತ್ತಲ ಪ್ರದೇಶಗಳಲ್ಲಿ 12 ಕಿ.ಮೀ. ಸಂಚರಿಸಿ ಶನಿವಾರ ವಾಪಸಾಗಲಿದೆ.

ಬೆಂಗಳೂರು ಕರಗದ ವೀಕ್ಷಣೆಗೆ ಬೆಂಗಳೂರಿಗರ ಜತೆಗೆ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದಲೂ ಭಕ್ತರು ಆಗಮಿಸುತ್ತಾರೆ. ಕರಗಕ್ಕೆ ಸಾವಿರಾರು ಜನರು ಆಗಮಿಸುವ ಹಿನ್ನಲೆಯಲ್ಲಿ ಸಂಚಾರಿ ಪೊಲೀಸರು ವಾಹನ ಸಂಚಾರದಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದಾರೆ. [ಏ.3 ಮೋದಿ ಸಮಾವೇಶ, ಮಾರ್ಗ ಬದಲಾವಣೆ]

* ಮಾರ್ಕೆಟ್ ಮುಂಭಾಗದ Down Ramp ಕಡೆ ವಾಹನ ಸಂಚಾರ ನಿಷೇಧಿಸಲಾಗಿದೆ. ಸಿರ್ಸಿ ವೃತ್ತದ ಕಡೆಯಿಂದ ಸಿಟಿ ಮಾರ್ಕೆಟ್ ಫ್ಲೈಓವರ್ ಮೂಲಕ ಅವೆನ್ಯೂ ರಸ್ತೆ ಕಡೆಗೆ ಆಗಮಿಸುವ ವಾಹನ ಸವಾರರು ಫ್ಲೈ ಓವರ್ ಮೇಲೆ ಬಂದು ಟೌನ್ ಹಾಲ್ ಬಳಿ ಯು ಟರ್ನ್ ತೆಗೆದುಕೊಂಡು ಎನ್.ಆರ್.ರಸ್ತೆ-ಸಿಟಿ ಮಾರ್ಕೆಟ್ ಬಲ ತಿರುವು ಪಡೆದು ಅವೆನ್ಯೂ ರಸ್ತೆ /ಎಸ್‌ಜೆಪಿ ರಸ್ತೆ ಕಡೆ ಹೋಗಬಹುದು.

* ಮೈಸೂರು ರಸ್ತೆಯ ಫ್ಲೈಓವರ್ ಕೆಳಗೆ ಬ್ರಿಯಾಂಡ್ ಸರ್ಕಲ್ ಕಡೆಯಿಂದ ಬಂದು ಸಿಟಿ ಮಾರ್ಕೆಟ್ ಫ್ಲೈ ಓವರ್ ಕೆಳ ರಸ್ತೆಯ ಮೂಲಕ ಎಸ್.ಜೆ.ಪಿ.ರಸ್ತೆ/ಟೌನ್‌ಹಾಲ್, ಮೆಜೆಸ್ಟಿಕ್ ಕಡೆ ಹೋಗುವ ವಾಹನಗಳು ಬ್ರಿಯಾಂಡ್ ಸರ್ಕಲ್-ರಾಯನ್ ಸರ್ಕಲ್-ಮಿಂಟೋ ಸರ್ಕಲ್-ಮಕ್ಕಳ ಕೂಟ-ಶಿವಶಂಕರ-ಬಸಪ್ಪ ಸರ್ಕಲ್-ಮಿನರ್ವ ಸರ್ಕಲ್-ಜೆ.ಸಿ.ರಸ್ತೆ ಕಡೆಯಿಂದ ಟೌನ್‌ ಹಾಲ್ ಮೆಜೆಸ್ಟಿಕ್ ಕಡೆಗೆ ಸಂಚರಿಸಬಹುದು.

* ಬೆಂಗಳೂರು ದಕ್ಷಿಣ-ಗಾಂಧಿ ಬಜಾರ್-ನ್ಯಾಷನಲ್ ಕಾಲೇಜು-ಕೆ.ಆರ್.ರಸ್ತೆ-ಮಾರ್ಕೆಟ್ ಸರ್ಕಲ್-ಎಸ್‌.ಜೆ.ಪಿ.ರಸ್ತೆ-ಟೌನ್‌ಹಾಲ್ ಮಾರ್ಗವಾಗಿ ಮೆಜೆಸ್ಟಿಕ್ ಕಡೆಗೆ ಹೋಗುವಂತಹ ವಾಹನಗಳು ನ್ಯಾಷನಲ್ ಕಾಲೇಜು-ಡಯಾಗನಲ್ ರಸ್ತೆ-ಸಜ್ಜನ್ ರಾವ್ ರಸ್ತೆ-ಮಿನರ್ವ ವೃತ್ತ-ಜೆ.ಸಿ.ರಸ್ತೆ-ಟೌನ್‌ಹಾಲ್-ಮೆಜೆಸ್ಟಿಲ್‌ ಕಡೆಗೆ ಸಂಚರಿಸಬಹುದು.

ಅಂದಹಾಗೆ ಏ.3ರ ಶುಕ್ರವಾರ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶ ನಡೆಯಲಿದೆ. ನಂತರ ಬೆಂಗಳೂರು ಕರಗ ಆರಂಭವಾಗುತ್ತದೆ. ಆದ್ದರಿಂದ ರಾಮಕೃಷ್ಣ ಆಶ್ರಮ, ಚಾಮರಾಜಪೇಟೆ, ಟೌನ್ ಹಾಲ್, ಮೈಸೂರು ಬ್ಯಾಂಕ್ ವೃತ್ತದ ಕಡೆ ಹೋಗುವುದನ್ನು ಆದಷ್ಟು ಕಡಿಮೆ ಮಾಡುವುದು ಉತ್ತಮ.

English summary
The Bengaluru city police diverted vehicle moments around K.R. Market due to the Karaga procession from April 3rd 2015 night to early hours of Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X