ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು : ಪುಲಿಕೇಶಿ ನಗರದಲ್ಲಿ ಸಂಚಾರ ಮಾರ್ಗ ಬದಲಾವಣೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 21 : ಸೋಮವಾರ ಪುಲಿಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 100ಕ್ಕೂ ಅಧಿಕ ಗಣೇಶ ಮೂರ್ತಿಗಳ ವಿಸರ್ಜನೆ ಮಾಡುವುದರಿಂದ ಸಂಚಾರ ಮಾರ್ಗಗಳಲ್ಲಿ ಬದಲಾವಣೆ ಮಾಡಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ ಮೆರವಣಿಗೆ ಮುಕ್ತಾಯವಾಗುವ ತನಕ ಈ ಬದಲಾವಣೆ ಜಾರಿಯಲ್ಲಿರುತ್ತದೆ.

ಗಣೇಶಮೂರ್ತಿಗಳ ವಿಸರ್ಜನಾ ಮೆರವಣಿಗೆ ಪುಲಿಕೇಶಿನಗರ, ಥಣಿಸಂದ್ರ, ನಾಗವಾರ ರಸ್ತೆ, ಪೆರಿಯಾರ್ ವೃತ್ತ, ಪಾಟರಿ ರಸ್ತೆ, ಎಂ.ಎಂ. ಸಿಂಧಿ ಕಾಲೋನಿ ಹಾಗೂ ಅಸಾಯ ರಸ್ತೆ ಮೂಲಕ ಹಾದು ಹೋಗಲಿದೆ. ಈ ಸಂದರ್ಭದಲ್ಲಿ ನೂರಾರು ಜನರು ಜಮಾಯಿಸುವುದರಿಂದ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. [ಶಾಸ್ತ್ರಬದ್ಧವಾಗಿ ಗಣಪತಿಯನ್ನು ವಿಸರ್ಜಿಸುವ ಕ್ರಮ]

traffic police

ಮಾರ್ಗ ಬದಲಾವಣೆ ವಿವರ ಹೀಗಿದೆ

* ರಿಂಗ್ ರಸ್ತೆ ಮೂಲಕ ನಾಗವಾರ ಜಂಕ್ಷನ್‌ನಿಂದ ನಾಗವಾರ ಕಡೆಗೆ ಹೋಗುವ ವಾಹನಗಳು, ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಹೆಣ್ಣೂರು ಕಡೆಗೆ ಹೋಗಬೇಕು. ಅಲ್ಲಿ ಬಲ ತಿರುವು ಪಡೆದು ಲಿಂಗರಾಜಪುರ ಮುಖ್ಯರಸ್ತೆ ಮತ್ತು ಡೇವಿಸ್ ರಸ್ತೆ ಮೂಲಕ ಶಿವಾಜಿನಗರ ಕಡೆ ಸಂಚರಿಸಬಹುದು. [ಚಿಕ್ಕಪೇಟೆ ಸಂಚಾರಿ ಪೊಲೀಸರ ಮಾನವೀಯತೆಗೆ ಸಲಾಂ]

* ನಾಗವಾರ ಕಡೆಯಿಂದ ಕೆ.ಜಿ. ಹಳ್ಳಿ ಕಡೆಗೆ ಹೋಗುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ನರೇಂದ್ರ ಟೆಂಟ್ ಬಳಿ ಎಡ ತಿರುವು ಪಡೆದು ಬಿಡಿಎ ಕಾಂಪ್ಲೆಕ್ಸ್‌, ಸಿದ್ಧಪ್ಪ ರೆಡ್ಡಿ ವೃತ್ತದ ಮೂಲಕ ಲಿಂಗರಾಜಪುರಕ್ಕೆ ಬಂದು ಮುಂದೆ ಸಾಗಬಹುದು.

* ನೇತಾಜಿ ರಸ್ತೆ ಮತ್ತು ಟ್ಯಾನರಿ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ನೇತಾಜಿ ವೃತ್ತದಿಂದ ವಾಹನ ಸವಾರರು ಎಂ.ಎಂ. ರಸ್ತೆ, ಮಾಸ್ಕ್ ರಸ್ತೆ, ಡೇವಿಸ್ ಮೂಲಕ ಲಿಂಗರಾಜಪುರ ತಲುಪಿ ಅಲ್ಲಿಂದ ನಾಗವಾರ, ಥಣಿ ಸಂದ್ರ ದತ್ತ ಮುಂದೆ ಸಾಗಬಹುದು.

English summary
Bengaluru traffic police have imposed traffic restrictions at Pulikeshi Nagar police station limits on Monday, September 21, 2015 in view of Ganesh idols immersion procession.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X