ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐತಿಹಾಸಿಕ ಕಡಲೆಕಾಯಿ ಪರಿಷೆ: ಸಂಚಾರ ಮಾರ್ಗ ಬದಲಾವಣೆ

|
Google Oneindia Kannada News

ಬೆಂಗಳೂರು, ನವೆಂಬರ್ 29: ಐತಿಹಾಸಿಕ ಕಡಲೆಕಾಯಿ ಪರಿಷೆ ನವೆಂಬರ್ 29ರಿಂದ ಡಿಸೆಂಬರ್ 1ರವರೆಗೆ ನಡೆಯಲಿದ್ದು, ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

ಕಾರ್ತಿಕ ಮಾಸದ ಕೊನೆ ಸೋಮವಾರದಂದು ನಡೆಯುವ ಕಡಲೆಕಾಯಿ ಪರಿಷೆ ಈ ಬಾರಿ ನವೆಂಬರ್ 29ರಿಂದ ಡಿಸೆಂಬರ್ 1ರ ವರೆಗೆ ಮೂರು ದಿನಗಳ ಕಾಲ ನಡೆಯಲಿದೆ.

ಹೀಗಾಗಿ ಬಸವನಗುಡಿ ಸುತ್ತಾಮುತ್ತಾ ಜಾತ್ರೆಯ ವಾತಾವರಣ ನಿರ್ಮಾಣವಾಗಿದೆ. ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತದಿಗಳು ದೊಡ್ಡ ಗಣೇಶ ಹಾಗೂ ದೊಡ್ಡ ಬಸವಣ್ಣನ ದೇವಸ್ಥಾನದಲ್ಲಿ ಕ್ಯೂ ನಿಂತಿರುವ ದೃಶ್ಯ ಕಂಡು ಬಂದಿದೆ. ಸದ್ಯ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಠಿಣ ಕ್ರಮ ಕೈಗೊಳ್ಳಲಾಗಿದೆ.

Traffic Curbs In Bengaluru For Kadlekai Parishe

ಬಣ್ಣ - ಬಣ್ಣದ ಆಟಿಕೆ, ರುಚಿ ರುಚಿಯಾದ ಬಡವರ ಬಾದಾಮಿ ಕಡಲೆ ಕಾಯಿ, ಲೈಟಿಂಗ್ ನಲ್ಲಿ ಕಂಗೊಳಿಸುವ ಜಾತ್ರೆ ತಿನ್ನಿಸುಗಳು ಹಾಗೂ ಕಲರ್ ಫುಲ್ ದುನಿಯಾ ಅನಾವರಣ. ಬಸವನಗುಡಿ ಸಂಪ್ರದಾಯಿಕ ಕಡಲೆ ಕಾಯಿ ಪರಿಷೆಯ ಪ್ರಯುಕ್ತ ಹಬ್ಬದ ವಾತಾವರಣ ಮನೆ ಮಾಡಿದೆ.

ಸಾವಿರಕ್ಕೂ ಹೆಚ್ಚು ಕಡಲೆ ಕಾಯಿ ಮಳಿಗೆಗಳು ಓಪನ್ ಆಗಿದ್ದು. 50 ರೂ.ಗೆ ಸೇರು ಮಾರಾಟವಾಗ್ತಿದೆ. ಭಾನುವಾರವಾದ ಇವತ್ತೇ ಪರಿಷೆ ಸಂಭ್ರಮ ಮನೆ ಮಾಡಿತ್ತು. ಕುಟುಂಬ ಸಮೇತರಾಗಿ ಬಂದು ಕೊರೋನಾ ನಿಯಮವನ್ನೇ ಮರೆತಿದ್ದಾರೆ.

ಮುಜರಾಯಿ ಇಲಾಖೆ ಹಾಗೂ ಬಿಬಿಎಂಪಿ ಸಹಯೋಗದೊಂದಿಗೆ ಕಡೆಲಕಾಯಿ ಪರಿಷೆ ಆಯೋಜನೆ ಮಾಡಲಾಗಿದೆ. ಸದ್ಯ ಕೊರೊನಾ ಪ್ರಕರಣ ಕಡಿಮೆ ಇರೋ ಕಾರಣ ಕಡಲೆಕಾಯಿ ಪರಿಷೆ ಆಯೋಜನೆ ಮಾಡಲಾಗಿದ್ದು, ವ್ಯಾಪಾರಿ ಮತ್ತು ಸಾರ್ವಜನಿಕರಿಗೆ ಕೊರೊನಾ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ.

ಈಗಾಗಲೇ ರಾಜ್ಯದ ವಿವಿಧ ಭಾಗಗಳಿಂದ, ಭಿನ್ನ ತಳಿಗಳ ಕಡಲೆಕಾಯಿ ತಂದು ಮಾರಾಟಕ್ಕೆ ಇರಿಸಲಾಗಿದೆ. ಸಾವಿರಾರು ವ್ಯಾಪಾರಿಗಳು, ರೈತರಿಂದ ಕಡಲೆಕಾಯಿ ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ.

ಇಂದಿನಿಂದ ಐದು ದಿನಗಳ ಕಾಲ ನಡೆಯಲಿರುವ ಕಡಲೆಕಾಯಿ ಪರಿಷೆಯಲ್ಲಿ ಬೇಸಿದ ಕಳಲೆಕಾಯಿ, ಹಸಿ ಕಲಡಲೆಕಾಯಿ, ಉರಿ ಕಡಲೆಕಾಯಿ ಸೇರಿದಂತೆ ಹೊಸ ಹೊಸ ಬಗೆಯ ಬಡವರ ಬದಾಮಿ ಸಿಗಲಿದೆ.

ಬೆಳಗ್ಗೆಯಿಂದಲೇ ಕಡಲೆಕಾಯಿ ಪರಿಷೆಯತ್ತ ಜನರು ಆಗಮಿಸುತ್ತಿದ್ದಾರೆ. ಬೆಳ್ಳಂಬೆಳಗ್ಗೆಯೇ ಗಣಪತಿ ದರ್ಶನದ ಜೊತೆ ಕಡಲೆಕಾಯಿಯನ್ನು ಸಿಲಿಕಾನ್ ಸಿಟಿ ಜನರು ಸವಿಯುತ್ತಿದ್ದಾರೆ.

ಸದ್ಯ ಒಮಿಕ್ರೋನ್ ರೂಪಾಂತರಿ ತಳಿ ರಾಜ್ಯದಲ್ಲಿ ಆತಂಕ ಹೆಚ್ಚಿಸಿದೆ. ದೇಶದಲ್ಲಿ ಇದುವರೆಗೂ ಈ ಹೊಸ ತಳಿಯ ಕೇಸ್ ಪತ್ತೆಯಾಗದೇ ಇದ್ರೂ, ಈ ರೂಪಾಂತರಿಯ ಕ್ರೌರ್ಯಕ್ಕೆ ಜಗತ್ತೆ ಬೆಚ್ಚಿ ಬಿದ್ದಿದೆ. ಹೀಗಾಗಿ ದೇವಾಸ್ಥಾನಕ್ಕೆ ಬರುವ ಪ್ರತಿಯೊಬ್ಬರಿಗೂ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಮಾಡಲಾಗಿದೆ. ಜಾತ್ರೆ ನಡೆಯುವ ಸ್ಥಳದಲ್ಲಿಯೇ ಟೆಸ್ಟಿಂಗ್ ಸೆಂಟರ್ ಹಾಗೂ ವ್ಯಾಕ್ಸಿನೇಷನ್‌ ನೀಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಸದ್ಯ ಕಡಿಲೆಕಾಯಿ ಪರಿಷೆ ಸಿದ್ದತೆ ಬಗ್ಗೆ ವಿಶೇಷ ಆಯುಕ್ತೆ ತುಳುಸಿ ಪರಿಶೀಲನೆ ನಡೆಸಿದ್ದಾರೆ. ಎಷ್ಟು ಕಡೆ ವ್ಯಾಕ್ಸಿನ್ ಸೆಂಟರ್​ಗಳಿವೆ, ಎಷ್ಟು ಶೌಚಾಲಯಗಳಿವೆ, ಎಷ್ಟು ಜನ ವ್ಯಾಪಾರಸ್ಥರಿದ್ದಾರೆ, ಮುಜುರಾಯಿ ಇಲಾಖೆಯಿಂದ ಏನೆಲ್ಲ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎನ್ನುವ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಲಾಲ್‌ ಬಾಗ್‌ ವೆಸ್ಟ್‌ಗೇಟ್‌ ಕಡೆಯಿಂದ ಹನುಮಂತನಗರ ಕಡೆಗೆ ಸಂಚರಿಸುವ ವಾಹನಗಳು ಬಸವನಗುಡಿ ರಸ್ತೆಯ ರಾಮಕೃಷ್ಣ ಆಶ್ರಮ ಬಳಿ ಬಲ ತಿರುವು ಪಡೆದು ಹಯವದನ ರಾವ್‌ ರಸ್ತೆಯಲ್ಲಿ ಸಾಗಿ ಗವಿಪುರದ 3ನೇ ಅಡ್ಡರಸ್ತೆಯಲ್ಲಿ ಸಾಗಿ ಮೌಂಟ್‌ಜಾಯ್‌ ರಸ್ತೆಯಲ್ಲಿ ಹನುಮಂತನಗರ ಕಡೆಗೆ ತೆರಳಬೇಕು.

ಆರ್‌.ವಿ. ಟೀಚರ್ಸ್ ಕಾಲೇಜ್‌ ಜಂಕ್ಷನ್‌ ಕಡೆಯಿಂದ ಹನುಮಂತನಗರ ಕಡೆಗೆ ಬರುವ ವಾಹನಗಳು ಠ್ಯಾಗೋರ್‌ ಸರ್ಕಲ್‌ನಲ್ಲಿ ಬಲ ತಿರುವು ಪಡೆದು ಗಾಂಧಿ ಬಜಾರ್‌ ಮುಖ್ಯರಸ್ತೆ ಮೂಲಕ ಆಶ್ರಮ ಜಂಕ್ಷನ್‌, ಹಯವದನ ರಾವ್‌ ರಸ್ತೆಯಲ್ಲಿ ಸಂಚರಿಸಿ ಗವಿಪುರದ 3ನೇ ಅಡ್ಡರಸ್ತೆಯಲ್ಲಿ ಸಾಗಿ ಮೌಂಟ್‌ಜಾಯ್‌ ರಸ್ತೆಯಲ್ಲಿ ಹನುಮಂತನಗರ ಕಡೆಗೆ ಹೋಗಬೇಕು.

ತ್ಯಾಗರಾಜನಗರ ಮತ್ತು ಬನಶಂಕರಿ ಕಡೆಯಿಂದ ಚಾಮರಾಜಪೇಟೆ ಕಡೆಗೆ ಬರುವ ವಾಹನಗಳು ಬಸವನಗುಡಿ ರಸ್ತೆಯ ಕಾಮತ್‌ ಯಾತ್ರಿ ನಿವಾಸ ಜಂಕ್ಷನ್‌ನಲ್ಲಿಎಡತಿರುವು ಪಡೆದು ಅಶೋಕನಗರ 2ನೇ ಕ್ರಾಸ್‌ ಮೂಲಕ ಕತ್ರಿಗುಪ್ಪೆ ರಸ್ತೆಯ ಜಂಕ್ಷನ್‌ನಲ್ಲಿಬಲ ತಿರುವು ಪಡೆದು 3ನೇ ಮುಖ್ಯರಸ್ತೆಯ ನಾರಾಯಣಸ್ವಾಮಿ ಸರ್ಕಲ್‌ನಲ್ಲಿಕೆ.ಜಿ.ನಗರ ಮುಖ್ಯರಸ್ತೆ ಕಡೆಗೆ ಸಾಗಿ ಹಯವದನ ರಾವ್‌ ರಸ್ತೆ, ರಾಮಕೃಷ್ಣ ಆಶ್ರಮದ ಮೂಲಕ ಚಾಮರಾಜಪೇಟೆ ಪೇಟೆ ಕಡೆಗೆ ತೆರಳಬಹುದು ಎಂದು ಬಸವನಗುಡಿ ಸಂಚಾರ ಪೊಲೀಸರು ತಿಳಿಸಿದ್ದಾರೆ.

Recommended Video

Revanna ರೈತರ ಕಷ್ಟಗಳನ್ನು ಪರಿಶೀಲಸಿದ ವಿಶೇಷ ಕ್ಷಣಗಳು | Oneindia Kannada

English summary
With the annual groundnut fair Kadlekai Parishe set to begin on Bull Temple Road on Monday, the following traffic diversions will remain in force around Basavanagudi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X