• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಮ್ಮ ಮೆಟ್ರೋ ಕಾಮಗಾರಿ, ಜಯದೇವ ಸರ್ವೀಸ್ ರಸ್ತೆ ಬಂದ್

|

ಬೆಂಗಳೂರು, ಜನವರಿ 4: ಬೆಂಗಳೂರು ಮೆಟ್ರೋ ನಿಗಮ ಜಯದೇವ ಆಸ್ಪತ್ರೆ ಬಳಿ ಗೊಟ್ಟಿಗೆರೆ-ನಾಗವಾರ ಮೆಟ್ರೋ ಮಾರ್ಗ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಸಿಲ್ಕ್‌ಬೋರ್ಡ್‌ನಿಂದ ಜಯದೇವ ಕಡೆಗೆ ಇರುವ ಸರ್ವೀಸ್ ರಸ್ತೆಯನ್ನು ಮುಚ್ಚಲಾಗಿದ್ದು ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.

ಜಯದೇವ ಜಂಕ್ಷನ್‌ನಲ್ಲಿ ಗೊಟ್ಟಿಗೆರೆ-ನಾಗವಾರ ಮೆಟ್ರೋ ಮಾರ್ಗದ ಎತ್ತರಿಸಿದ ಮಾರ್ಗ ನಿರ್ಮಾಣ ಕಾಮಗಾರಿ ಆರಂಭವಾಗಿರುವುದರಿಂದ ಸಿಲ್ಕ್‌ಬೋರ್ಡ್‌ ನಿಂದ ಜೇಡಿಮರ ಜಂಕ್ಷನ್ ಗೆ ತೆರಳುವ ವಾಹನ ಚಾಲಕರು ಪರ್ಯಾಯ ಮಾರ್ಗ ಅನುಸರಿಸುವಂತೆ ಸೂಚಿಸಲಾಗಿದೆ.

ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ ಮೇಲೆ ಭಾರಿ ವಾಹನಗಳ ಸಂಚಾರ ನಿಷೇಧ

ಸಿಲ್ಕ್‌ಬೋರ್ಡ್‌ನಿಂದ ಜಯದೇವ ಕಡೆಗೆ ಸಂಚರಿಸುವ ವಾಹನಗಳು ಹೊರ ವರ್ತುಲ ರಸ್ತೆಯಲ್ಲಿ ಬಿಟಿಎಂ ವೃತ್ತದಲ್ಲಿ ಎಡಕ್ಕೆ ತಿರುಗಿ 16ನೇ ಮುಖ್ಯರಸ್ತೆಯಲ್ಲಿ ಸಂಚರಿಸಬೇಕು. ನಂತರ ಸುಮಾರು 100-200 ಮೀ ಮುಂದೆ ಬಲಕ್ಕೆ ತೆರುಗಿ 7ನೇ ಅಡ್ಡರಸ್ತೆಯಲ್ಲಿ ಸಾಗಿ, ಗೋಪಾಲನ್ ಮಾಲ್ ಮಾರ್ಗವಾಗಿ ಬನ್ನೇರುಘಟ್ಟ ರಸ್ತೆಗೆ ತೆರಳಿ ಅಲ್ಲಿಂದ ಜೇಡಿಮರಕ್ಕೆ ತೆರಳಬಹುದು ಎಂದು ಬಿಎಂಆರ್‌ಸಿಎಲ್ ಸೂಚಿಸಿದೆ.

English summary
Traffic is being regulated near Jayadeva Hospital junction with the Bangalore Metro Rail Corporation Limited (BMRCL) beginning viaduct construction work as part of Metro’s elevated Reach 6 (Gottigere-Dairy Circle).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X