ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನವೆಂಬರ್ 25ರಿಂದ ಬಸವನಗುಡಿಯಲ್ಲಿ ಸಾಂಪ್ರದಾಯಿಕ ಕಡಲೆಕಾಯಿ ಪರಿಷೆ

|
Google Oneindia Kannada News

ಬೆಂಗಳೂರು, ನವೆಂಬರ್ 12: ಪ್ರತಿ ವರ್ಷ ಕಾರ್ತಿಕ ಸೋಮವಾರದಿಂದ ಆರಂಭಗೊಂಡು ಮೂರು ದಿನಗಳ ಕಾಲ ನಡೆಯುವ ಕಡೆಲೆಕಾಯಿ ಪರಿಷೆಗೆ ಬಸವನಗುಡಿಯಲ್ಲಿ ಸಿದ್ಧತೆ ಆರಂಭವಾಗಿದೆ.

ನವೆಂಬರ್ 25ರಿಂದ ಮೂರು ದಿನಗಳ ಕಾಲ ಪರಿಷೆ ನಡೆಯಲಿದೆ. ತುಮಕೂರು, ದೊಡ್ಡಬಳ್ಳಾಪುರ, ಗೌರಿಬಿದನೂರು, ಮಾಗಡಿ, ಕನಕಪುರ, ಕೋಲಾರ,ರಾಮನಗರ, ಚಿಕ್ಕಬಳ್ಳಾಪುರದಿಂದ ಕಡಲೆಕಾಯಿ ಬೆಂಗಳೂರಿಗೆ ಆಗಮಿಸಲಿದೆ.

ಡಿ.3ರಿಂದ ಸಾಂಪ್ರದಾಯಿಕ ಬಸವನಗುಡಿ ಕಡಲೆಕಾಯಿ ಪರಿಷೆಡಿ.3ರಿಂದ ಸಾಂಪ್ರದಾಯಿಕ ಬಸವನಗುಡಿ ಕಡಲೆಕಾಯಿ ಪರಿಷೆ

ಕಡಲೆಕಾಯಿ ಸಾಕಷ್ಟು ವರ್ಷಗಳಿಂದ ನಡೆಯುತ್ತಿರುವ ಕಾರಣ ಉಪ ಚುನಾವಣೆಯ ನೀತಿ ಸಂಹಿತೆಯ ಅಡ್ಡಿ ಇಲ್ಲ.ಪರಿಷೆ ಸಿದ್ಧತೆಗಳ ಬಗ್ಗೆ ಈ ವಾರಾಂತ್ಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗುತ್ತದೆ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚು ನಡೆಯಲಿವೆ ಎಂದು ಶಾಸಕ ಎಲ್.ಎ. ರವಿಸುಬ್ರಹ್ಮಣ್ಯ ತಿಳಿಸಿದ್ದಾರೆ.

Traditional Basavanagudi Kadalekai Parishe From November 25

ಪರಿಷೆಯಲ್ಲಿ 2 ಸಾವಿರಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. ಕಳೆದ ವರ್ಷ ಏಳು ಲಕ್ಷ ಮಂದಿ ಭೇಟಿ ನೀಡಿರುವುದಾಗಿ ತಿಳಿಸಿದ್ದಾರೆ.ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಒಳ್ಳೆಯ ಕಡೆಲೆಕಾಯಿ ಪರಿಷೆಗೆ ಬರುವ ಸಾಧ್ಯತೆ ಇದೆ.

ಅಂದು ದೊಡ್ಡ ಗಣಪತಿ ಹಾಗೂ ಬಸವಣ್ಣನ ದರ್ಶನಕ್ಕೆ ಬರುವ ಭಕ್ತಾದಿಗಳೆಲ್ಲ ಕಡಲೆಕಾಯಿಯನ್ನು ಪ್ರಸಾದವಾಗಿ ನೀಡಲಾಗುತ್ತದೆ. ಪರಿಷೆಗೆ ಜನರನ್ನು ಆಕರ್ಷಿಸಲು ಉಯ್ಯಾಲೆ, ರಾಟೆ ಜೋಣೆ ನಡೆದಿದೆ.

ಮಕ್ಕಳ ಆಟದ ಸಾಮಗ್ರಿಗಳು, ಮನೆ ಹಾಗೂ ಮಹಿಳೆಯರ ಅಲಂಕಾರಿಕ ವಸ್ತುಗಳು, ಕಡಲೆಕಾಯಿ ವ್ಯಾಪಾರಿಗಳು ದೇವಸ್ಥಾನದೆಡೆಗೆನ ಪಾದಚಾರಿ ಮಾರ್ಗಗಳಲ್ಲಿ ಬೀಡುಬಿಟ್ಟಿದ್ದಾರೆ.

English summary
Traditional Basavanagudi Kadalekai Parishe From November 25,Traditional festival of Bengaluru, Basavanagudi Kadalekai Pareeshe, a celebration of selling and buying ground nut will be celebrated on November 25.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X