ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಸ ಸಂಗ್ರಹಿಸುವ ವಾಹನಗಳ ಟ್ರ್ಯಾಕ್ ಮಾಡಲು ಬಿಬಿಎಂಪಿಯಿಂದ ಹೊಸ ಆ್ಯಪ್ ಅಭಿವೃದ್ಧಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 7: ಕಸ ಸಂಗ್ರಹಿಸುವ ವಾಹನಗಳ ಮೇಲೆ ನಿಗಾ ಇರಿಸಲು ಬಿಬಿಎಂಪಿಯು ಅಪ್ಲಿಕೇಷನ್ ಒಂದನ್ನು ಅಭಿವೃದ್ಧಿ ಮಾಡಿದೆ.

ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣಾ ವಿಭಾಗವು ಕಳೆದ ಮೂರು ವರ್ಷಗಳಿಂದ ಜಿಪಿಎಸ್ ಬಳಸಿ ಕಸದ ವಾಹನಗಳನ್ನು ಟ್ರ್ಯಾಕ್ ಮಾಡುವ ಕೆಲಸ ಮಾಡುತ್ತಿದೆ. ಆದರೆ ಹಲವಾರು ಸಮಸ್ಯೆಗಳಿಂದಾಗಿ ಸಂಪೂರ್ಣ ಯಶಸ್ಸು ಸಾಧಿಸಲು ಸಾಧ್ಯವಾಗಲಿಲ್ಲ.

ಜಿಪಿಎಸ್ ಅನ್ನು ಸರಿಪಡಿಸಲಾಗಿದೆ, ಆದರೆ ವ್ಯವಸ್ಥೆಯಲ್ಲಿ ದೋಷಗಳಿವೆ ಎಂದು ಬಿಬಿಎಂಪಿ ಜಂಟಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್ ಖಾನ್ ತಿಳಿಸಿದ್ದಾರೆ.

Track Garbage Vehicles: BBMP Comes Up With Application

ಕೆಲವು ವಾಹನಗಳಲ್ಲಿ ಮೊದಲು ಪ್ರಾಯೋಗಿಕವಾಗಿ ಆ್ಯಪ್ ಅಳವಡಿಸಲಾಗುತ್ತದೆ. ಯಾವುದೇ ಕಡೆಕ್ಕೆ ಹೊರಡುವ ಮೊದಲು ಪ್ರತಿ ವಾಹನಕ್ಕೂ ಆ್ಯಪ್ ಬಳಕೆ ಮಾಡುವುದು ಕಡ್ಡಾಯಗೊಳಿಸಲಾಗುತ್ತಿದೆ. ಜಿಪಿಎಸ್‌ನಂತೆಯೇ, ಆ್ಯಪ್ ವಾಹನಗಳ ಚಲನವಲನಗಳು, ಕಸವನ್ನು ಎಲ್ಲಿ ಸಂಗ್ರಹಿಸಲಾಗುತ್ತಿದೆ ಮತ್ತು ಯಾವುದೇ ವಿಳಂಬವಿದ್ದಲ್ಲಿ ಮತ್ತು ಸ್ಥಗಿತಗಳ ವಿವರಗಳನ್ನು ಗಮನಿಸುತ್ತದೆ.

ಕಸ ಸಂಗ್ರಹಣೆಯ ವಿವರಗಳನ್ನು ತಿಳಿಯಲು ಪ್ರತಿ ಚಲನವಲನವನ್ನು ಬ್ಲಾಕ್-ಬ್ಲಾಕ್ ಮೂಲಕ ಟ್ರ್ಯಾಕ್ ಮಾಡಲಾಗುವುದು. ಕಸ ಸಂಗ್ರಹಣೆಯಲ್ಲಿ ತೊಡಗಿರುವವರಿಗೆ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್‌ಎಫ್‌ಐಡಿ) ಕಾರ್ಡ್ ಪರಿಶೀಲನೆಯನ್ನೂ ಕಡ್ಡಾಯವಾಗಿ ಮಾಡಲಾಗುವುದು.

Recommended Video

Virat Kohli ಹಾಗು Rohit Sharma ಒಟ್ಟಾಗಿ ಕುಣಿದು ಕುಪ್ಪಳಿಸಿದ್ದೇಕೆ | Oneindia Kannada

ಬಿಬಿಎಂಪಿ ದಾಖಲೆಗಳ ಪ್ರಕಾರ ಬೆಂಗಳೂರಿನಲ್ಲಿ 5,500 ಆಟೋ ಟಿಪ್ಪರ್‌ಗಳು ಮತ್ತು 600 ಕಾಂಪ್ಯಾಕ್ಟರ್‌ಗಳಿವೆ. ಬಿಬಿಎಂಪಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದ ಕಾರಣ ನಗರದ ಹಲವೆಡೆ ಅಸಮರ್ಪಕ ಕಸ ಸಂಗ್ರಹ, ಬ್ಲಾಕ್ ಸ್ಪಾಟ್, ಹೊರಗುತ್ತಿಗೆ ಗುತ್ತಿಗೆದಾರರ ಕಿರುಕುಳದ ಬಗ್ಗೆ ಅನೇಕ ನಾಗರಿಕರು ದೂರು ನೀಡುತ್ತಿರುವುದರಿಂದ ಇಂತಹ ಟ್ರ್ಯಾಕಿಂಗ್ ಅಗತ್ಯವಿದೆ.

English summary
As enabling GPS on garbage collection vehicles and tracking them has become a challenge for the Bruhat Bengaluru Mahangara Palike (BBMP) officials due to several technical and logistical reasons, the civic body is now working on launching an app to track such vehicles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X