ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾ.24ರಿಂದ ಟೊಯೋಟಾ ಪುನರಾರಂಭ

|
Google Oneindia Kannada News

ರಾಮನಗರ, ಮಾ. 21 : ಬಿಡದಿಯ ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಮತ್ತು ಕಾರ್ಮಿಕರ ನಡುವಿನ ವಿವಾದ ಬಗೆಹರಿದಿದ್ದು, ಮಾ.24ರಿಂದ ಲಾಕೌಟ್ ತೆರವುಗೊಳಿಸುವುದಾಗಿ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಅಂದಿನಿಂದಲೇ ಕಾರ್ಮಿಕರು ಕೆಲಸಕ್ಕೆ ಹಾಜರಾಗಬಹುದು ಎಂದು ಕಂಪನಿ ಸ್ಪಷ್ಟಪಡಿಸಿದೆ.

ಗುರುವಾರ ಕಾರ್ಮಿಕರ ಗುಂಪು, ಕಾರ್ಮಿಕ ಇಲಾಖೆ ಅಧಿಕಾರಿಗಳ ಜೊತೆ ಆಡಳಿತ ಮಂಡಳಿ ಸಭೆ ನಡೆಯಿತು. ಸಂಧಾನ ಸಭೆಯಲ್ಲಿ ಆಡಳಿತ ಮಂಡಳಿ ಕಾರ್ಮಿಕರ ವೇತನವನ್ನು 3100ಕ್ಕೆ ಹೆಚ್ಚಿಸಲು ಒಪ್ಪಿಗೆ ನೀಡಿದೆ. ಈ ವೇತನ ಹೆಚ್ಚಳವನ್ನು ಒಪ್ಪಿಕೊಂಡು ಕೆಲಸಕ್ಕೆ ಆಗಮಿಸುವವರು ಹಾಜರಾಗಬಹುದು ಎಂದು ಕಂಪನಿ ಹೇಳಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

Toyota

ಕಂಪನಿಗೆ ಹಾಕಿರುವ ಲಾಕೌಟ್ ಅನ್ನು ಮಾ.24ರಿಂದ ತೆರವುಗೊಳಿಸಲಾಗುತ್ತದೆ. ಅಂದು ಎಲ್ಲಾ ಕಾರ್ಮಿಕರು ಉತ್ತಮ ನಡವಳಿಕೆ ಕುರಿತು ಮುಚ್ಚಳಿಕೆಯೊಂದಕ್ಕೆ ಸಹಿ ಹಾಕಿದ ನಂತರ ಕೆಲಸಕ್ಕೆ ಹಾಜರಾಗಬೇಕು ಎಂದು ಕಂಪನಿ ತಿಳಿಸಿದೆ. ಕಂಪನಿಯ ವೇತನ ಪರಿಷ್ಕರಣೆ ನೀತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಕಾರ್ಮಿಕರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. [ಟೊಯೋಟಾ ಎರಡು ಘಕಟ ಲಕೌಟ್]

ಕಾರ್ಮಿಕರ ಪ್ರತಿಭಟನೆ : ಗುರುವಾರ ಬೆಳಗ್ಗೆ ಲಾಕೌಟ್ ಘೋಷಿಸಿರುವುದನ್ನು ವಿರೋಧಿಸಿ ಕಂಪನಿಯ ಸುಮಾರು 4 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕಂಪನಿ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಮಿಕರು ಬೇಡಿಕೆ ಈಡೇರಿಸಬೇಕು ಮತ್ತು ಲಾಕೌಟ್ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ಬಿಡದಿಯ ಟೊಯೋಟಾ ಕಿರ್ಲೊಸ್ಕರ್ ಮೋಟರ್ಸ್ ಎರಡು ಘಟಕ ಗಳನ್ನು ಲಾಕೌಟ್ ಎಂದು ಮಾರ್ಚ್ 16ರ ಭಾನುವಾರ ಘೋಷಿಸಿತ್ತು. ವೇತನ ಪರಿಷ್ಕರಣೆ ವಿಚಾರದಲ್ಲಿ ಆಡಳಿತ ಮಂಡಳಿ ಮತ್ತು ನೌಕರರ ನಡುವೆ ನಡೆದ ಮಾತುಕತೆ ಮುರಿದು ಬಿದ್ದ ಹಿನ್ನೆಲೆಯಲ್ಲಿ ಲಕೌಟ್ ಘೋಷಿಸಲಾಗಿತ್ತು.

ಟೊಯೋಟಾ ಕಿರ್ಲೋಸ್ಕರ್ ನ ಎರಡು ಘಟಕಗಳು ಬಿಡದಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿ ವರ್ಷ ಸುಮಾರು 3,10,000 ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ. ಲಾಕೌಟ್ ನಿಂದಾಗಿ ಸುಮಾರು 5 ಸಾವಿರಕ್ಕೂ ಅಧಿಕ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದರು.

English summary
Toyota Kirloskar Motor Private Ltd. on Thursday, March 20 agreed to lift the lockout at two plants in Bidadi on the outskirts of Bangalore. In press release company said, team members are welcome to resume work with effect from Monday, March 24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X