ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತೆ ಯಥಾಸ್ಥಿತಿಯತ್ತ ಪ್ರವಾಸೋದ್ಯಮ: ಕೇಂದ್ರ ಸಚಿವರಿಂದ ಮಾಹಿತಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 28: ದೇಶದಲ್ಲಿ ಕೊರೊನಾ ಹರಡುವುದನ್ನು ತಡೆಗಟ್ಟಲು ಪ್ರವಾಸೋದ್ಯಮಕ್ಕೆ ಹಲವಾರು ನಿರ್ಬಂಧಗಳನ್ನು ಹೇರಲಾಗಿದೆ. ಹಲವಾರು ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಕೊರೊನಾ ಪ್ರಕರಣಗಳು ಹೆಚ್ಚಿರುವ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಲಾಗಿತ್ತು. ಆದರೀಗ ಕೊರೊನಾ ಪ್ರಕರಣಗಳು ದಿನಕಳೆದಂತೆ ಇಳಿಮುಖವಾಗುತ್ತಿರುವುದರಿಂದ ಪ್ರವಾಸೋದ್ಯಮ ಮತ್ತೆ ಆರಂಭಿಸಲು ಚಿಂತನೆ ನಡೆದಿದೆ.

ಇಂದು ಖಾಸಗಿ ಹೊಟೇಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ ಅವರು,"ಕೊರೊನಾ ಹಿನ್ನೆಲೆಯಲ್ಲಿ ಕಮರ್ಷಿಯಲ್ ಮತ್ತು ಡೊಮೆಸ್ಟಿಕ್ ಪ್ರವಾಸೋದ್ಯಮ ನಿಂತು ಹೊಗಿತ್ತು. ಈಗ ಮತ್ತೆ ಆರಂಭ‌ ಮಾಡಲು ಪ್ರಯತ್ನ ನಡೆಸಿದ್ದೇವೆ. ಪ್ರವಾಸೋದ್ಯಮ ಅಡಿಯಲ್ಲಿ ಬರುವ ಸೆಕ್ಟರ್ ಜೊತೆ ಮಾತನಾಡಿದ್ದೇವೆ. ಸಾರಿಗೆ ಇಲಾಖೆಗಳ ಜೊತೆ ಮೀಟಿಂಗ್ ‌ಮಾಡಿದ್ದೇವೆ" ಎಂದು ಹೇಳಿದರು.

ಯಥಾಸ್ಥಿತಿಯತ್ತ ಪ್ರವಾಸೋದ್ಯಮ

ಯಥಾಸ್ಥಿತಿಯತ್ತ ಪ್ರವಾಸೋದ್ಯಮ

ಮುಂದುವರೆದು ಮಾತನಾಡಿದ ಸಚಿವ ಕಿಶನ್ ರೆಡ್ಡಿ, "ಮತ್ತೆ ಪ್ರವಾಸೋದ್ಯಮ ಯಥಾಸ್ಥಿತಿಗೆ ಬರಬೇಕು. ಆ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದೇವೆ. ಕೊರೊನಾ ಲಸಿಕೆ ಪೂರ್ಣ ಪ್ರಮಾಣದಲ್ಲಿ ಆಗಬೇಕು. ಹಾಗಾಗಿ ಈಗ ಒಂದೊಂದೇ ಭಾಗದಲ್ಲಿ ಪ್ರವಾಸೋದ್ಯಮ ಆರಂಭಿಸುತ್ತಿದ್ದೇವೆ. ಈಶಾನ್ಯ ರಾಜ್ಯಗಳ ಜೊತೆ ಮೀಟಿಂಗ್ ‌ಮಾಡಿದ್ದೆವು. ಈಗ ದಕ್ಷಿಣ ಭಾರತ ರಾಜ್ಯಗಳ ಮೀಟಿಂಗ್ ಮಾಡಿದ್ದೇವೆ. ಎಂಟು ರಾಜ್ಯದ ಸಚಿವರು ಅಧಿಕಾರಿಗಳು ಭಾಗವಹಿಸಿದ್ದಾರೆ. ನಾಳೆ ಕೂಡ ಎಲ್ಲ ಸೇರಿ ಚರ್ಚೆ ಮಾಡುತ್ತೇವೆ. ಪ್ರವಾಸೋದ್ಯಮದಲ್ಲಿ ಆರೋಗ್ಯಕರ ಪೈಪೋಟಿ ಇರಬೇಕು. ಈ ಹಿನ್ನೆಲೆಯಲ್ಲಿ ಕುಂದು‌ ಕೊರತೆಗೆಳ ಬಗ್ಗೆ ಚರ್ಚೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪ್ರವಾಸೋದ್ಯಮ ಸ್ಪರ್ಧೆ ಆಯೋಜನೆ ಮಾಡುತ್ತೇವೆ. ಈ ಬಗ್ಗೆ ಪ್ರಧಾನಿಗಳ ಜೊತೆ ಮಾತನಾಡುತ್ತೇನೆ" ಎಂದಿದ್ದಾರೆ.

ಪ್ರವಾಸೋದ್ಯಮ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ ವಿಚಾರ

ಪ್ರವಾಸೋದ್ಯಮ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ ವಿಚಾರ

ಪ್ರವಾಸೋದ್ಯಮ ಇಲಾಖೆ ಕಾರ್ಯಕ್ರಮದಲ್ಲಿ ಕನ್ನಡ ಮಾಯ ವಿಚಾರವಾಗಿ ಮಾತನಾಡಿದ ಅವರು ಕೇಂದ್ರ ಸಚಿವ ಕಿಶನ್ ರೆಡ್ಡಿ ಮೊದಲು ಉಡಾಫೆ ಉತ್ತರ ಕೊಟ್ಟಿದ್ದಾರೆ. ನಂತರ ತಪ್ಪೊಪ್ಪಿಕೊಂಡ ಕಿಶನ್ ರೆಡ್ಡಿ ಕೇಂದ್ರ ಸರ್ಕಾರ ಪ್ರವಾಸೋದ್ಯಮ ಇಲಾಖೆ ಕಾರ್ಯಕ್ರಮ ಕರ್ನಾಟಕದಲ್ಲಿ ಮಾಡುತ್ತಿದೆ. ಹಾಗಾಗಿ ಕನ್ನಡ ಬಳಕೆಯ ಅಗತ್ಯ ಇಲ್ಲ‌ ಎಂದರು. ಮಾಧ್ಯಮಗಳಿಂದ ತರಾಟೆ ಬಳಿಕ ತಪ್ಪಾಗಿದೆ ಎಂದು ಒಪ್ಪಿಕೊಂಡ ಅವರು, ಕಾರ್ಯಕ್ರಮದಲ್ಲಿ ಕನ್ನಡ ಬಳಕೆ ಮಾಡ್ತೇವೆ ಎಂದು ಭರವಸೆ ಕೊಟ್ಟರು.

ಕನ್ನಡ ಕಡೆಗಣನೆ ಖಂಡಿಸಿದ ಆನಂದ ಸಿಂಗ್

ಕನ್ನಡ ಕಡೆಗಣನೆ ಖಂಡಿಸಿದ ಆನಂದ ಸಿಂಗ್

ಈ ವೇಳೆ ಮಾತನಾಡಿದ ಸಚಿವ ಆನಂದ ಸಿಂಗ್, ಇದು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಹಾಗಾಗಿ ಅಧಿಕಾರಿಗಳು ಲೋಪ ಮಾಡಿದ್ದಾರೆ. ನನ್ನ ಗಮನಕ್ಕೆ ಬಂದ ತಕ್ಷಣ ಅದನ್ನು ಬಗೆ ಹರಿಸಿದ್ದೇನೆ. ಡಿಜಿಟಲ್ ಇದ್ದ ಬೋರ್ಡ್ ಬದಲಾವಣೆ ಮಾಡಿದ್ದೇವೆ. ಈಗ ಬ್ಯಾನರ್ ಕೂಡ ಬದಲಾವಣೆ ಮಾಡುತ್ತಿದ್ದೇವೆ. ಹಾಗಾಗಿ ಕನ್ನಡ ಕಡೆ ಗಣನೆ ಮಾಡಿಲ್ಲ. ಸಣ್ಣ ತಪ್ಪಿನಿಂದ ಇದಾಗಿದೆ ಎಂದು ಸಮರ್ಥನೆ ಮಾಡಿಕೊಂಡರು. ಬ್ಯಾನರ್ ಹಾಕದಿರುವುದು ನನ್ನ ಗಮನಕ್ಕೆ ಬಂತು. ನಮ್ಮ ಭಾಷೆ ಕಡಗಣನೆ ಆಗಿದೆ. ಭಾರತದ ಸರ್ಕಾರದ ಅಧಿಕಾರಿಗೆ ತಕ್ಷಣ ಗಮನಕ್ಕೆ ತಂದೆ. ತಪ್ಪಾಗಿದೆ ಎಂದು ಅಧಿಕಾರಿಗಳು ಹೇಳಿದ್ರು. ತಕ್ಷಣವೇ ಡಿಜಿಟಲ್ ಬ್ಯಾನರ್ ಹಾಕಿದರು. ಕನ್ನಡ ಹಾಕದಿರುವುದನ್ನು ನಾನು ಖಂಡಿಸುತ್ತೇನೆ. ಅವದನ್ನ ನಾನು ಕೇಂದ್ರ ಅಧಿಕಾರಿಗಳನ್ನ ಹೇಳಿದ್ದೀನಿ. ಸಂಜೆ ಅಥವಾ ನಾಳೆ ಬದಲಾವಣೆ ಮಾಡ್ತಾರೆ. ಇದೇ ಮೊದಲ ಬಾರಿಗೆ ಕೇಂದ್ರದ ಸರ್ಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೀನಿ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ನೋಡಿಕೊಳ್ತೇನೆ. ನಮ್ಮ ಭಾಷೆಯನ್ನು ಗೌರವಿಸುವುದು ನಮ್ಮ ಕರ್ತವ್ಯ, ಗೌರವ. ಆ ಕೆಲಸ ಮಾಡಿದ್ದೇವೆ. ಕೇಂದ್ರ ಅಧಿಕಾರಿಗಳು ಕ್ಷಮೆ ಕೇಳಿದ್ದಾರೆ. ಕೇಂದ್ರ ಸರ್ಕಾರದ ಕಾರ್ಯಕ್ರಮ ಆಗಿದ್ದರಿಂದ ನಮಗೆ ಮಾಹಿತಿ ಇರಲಿಲ್ಲ ಎಂದಿದ್ದಾರೆ.

ಬೆಲೆ ಏರಿಕೆ

ಬೆಲೆ ಏರಿಕೆ

ಬೆಲೆ ಏರಿಕೆಗೂ ಪ್ರವಾಸೋದ್ಯಮಕ್ಕೂ ಸಂಬಂಧ ಇಲ್ಲ ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ. ಬೆಲೆಯೇರಿಕೆ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಲ್ಲ. ಜನ ಪ್ರವಾಸ ಮಾಡಬೇಕು ಅಂತ ನಿರ್ಧರಿಸಿದರೆ ಎಷ್ಟೇ ಕಷ್ಟ ಇದ್ರೂ ಪ್ರವಾಸ ಮಾಡ್ತಾರೆ. ಬೆಲೆಯೇರಿಕೆ ಅಂತ ಜನ ಪ್ರವಾಸ ಮಾಡದೇ ಇರಲ್ಲ ಎಂದರು. ಪ್ರವಾಸೋದ್ಯಮ ಇಲಾಖೆಗೆ ಕೇಂದ್ರ ಅನುದಾತ ಬಿಡುಗಡೆ ಮಾಡದ ವಿಚಾರವನ್ನು ಪ್ರಸ್ತಾಪಿಸಿದ ಅವರು ಕರ್ನಾಟಕ ವಿಫಲವಾಗಿದೆ ಅಂತ ಅಧಿಕಾರಿ ಹೇಳಬಾರದಿತ್ತು. ತಾಂತ್ರಿಕ ಕಾರಣದಿಂದ ವಿಳಂಬವಾಗಿದೆ. ಸರ್ಕಾರ ವಿಫಲವಾಗಿದೆ ಅದ್ರೆ ನಾನು ವಿಫಲವಾಗಿಲ್ಲ. ಅದಷ್ಟು ಬೇಗ ಪ್ರಸ್ತಾವನೆ ಕಳಿಸುತ್ತೇನೆ. ಅನುದಾನ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದಾರೆ.

English summary
A number of restrictions have been imposed on tourism to prevent corona spread in the country. Access to several tourist destinations is restricted. Strict action was urged in areas where corona cases are high.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X