ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತಿಷ್ಠಿತ ಕ್ಷೇತ್ರ: ಬೆಂ. ಕೇಂದ್ರದಲ್ಲಿ ಮಿನಿ ಭಾರತ ಸಮರ

By Mahesh
|
Google Oneindia Kannada News

ಬೆಂಗಳೂರು, ಏ.15: ಸರ್ವಜನಾಂಗದ ಶಾಂತಿಯ ತೋಟ, ಕಾಸ್ಮೋಪಾಲಿಟನ್ ಕಲ್ಚರ್ ಬಿಂಬಿಸುವ, ಸ್ಲಂನಿಂದ ಹಿಡಿದು ಶ್ರೀಮಂತಿಕೆ ತನಕ ಎಲ್ಲವನ್ನೂ ಕಾಣಬಹುದಾದ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಕದನ ಕುತೂಹಲ ಚಿತ್ರಣ ಇಲ್ಲಿದೆ.

ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಹೊರತು ಪಡಿಸಿದರೆ ಈ ಬಾರಿ ಕಣದಲ್ಲಿರುವುದು ಪ್ರಥಮ ಬಾರಿಗೆ ಅಖಾಡಕ್ಕೆ ಇಳಿಯುತ್ತಿರುವ ಉತ್ಸಾಹಿಗಳಾಗಿದ್ದಾರೆ. 'ಈ ಸೀಟು ಮುಸ್ಲಿಮರಿಗೆ ಮಾತ್ರ' ಎಂದು ಈ ಕ್ಷೇತ್ರದ ಹಳೆ ಹುಲಿ ಜಾಫರ್ ಷರೀಫ್ ಅವರು ಈ ಹಿಂದೆ ನೀಡಿದ ಹೇಳಿಕೆ ಸಾರ್ವಕಾಲಿಕವಾಗಿ ನೆನಪಲ್ಲಿಟ್ಟುಕೊಳ್ಳಬಹುದು. ಈ ಬಾರಿ ಜಾಫರ್ ಷರೀಫ್ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದೆ. ಷರೀಫ್ ಅವರನ್ನು ಕೈ ಬಿಟ್ಟು ಕಾಂಗ್ರೆಸ್ ತಪ್ಪು ಮಾಡಿತೇ? ಉತ್ತರ ಮುಂದಿನ ತಿಂಗಳು ಸಿಗಲಿದೆ.

ಆದರೆ, ಬೆಂಗಳೂರು ನಗರ ಕ್ಷೇತ್ರ ಮೂರು ಭಾಗವಾದ ಮೇಲೆ ಕೇಂದ್ರ ಭಾಗದಲ್ಲಿ ಮಿನಿ ಭಾರತದಲ್ಲಿ ಅಲ್ಪಸಂಖ್ಯಾತರೇ ಭವಿಷ್ಯ ಬರೆಯುವ ಶಕ್ತಿವಂತರಾಗಿದ್ದಾರೆ. ಕ್ಷೇತ್ರ ವಿಂಗಡಣೆಯಾದ ಮೇಲೆ 2009ರಲ್ಲಿ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಪಿ.ಸಿ ಮೋಹನ್(3,40,162 ಮತಗಳು) ಅವರು ಕಾಂಗ್ರೆಸ್ಸಿನ ಎಚ್ ಟಿ ಸಾಂಗ್ಲಿಯಾನ (3,04,944 ಮತಗಳು) ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದರು.

ಕೇಂದ್ರದಲ್ಲಿರುವ ಅಸೆಂಬ್ಲಿ ಕ್ಷೇತ್ರಗಳು: ರಾಜಾಜಿನಗರ, ಚಾಮರಾಜಪೇಟೆ, ಗಾಂಧಿನಗರ, ಶಿವಾಜಿನಗರ, ಶಾಂತಿನಗರ, ಸರ್ವಜ್ಞನಗರ, ಸಿವಿ ರಾಮನ್ ನಗರ ಹಾಗೂ ಮಹದೇವಪುರ.

ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ 10,09,822 ಪುರುಷರು, 9,20,454 ಮಹಿಳೆಯರು, 299 ಇತರರು ಸೇರಿದಂತೆ 19,30,575 ಮತದಾರರಿದ್ದಾರೆ. ಆದರೆ, ಜನಸಂಖ್ಯೆ ಆಧಾರದಲ್ಲಿ 14,01,551 ಪುರುಷರು, 12,97,572 ಮಹಿಳೆಯರು ಸೇರಿದಂತೆ 26,99,323 ಜನರಿದ್ದಾರೆ. ಶೇ. 72.05 ಪುರುಷರು, ಶೇ.70.95 ಮಹಿಳೆಯರು ಸೇರಿದಂತೆ ಒಟ್ಟಾರೆ ಶೇ.71.52ರಷ್ಟು ಜನರು ಮಾತ್ರ ಮತದಾರರ ಪಟ್ಟಿಯಲ್ಲಿದ್ದಾರೆ.

ಅಸೆಂಬ್ಲಿ ಕ್ಷೇತ್ರದ ಬಲಾಬಲ, ಲೋಕಸಭೆ ಸ್ಪರ್ಧಿಗಳು

ಅಸೆಂಬ್ಲಿ ಕ್ಷೇತ್ರದ ಬಲಾಬಲ, ಲೋಕಸಭೆ ಸ್ಪರ್ಧಿಗಳು

* ಸರ್ವಜ್ಞ ನಗರ: ಕೆಜೆ ಜಾರ್ಜ್, ಕಾಂಗ್ರೆಸ್, ಗೃಹಸಚಿವರು
* ಸಿ.ವಿ ರಾಮನ್ ನಗರ(ಎಸ್ ಸಿ): ಎಸ್ ರಘು, ಬಿಜೆಪಿ
* ಶಿವಾಜಿನಗರ: ಆರ್ ರೋಷನ್ ಬೇಗ್, ಕಾಂಗ್ರೆಸ್, ಸಚಿವ
* ಶಾಂತಿನಗರ: ನಲಪಡ್ ಅಹ್ಮದ್ ಹ್ಯಾರೀಸ್, ಕಾಂಗ್ರೆಸ್
* ಗಾಂಧಿನಗರ: ದಿನೇಶ್ ಗುಂಡೂರಾವ್, ಕಾಂಗ್ರೆಸ್, ಅಹಾರ ಖಾತೆ ಸಚಿವ
* ರಾಜಾಜಿನಗರ: ಎಸ್ ಸುರೇಶ್ ಕುಮಾರ್, ಬಿಜೆಪಿ, ಮಾಜಿ ಸಚಿವ
* ಚಾಮರಾಜಪೇಟೆ: ಜಮೀರ್ ಅಹ್ಮದ್ ಖಾನ್, ಜೆಡಿಎಸ್
* ಮಹದೇವಪುರ(ಎಸ್ ಸಿ): ಅರವಿಂದ ಲಿಂಬಾವಳಿ, ಬಿಜೆಪಿ, ಮಾಜಿ ಸಚಿವ

ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು: ರಿಜ್ವಾನ್ ಅರ್ಷದ್(ಕಾಂಗ್ರೆಸ್), ನಂದಿನಿ ಆಳ್ವ(ಜೆಡಿಎಸ್), ಪಿಸಿ ಮೋಹನ್ (ಬಿಜೆಪಿ), ವಿ ಬಾಲಕೃಷ್ಣನ್(ಎಎಪಿ), ಆರ್ ಮೋಹನ್ ರಾಜು(ಬಹುಜನ ಸಮಾಜ ಪಕ್ಷ)

ರಿಜ್ವಾನ್ ಅರ್ಷದ್ ಗೆಲ್ಲುವ ಚಾನ್ಸ್ ಹೇಗಿದೆ?

ರಿಜ್ವಾನ್ ಅರ್ಷದ್ ಗೆಲ್ಲುವ ಚಾನ್ಸ್ ಹೇಗಿದೆ?

* ವಯಸ್ಸು 34. ವಿದ್ಯಾರ್ಹತೆ: ಬಿ.ಕಾಂ
* ಆಸ್ತಿ: 3.2 ಕೋಟಿ ರು,
* ವೆಬ್ ತಾಣ: rizwanarshad.in
* ಅನುಭವ: ಯೂಥ್ ಕಾಂಗ್ರೆಸ್ ಅಧ್ಯಕ್ಷ(ಕೇಂದ್ರ ಸಚಿವ ಖರ್ಗೆ ಅವರ ಮಗ ಪ್ರಿಯಾಂಕ್ ಸೋಲಿಸಿದ ಹೆಗ್ಗಳಿಕೆ)
* 8 ಅಸೆಂಬ್ಲಿ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಕಾಂಗ್ರೆಸ್ ನಾಯಕರೇ ಹಾಲಿ ಶಾಸಕರಾಗಿದ್ದಾರೆ. ಸಿವಿ ರಾಮನ್ ನಗರದಲ್ಲಿ ಬಿಜೆಪಿಯ ಎಸ್ ರಘು ಇದ್ದರೂ ಅರ್ಷದ್ ಪರ ಮತಗಳು ಅಧಿಕವಾಗಿ ಬೀಳುವ ಸಾಧ್ಯತೆಯಿದೆ.
* ಮಹದೇವಪುರ, ಚಾಮರಾಜಪೇಟೆ, ರಾಜಾಜಿನಗರಗಳಲ್ಲಿ ಮುಸ್ಲಿಮ್ ಹಾಗೂ ತಮಿಳರ ವೋಟ್ ಗಳ ಮೇಲೆ ಅರ್ಷದ್ ಬಲಾಬಲ ನಿಂತಿದೆ. ಹಿಂದೂಗಳ ವೋಟ್ ಪೂರ್ಣವಾಗಿ ನಂದಿನಿ ಅಳ್ವ ಹಾಗೂ ಮೋಹನ್ ಹಂಚಿಕೆಯಾಗಿ ಉಳಿದಿದ್ದು ಸಿಗಬಹುದು.
* ಅರ್ಷದ್ ಮೂಲತಃ ಮೈಸೂರಿನವರಾದರೂ ಬೆಂಗಳೂರಿನ ಕೇಂದ್ರ ಕ್ಷೇತ್ರದಲ್ಲಿ ಸಾಕಷ್ಟು ಓಡಾಟ ನಡೆಸಿ ಒಳ್ಳೆ ಹೋಂ ವರ್ಕ್ ಮಾಡಿ ಕಣಕ್ಕಿಳಿದಿದ್ದಾರೆ. ಯುವಕರಿಗೆ ಆದ್ಯತೆ ನೀಡಲು ಮತದಾರ ಮುಂದಾದರೆ ಅರ್ಷದ್ ಗೆ ಗೆಲುವು ಕಟ್ಟಿಟ್ಟ ಬುತ್ತಿ
* ಕಣದಲ್ಲಿ ಇತರೆ ಪ್ರಮುಖ ಪಕ್ಷಗಳು ಮುಸ್ಲಿಂ ಅಭ್ಯರ್ಥಿಯನ್ನು ಇಳಿಸಿಲ್ಲದಿರುವುದು ಅರ್ಷದ್ ಗೆ ವರದಾನವಾಗಲಿದೆ.

ನಂದನಿ ಆಳ್ವ, ವೋಟ್ ಒಡೆಯುವ ತಂತ್ರ

ನಂದನಿ ಆಳ್ವ, ವೋಟ್ ಒಡೆಯುವ ತಂತ್ರ

* ಬೆಂಗಳೂರು ಹಬ್ಬ ಆರಂಭಿಸಿದ ಕಲಾವಿದೆ ನಂದಿನಿ ಆಳ್ವ ಬಿ.ಎ ಪದವಿಧರೆ
* 52 ವರ್ಷ ವಯಸ್ಸು, ಪತಿ ದಿವಂಗತ ಜೀವರಾಜ್ ಆಳ್ವ ಅವರ ಹೆಸರಿನ ಬಲ ಶ್ರೀರಕ್ಷೆ
* ಆಸ್ತಿ: 80.78 ಕೋಟಿ 3.78 ಕೋಟಿ ರು ಸಾಲ
* ಫೇಸ್ ಬುಕ್ : https://www.facebook.com/NandiniAlvaJDS
* ನಂದಿನಿ ಆಳ್ವ ಅವರು ಗೆಲುವಿಗಿಂತ ಮತ ವಿಭಜನೆ ಮಾಡಿ ಒಳ್ಳೆ ಫೈಟ್ ನೀಡುವ ಸಾಧ್ಯತೆ ಹೆಚ್ಚಿದೆ.
* ನಂದಿನಿ ಅವರಿಗೆ ಹಿಂದೂ ತಮಿಳರು, ತೆಲುಗರ ಮತಗಳಲ್ಲದೆ ಮುಸ್ಲಿಂ ಮತವೂ ಬಿದ್ದರೆ ಉಳಿದ ಮೂವರು ಪ್ರಮುಖ ಅಭ್ಯರ್ಥಿಗಳಿಗೆ ಕಷ್ಟ ಕಷ್ಟ.
* ನಂದಿನಿ ಪರ ಅಳಿಯ ನಟ ವಿವೇಕ್ ಒಬೆರಾಯ್, ನಟಿ ಸಂಜನಾ ಪ್ರಚಾರ ನಡೆಸಿದ್ದರು. ಇದರ ಪರಿಣಾಮ ಅಷ್ಟಾಗಿ ಕಾಣುವಂತಿಲ್ಲ.
* ಚಾಮರಾಜಪೇಟೆ ಕ್ಷೇತ್ರದ ಜಮೀರ್ ಅವರು ನಂದಿನಿ ಪರ ಪ್ರಚಾರ ನಡೆಸಿ ಕ್ಷೇತ್ರ ಎಲ್ಲಾ ಮತ ಸಿಗುವಂತೆ ಮಾಡುವ ಸಂಕಲ್ಪ ಹೊಂದಿದ್ದಾರೆ.
* ಒಟ್ಟಾರೆ ನಂದಿನಿ ಎಷ್ಟು ಮತಗಳನ್ನು ಕಬಳಿಸಿ ಯಾರನ್ನು ಉರುಳಿಸುತ್ತಾರೋ ಕಾದು ನೋಡಬೇಕಿದೆ.
* ಮೊದಲ ಬಾರಿಗೆ ಚುನಾವಣೆ ಸ್ಪರ್ಧಿಸುತ್ತಿರುವಾಗ ಕೊನೆ ಗಳಿಗೆಯಲ್ಲಿ ಕಣಕ್ಕಿಳಿದಿದ್ದು ಮುಳುವಾಗಲಿದೆ.

ಆಮ್ ಆದ್ಮಿ ಪಕ್ಷದ ಶ್ರೀಮಂತ ವಿ ಬಾಲಕೃಷ್ಣನ್

ಆಮ್ ಆದ್ಮಿ ಪಕ್ಷದ ಶ್ರೀಮಂತ ವಿ ಬಾಲಕೃಷ್ಣನ್

ಒಳ್ಳೆ ಇಮೇಜ್ ಉಳ್ಳ ಅಭ್ಯರ್ಥಿ ಎಂದು ಕರೆಸಿಕೊಳ್ಳುತ್ತಿರುವ ವೆಂಕಟರಾಮನ್ ಬಾಲಕೃಷ್ಣನ್ ಅವರು ಆಮ್ ಆದ್ಮಿ ಪಕ್ಷದ ಶ್ರೀಮಂತ ಅಭ್ಯರ್ಥಿ.189 ಕೋಟಿ ರು ಆಸ್ತಿ, 3.2 ಲಕ್ಷ ರು ಸಾಲ ಹೊಂದಿದ್ದಾರೆ.
* 49 ವರ್ಷ ವಯಸ್ಸಿನ ಬಾಲ ಅವರು ಇನ್ಫೋಸಿಸ್ ನ ಮಾಜಿ ಸಿಎಫ್ ಒ, ಮೈಕ್ರೊಗ್ರಾಂ ಸ್ಥಾಪಕರಾಗಿದ್ದಾರೆ.
* ವೆಬ್ ಸೈಟ್: aapkabala.com
* ಭ್ರಷ್ಟಾಚಾರ ವಿರೋಧಿ ಆಂದೋಲನ, ಹೊಸತನ ರಾಜಕೀಯ, ಭರವಸೆ ನೀಡುವ ಆಶ್ವಾಸನೆ.
* ಅನನುಭವಿ ರಾಜಕಾರಣಿ, ಅಲ್ಪಸಂಖ್ಯಾತರ ಮತ ಪಡೆಯುವುದು ಅನುಮಾನ. ಮೇಲ್ವರ್ಗದ ಜನತೆಗೆ ಮಾತ್ರ ಹತ್ತಿರ ಎಂಬ ದೂರು.
* ಕ್ಷೇತ್ರದ ಜನತೆಗೆ ಅಷ್ಟಾಗಿ ಪರಿಚಿತರಲ್ಲದಿರುವುದು ಕೊಂಚ ಹಿನ್ನಡೆಯಾದರೂ ಪ್ರಚಾರದ ವೇಳೆ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದ್ದು ಇದೇ ಮತಗಳಾಗಿ ಪರಿವರ್ತನೆಗೊಂಡರೆ ಮೋಹನ್, ರಿಜ್ವಾನ್ ಗೆ ಕಷ್ಟಕರ.

ಮೋದಿ ಹೆಸರಿನಲ್ಲಿ ನನ್ನನ್ನು ಗೆಲ್ಲಿಸಿ: ಮೋಹನ್

ಮೋದಿ ಹೆಸರಿನಲ್ಲಿ ನನ್ನನ್ನು ಗೆಲ್ಲಿಸಿ: ಮೋಹನ್

ಅಬ್ ಕಿ ಬಾರ್ ಮೋದಿ ಸರ್ಕಾರ್ ಜಪ ಮಾಡುತ್ತಿರುವ ಪಿಸಿ ಮೋಹನ್ ಅವರು ಜನಪ್ರಿಯ ನಟ ದರ್ಶನ್ ಸೇರಿದಂತೆ ಅನೇಕ ಸ್ಟಾರ್ ಪ್ರಚಾರಕರನ್ನು ಕರೆ ತಂದು ಮತಯಾಚಿಸಿದ್ದಾರೆ.
* 51 ವರ್ಷ ವಯಸ್ಸು, ಪಿಯುಸಿ ತನಕ ಓದು, ಸಿರಾಮಿಕ್ಸ್ ಅಂಡ್ ಟೈಲ್ಸ್ ಉದ್ಯಮಿ
* ವೆಬ್ ತಾಣ: pcmohan.org
* ಆಸ್ತಿ 30.36 ಕೋಟಿ(2009ರಲ್ಲಿ 5.37 ಕೋಟಿ), ಸಾಲ 17.69 ಕೋಟಿ
* ಕ್ಷೇತ್ರದ ಹಾಲಿ ಸಂಸದರಾಗಿ ಸಂಸದರ ನಿಧಿ ಸದ್ಬಳಕೆ ಪ್ಲಸ್ ಪಾಯಿಂಟ್ 19 ಕೋಟಿ ರು.ಗೂ ಅಧಿಕ ಹಣ ಅಭಿವೃದ್ಧಿ ಕಾರ್ಯಕ್ಕೆ ವಿನಿಯೋಗ.
* ಆದರೆ, ಮಹದೇವ ಪುರ, ಬೆಳ್ಳಂದೂರು ಗ್ರಾಮದ ಜನತೆಗೆ ಶಾಸಕ ಅರವಿಂದ ಲಿಂಬಾವಳಿ ಮಾಡಿದ ಕಾರ್ಯಕ್ಕೆ ಮೋಹನ್ ಅವರಿಗೆ ಜೈಕಾರ ಸಿಗುತ್ತಿದೆಯೇ ಎಂಬ ಶಂಕೆಯಿದೆ.
* ಇನ್ನೊಂದೆಡೆ ಮಹದೇವಪುರ, ರಾಜಾಜಿನಗರ, ಚಾಮರಾಜಪೇಟೆ ಜನತೆ ಕೈ ಹಿಡಿದರೆ ಒಕ್ಕಲಿಗರು, ಹಿಂದೂ ತಮಿಳರು, ತೆಲುಗುವಾಳ್ಳು ಜೈ ಎಂದರೆ ಮೋಹನ್ ಬಚಾವ್.
* ನಟಿ ಮಾಳವಿಕ ತಮಿಳಿನಲ್ಲಿ ಪ್ರಚಾರ, ವೆಂಕಯ್ಯ ನಾಯ್ಡು ತೆಲುಗಿನಲ್ಲಿ ಪ್ರಚಾರ ಎರಡು ಕನ್ನಡಿಗರಿಗೆ ಕಿರಿಕಿರಿ ಉಂಟು ಮಾಡಿದೆ.
* ರಿಜ್ವಾನ್ ವಿರುದ್ಧ ಕಾಂಗ್ರೆಸ್ಸಿಗರೆ ಮಸಲತ್ತು ಮಾಡಿ ಹಾಲಿ ಕಾಂಗ್ರೆಸ್ ಅಧೀನದಲ್ಲಿರುವ ಅಸೆಂಬ್ಲಿ ಕ್ಷೇತ್ರಗಳಲ್ಲಿ ವೋಟ್ ಬ್ಯಾಂಕ್ ಒಡೆದರೆ ಮೋಹನ್ ಗೆ ಜಯ ಗ್ಯಾರಂಟಿ.

English summary
Top Contests 2014: Bangalore Central LS Constituency: Three new faces Rizwan, Nandini and high-profile Aam Aadmi Party candidate and former Infosys Board member V Balakrishnan, are slugging it out in Bangalore central Lok Sabha constituency against incumbent P C Mohan of BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X