ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಂಕಿತ ಉಗ್ರ ಮೆಹದಿ ಬಂಧನ : ಟಾಪ್ 10 ಬೆಳವಣಿಗೆ

By Kiran B Hegde
|
Google Oneindia Kannada News

ಬೆಂಗಳೂರು, ಡಿ. 13: ಇಡೀ ದೇಶದ ನಿದ್ದೆಗೆಡಿಸಿದ್ದ ಪಶ್ಚಿಮ ಬಂಗಾಳ ಮೂಲದ ಶಂಕಿತ ಉಗ್ರ ಮೆಹದಿ ಮಸ್ರೂರ್ ಬಿಸ್ವಾಸ್ (24) ಬೆಂಗಳೂರು ಪೊಲೀಸ್ ಬಲೆಗೆ ಬೀಳುವ ಮೊದಲು ಹಾಗೂ ನಂತರದ ಟಾಪ್ 10 ಬೆಳವಣಿಗೆಗಳ ಕುರಿತು ಒಂದು ಸಮಗ್ರ ಪಕ್ಷಿನೋಟ ಇಲ್ಲಿದೆ.

biswas
  • ವರ್ಷಗಳಿಂದ ಐಎಸ್ಐಎಸ್ ಪರ ಟ್ವಿಟ್ಟರ್ ಖಾತೆ ನಿರ್ವಹಿಸುತ್ತಿದ್ದ ಮೆಹದಿ ಕುರಿತು ಇಂಗ್ಲೆಂಡ್ ಮೂಲದ ಚಾನಲ್ 4 ನಿಂದ ಭಾರತಕ್ಕೆ ಮಾಹಿತಿ
  • ತಕ್ಷಣ ಬೆಂಗಳೂರು ಪೊಲೀಸರಿಗೆ ಎನ್ಐಎ ಸಂಸ್ಥೆಯಿಂದ ಮಾಹಿತಿ ರವಾನೆ. [ಟ್ವಿಟ್ಟರ್ ಉಗ್ರನ ರಹಸ್ಯ ಬಯಲು]
  • ವಿಷಯ ಬಯಲಾದದ್ದು ತಿಳಿದ ತಕ್ಷಣ ತನ್ನ ಟ್ವಿಟ್ಟರ್ ಖಾತೆ @shamiwitness ಅನ್ನು ಮೆಹದಿ ಅಳಿಸಿಹಾಕಿದ. ಚಾನಲ್ 4 ಜೊತೆ ಮಾತನಾಡಿ "ನನಗೆ ಸಾಯಲು ಇಷ್ಟವಿಲ್ಲ, ನಾನೇನೂ ತಪ್ಪು ಮಾಡಿಲ್ಲ, ನಾನು ಯಾವುದೇ ದೇಶದ ಕಾನೂನು ಉಲ್ಲಂಘಿಸಿಲ್ಲ" ಎಂದು ಸಮರ್ಥಿಸಿಕೊಂಡ [ಪೊಲೀಸರಿಗೆ ಮೆಹದಿ ಸಿಕ್ಕಿಬಿದ್ದಿದ್ದು ಹೇಗೆ?]
  • ಮೆಹದಿ ಬಂಧನಕ್ಕೆ ಬೆಂಗಳೂರು ಸಿಸಿಬಿ ಪೊಲೀಸರಿಂದ ತಂಡ ರಚನೆ. ಜಾಲಹಳ್ಳಿಯ ಅಯ್ಯಪ್ಪನಗರದ ಅಪಾರ್ಟ್‌ಮೆಂಟ್‌ನಲ್ಲಿ ಶುಕ್ರವಾರ ರಾತ್ರಿ ಬಂಧನ
  • ನನ್ನ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ, ಐಎಸ್ಐಎಸ್ ಪರ ಸಂದೇಶ ರವಾನಿಸಿದ್ದು ನಾನಲ್ಲ ಎಂದು ಸಮರ್ಥನೆ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರಿಂದ ಶನಿವಾರ ಮಧ್ಯಾಹ್ನದವರೆಗೆ ವಿಚಾರಣೆ ಆರಂಭ
  • ಮಗನ ಬಂಧನದಿಂದ ಅವಾಕ್ಕಾದ ತಂದೆ ಎಂ. ಬಿಸ್ವಾಸ್‌ರಿಂದ ಕೊಲ್ಕೊತ್ತದಲ್ಲಿ ಹೇಳಿದ್ದು ಹೀಗೆ - "ತನ್ನ ಖಾತೆ ಹ್ಯಾಕ್ ಆಗಿತ್ತು ಎಂದು ಮಗ ಹೇಳಿದ್ದಾನೆ. ನನ್ನ ಮಗನಿಗೆ ಐಎಸ್ಐಎಸ್ ಜೊತೆ ಸಂಪರ್ಕವಿತ್ತು ಎಂಬುದನ್ನು ನಾನು ನಂಬುವುದಿಲ್ಲ" [ಜಾಣ ಮೆಹದಿ ಪೊಲೀಸರ ಕಣ್ಣು ತಪ್ಪಿಸಿದ್ದು ಹೇಗೆ]
  • ಐಎಸ್ಐಎಸ್ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದನ್ನು ಪೊಲೀಸ್ ವಿಚಾರಣೆಯಲ್ಲಿ ಮೆಹದಿ ಬಾಯಿ ಬಿಟ್ಟ. ಭಾರತ ಬಿಟ್ಟು ಇತರ ದೇಶಗಳ ಅದರಲ್ಲಿಯೂ ಇಂಗ್ಲಿಷ್ ಬಲ್ಲ ಉಗ್ರರೊಂದಿಗೆ ಸಂಪರ್ಕ ಹೊಂದಿರುವುದನ್ನು, ಯುವಕರಿಗೆ ಐಎಸ್ಐಎಸ್ ಸೇರಲು ಒತ್ತಾಯಿಸಿದ್ದನ್ನು ಒಪ್ಪಿಕೊಂಡ.
  • ಮಧ್ಯಾಹ್ನ ಮೆಹದಿ ಮಸ್ರೂರ್ ಬಿಸ್ವಾಸ್‌ನ ಬಂಧನವನ್ನು ಸುದ್ದಿಗೋಷ್ಠಿ ನಡೆಸಿ ಮಾಧ್ಯಮಕ್ಕೆ ಪೊಲೀಸ್ ಮಹಾನಿರ್ದೇಶಕ ಪಚಾವೋ ಹಾಗೂ ಬೆಂಗಳೂರು ಆಯುಕ್ತ ಎಂ.ಎನ್. ರೆಡ್ಡಿ ಅವರಿಂದ ಮಾಹಿತಿ [ಲಷ್ಕರ್ ದಾಳಿ ಎಚ್ಚರಿಕೆ, ದೆಹಲಿಯಲ್ಲಿ ಹೈ ಅಲರ್ಟ್]
  • ಮೆಹದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಸೆಕ್ಷನ್ 125 (ಭಾರತ ಸರ್ಕಾರದೊಂದಿಗೆ ಸ್ನೇಹ ಸಂಬಂಧ ಹೊಂದಿರುವ ಏಷ್ಯಾ ದೇಶದ ವಿರುದ್ಧ ಯುದ್ಧ ಘೋಷಣೆ ಮಾಡಿದ ಅಪರಾಧ), ಕಾನೂನು ಬಾಹಿರ ಚಟುವಟಿಕೆ ಹಾಗೂ ಸೆಕ್ಷನ್ 66 ಅಡಿ ಪ್ರಕರಣ
  • ಮೆಹದಿ ಕೆಲಸ ಮಾಡುತ್ತಿದ್ದ ಐಟಿಸಿ ಲಿ. ಕೋಲ್ಕತ್ತ ಉನ್ನತಾಧಿಕಾರಿಗಳಿಂದ ಬೆಂಗಳೂರು ಪೊಲೀಸರಿಗೆ ತನಿಖೆಯಲ್ಲಿ ಸಹಕಾರ ನೀಡುವುದಾಗಿ ಪತ್ರಿಕಾ ಪ್ರಕಟಣೆ ಬಿಡುಗಡೆ
English summary
Here are the top 10 developments of arrest of ISIS twitter operator Mehdi Masroor Biswas. At last he has been arrested by CCB police Bengaluru. He has confessed that he was tweeting for ISIS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X