• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಲ್ ಇಡಿ ಬಲ್ಬ್ ಬಳಕೆಯಿಂದ ಒದಗುವ 9 ಅನುಕೂಲಗಳು

By Vanitha
|

ಬೆಂಗಳೂರು, ಸೆಪ್ಟೆಂಬರ್, 30 : ಬಹು ದಿನಗಳಿಂದ ಕತ್ತಲ ಕೂಪದಲ್ಲಿ ಮುಳುಗೇಳುತ್ತಿದ್ದ ಮನೆ, ಸರ್ಕಾರಿ ಕಚೇರಿ, ಬೀದಿಗಳು ಇನ್ನು ಮುಂದೆ ಬೆಳಕುಮಯವಾಗಲಿದೆ. ರಾಜ್ಯಾದ್ಯಂತ ಎಲ್ ಇಡಿ ಬಲ್ಬ್ ವಿತರಣೆ ಮಾಡಲು ರಾಜ್ಯ ಸರಕಾರ ಮುಂದಾಗಿದ್ದು, ಜನರ ತಡಕಾಟ, ಗೋಳಾಟಗಳು ಕಡಿಮೆಯಾಗಲಿದೆ

ಮಳೆ ಕೊರತೆ, ಜಲಾಶಯಗಳಲ್ಲಿ ನಿಗದಿತ ಮಟ್ಟ ತಲುಪದ ನೀರಿನ ಪ್ರಮಾಣ ಈ ಕಾರಣಗಳನ್ನು ನೀಡಿದ ರಾಜ್ಯ ಸರ್ಕಾರ ಬಹು ದಿನಗಳಿಂದ ಲೋಡ್ ಶೆಡ್ಡಿಂಗ್ ಘೋಷಿಸಿತ್ತು. ಮುಂದಿನ ದಿನಗಳಲ್ಲಿ ಎದುರಾಗುವ ವಿದ್ಯುತ್ ಸಮಸ್ಯೆ ಕಡಿಮೆ ಮಾಡಲು ಅವಿರತ ಪ್ರಯತ್ನಿಸಿತ್ತು. ಇದರಿಂದ ರಾಜ್ಯ ಜನತೆ ಕೆಲವು ಗಂಟೆಗಳ ಕಾಲ ಕತ್ತಲ ಕೂಪದಲ್ಲಿ ಇರುವಂತೆ ಮಾಡಿತ್ತು.

ಇದೀಗ ರಾಜ್ಯ ಸರ್ಕಾರ ಕತ್ತಲ ಭಾಗ್ಯವನ್ನು ತೆಗೆದುಹಾಕಿ ಎಲ್ ಇಡಿ ಬಲ್ಬ್ ಗಳ ಮೂಲಕ ಜನತೆಗೆ ಬೆಳಕಿನ ಭಾಗ್ಯ ನೀಡುತ್ತಿದೆ. ಇದರಿಂದ ಸರ್ಕಾರ ಎಲ್ ಇಡಿ ಬಲ್ಬ್ ಯಾಕೆ ನೀಡುತ್ತಿದೆ? ಇದರಿಂದ ಏನೆಲ್ಲಾ ಪ್ರಯೋಜನಗಳಿವೆ? ಎಂಬ ಪ್ರಶ್ನೆ ನಿಮಗೂ ಕಾಡಿರಬಹುದು. ಇಲ್ಲಿದೆ ನೋಡಿ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ.[ಕರ್ನಾಟಕದಲ್ಲಿ ಇನ್ಮುಂದೆ ಎಲ್ ಇಡಿ ಬಳಕೆ ಕಡ್ಡಾಯ]

ಜೀವನ ಪರ್ಯಂತ ಬಳಕೆಗೆ ಲಭ್ಯ

ಜೀವನ ಪರ್ಯಂತ ಬಳಕೆಗೆ ಲಭ್ಯ

ಎಲ್ ಇಡಿ ಬಲ್ಬ್ ಗಳು 1 ಮಿಲಿಯನ್ ಗಂಟೆಗಳು ಬೆಳಕನ್ನು ಒದಗಿಸುತ್ತದೆ. 11ತಿಂಗಳುಗಳ ಕಾಲ ಸಂಪೂರ್ಣ ಬೆಳಕು ನೀಡಿದರೆ, 22 ತಿಂಗಳುಗಳು ಮಂದ ಬೆಳಕನ್ನು ನೀಡುತ್ತದೆ. ನೀವು ದಿನಕ್ಕೆ 8 ಗಂಟೆಗಳ ಕಾಲ ಮಾತ್ರ ಉರಿಸಿದರೆ ನೀವು 20ವರ್ಷಗಳವರೆಗೆ ಇನ್ನೊಂದು ಎಲ್ ಇಡಿ ಬಲ್ಬ್ ತೆಗೆದುಕೊಳ್ಳುವ ಪ್ರಮೇಯವೇ ಬರುವುದಿಲ್ಲ.

ಉತ್ತಮ ಸಾಮರ್ಥ್ಯ

ಉತ್ತಮ ಸಾಮರ್ಥ್ಯ

ಬೇರೆ ಬಲ್ಬ್ ಗಳಿಗೆ ಹೋಲಿಸಿದರೆ ಎಲ್ ಇಡಿ ಬಲ್ಬ್ ಗಳು 80%-90% ರಷ್ಟು ಅಧಿಕ ಸಾಮರ್ಥ್ಯ ಹೊಂದಿದೆ. ಇದು ಬೆಳಕನ್ನು ನೀಡಲು ವಿದ್ಯುತ್ ಸಾಮರ್ಥ್ಯವನ್ನು 80% ಬಳಸಿಕೊಳ್ಳುತ್ತದೆ. ಉಳಿದ 20% ವ್ಯಯವಾಗುವ ಸಾಧ್ಯತೆ ಇದೆ.

ಪರಿಸರ ಸ್ನೇಹಿ

ಪರಿಸರ ಸ್ನೇಹಿ

ಬೆಳಕಿಗೆ ಈಯುವ ಇನ್ನಿತರ ಬಲ್ಬ್ ಗಳಲ್ಲಿ ಮರ್ಕ್ಯೂರಿ ಎಂಬ ರಾಸಯನಿಕ ಇರುತ್ತದೆ. ಆದರೆ ಎಲ್ ಇಡಿ ಬಲ್ಬ್ ಗಳು ಟಾಕ್ಸಿಕ್ ರಸಾಯನಿಕಗಳಿಂದ ದೂರ ಇರುತ್ತದೆ. ಇದು ಮರುಬಳಕೆಗೂ ಲಭ್ಯವಾಗುತ್ತದೆ.

ಹೆಚ್ಚು ದಿನ ಬಾಳಿಕೆ ಬರುತ್ತದೆ

ಹೆಚ್ಚು ದಿನ ಬಾಳಿಕೆ ಬರುತ್ತದೆ

ಕೆಲವೊಮ್ಮೆ ಶಾಕ್ ,ವಾತಾವರಣ ವೈಪರಿತ್ಯ, ಗಾಳಿ, ಮಳೆಗೆ ಇನ್ನಿತರ ಅವಘಡಗಳಿಂದ ಬಲ್ಬ್ ಗಳು ಹಾಳಾಗುವ ಸಾಧ್ಯತೆ ಇರುತ್ತದೆ. ಆದರೆ ಈ ಎಲ್ಲಾ ಸಂದರ್ಭಗಳಲ್ಲಿ ಅದು ಸುರಕ್ಷವಾಗಿರುತ್ತದೆ.

ಸುಂದರವಾದ ಅಕಾರ

ಸುಂದರವಾದ ಅಕಾರ

ಇವುಗಳು ಬೆಳಕಿನ ಹರಿಯುವಿಕೆಯನ್ನು ನಿಯಂತ್ರಣಗೊಳಿಸುವ ಗುಣವನ್ನು ಹೊಂದಿದೆ. ಆಕರ್ಷಕ ಆಕಾರ, ಬಣ್ಣದಿಂದ ಒಳಗೊಂಡಿದ್ದು, ನೋಡುಗರಿಗೆ ಕೊಂಚ ಖುಷಿ ಕೊಡುತ್ತದೆ. ಈಗಾಗಲೇ ಇದನ್ನು ವಿಮಾನಗಳಲ್ಲಿ, ತರಗತಿಗಳಲ್ಲಿ ಹಲವಾರು ಸ್ಥಳಗಳಲ್ಲಿ ಬಳಕೆಯಾಗುತ್ತಿದೆ.

ಅತ್ಯಂತ ಬಿಸಿ ಹಾಗೂ ತಂಪಿನಲ್ಲಿಯೂ ನಿರಂತರ ಕಾರ್ಯ

ಅತ್ಯಂತ ಬಿಸಿ ಹಾಗೂ ತಂಪಿನಲ್ಲಿಯೂ ನಿರಂತರ ಕಾರ್ಯ

ಈ ಬಲ್ಬ್ ಗಳು ಎಲ್ಲಾ ಕಾಲದಲ್ಲಿಯೂ ಸುಸೂತ್ರವಾಗಿ ಕಾರ್ಯ ನಿರ್ವಹಿಸುತ್ತದೆ. ಹೊರಗಿನ ವಾತಾವರಣಕ್ಕೆ ತಕ್ಕಂತೆ ಒಗ್ಗಿಕೊಳ್ಳುವ ಗುಣ ಹೊಂದಿದೆ.

ಬಹುದೂರದವರೆಗೆ ಬೆಳಕು ಹರಡುತ್ತದೆ

ಬಹುದೂರದವರೆಗೆ ಬೆಳಕು ಹರಡುತ್ತದೆ

ಬೆಳಕು ಕೇವಲ ಒಂದೇ ಕೋಣೆಗೆ ಮಾತ್ರ ಸೀಮಿತವಾಗುವುದಿಲ್ಲ. ಅಂದರೆ ಇದರ ಬೆಳಕು ಬಹುದೂರ ಹರಡಿ ಮನೆಯೆಲ್ಲಾ ಬೆಳಕುಮಯ ಮಾಡುತ್ತದೆ.

ಹೊಂದಾಣಿಕೆ ಮಾಡಿಕೊಳ್ಳಬಹುದು.

ಹೊಂದಾಣಿಕೆ ಮಾಡಿಕೊಳ್ಳಬಹುದು.

ನಮಗೆ ಎಷ್ಟು ಬೇಕೋ ಅಷ್ಟು ಮಾತ್ರ ಬೆಳಕನ್ನು ಪಡೆದುಕೊಳ್ಳಲು ಇದರಲ್ಲಿ ಅವಕಾಶವಿದ್ದು, ಅದರಲ್ಲಿರುವ ಸ್ವಿಚ್ ನ ಸಹಾಯದಿಂದ ಇದನ್ನು ನಿರ್ವಹಣೆ ಮಾಡಬಹುದು.

ಕಡಿಮೆ ವೋಲ್ಟೇಜ್

ಕಡಿಮೆ ವೋಲ್ಟೇಜ್

ಕಡಿಮೆ ವೋಲ್ಟೇಜ್ ಇದ್ದಾಗಲೂ ಇದು ತನ್ನ ಕಾರ್ಯ ನಿಲ್ಲಿಸುವುದಿಲ್ಲ. ಸರಾಗವಾಗಿ ಬೆಳಕನ್ನು ಒದಗಿಸುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Top 10 Benefits of LED Lighting.Long Life,Design Flexibility, Energy Efficiency,Ecologically Friendly etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more