ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತರಗತಿಗೆ ಗೈರು : ಮಕ್ಕಳಿಗೆ ಕೇಶಮುಂಡನ ಶಿಕ್ಷೆ?

|
Google Oneindia Kannada News

ಬೆಂಗಳೂರು, ಫೆ.2 : ತರಗತಿಗೆ ಗೈರು ಹಾಜರಾದ ಮಕ್ಕಳಿಗೆ ಹಾಸ್ಟೆಲ್‌ ವಾರ್ಡನ್ ಕೇಶಮುಂಡನ ಮಾಡಿ ಶಿಕ್ಷೆ ನೀಡಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಠ್ಠಲ್ ಮಲ್ಯ ರಸ್ತೆ­ಯಲ್ಲಿನ ಸೇಂಟ್‌ ಜೋಸೆಫ್‌ ಇಂಡಿಯನ್‌ ಶಾಲೆಯ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ.

ಸಬಾಸ್ಟಿನ್ ಅಗಸ್ಟಿನ್ ಎಂಬುವರು ಕಬ್ಬನ್‌­ಪಾರ್ಕ್‌ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು, ನನ್ನ ಇಬ್ಬರು ಮಕ್ಕಳು ಸೇರಿದಂತೆ 12 ಮಕ್ಕಳ ಕೇಶಮಂಡನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಹಾಸ್ಟೆಲ್‌ ವಾರ್ಡನ್‌ ಕಿರಣ್ ಕೇಶ ಮುಂಡನ ಮಾಡಿದ್ದಾರೆ ಎಂಬುದು ಆರೋಪ.

School

ಹೊಸೂರು ರಸ್ತೆಯ ಬೇಗೂರಿನ ನಿವಾಸಿಯಾದ ಸಬಾಸ್ಟಿಯನ್ ಅವರ ಇಬ್ಬರು ಮಕ್ಕಳು ಸೇಂಟ್‌ ಜೋಸೆಫ್‌ ಇಂಡಿಯನ್‌ ಶಾಲೆಯಲ್ಲಿ 8 ಮತ್ತು 10ನೇ ತರಗತಿ ಓದುತ್ತಿದ್ದಾರೆ. ಮಕ್ಕಳು ಶಾಲಾ ಆವರಣದಲ್ಲಿರುವ ಹಾಸ್ಟೆಲ್‌ನಲ್ಲಿದ್ದಾರೆ. [ಬೆಂಗಳೂರಿನಲ್ಲಿವೆ 1,266 ಅನಧಿಕೃತ ಶಾಲೆಗಳು]

ಜ.27ರಂದು ಇಬ್ಬರು ಶಾಲೆಗೆ ಗೈರು ಹಾಜರಾಗಿದ್ದರು ಮತ್ತು ಮೈದಾನದಲ್ಲಿ ಆಟವಾಡುತ್ತಿದ್ದರು. ಇದರಿಂದ ಕೋಪಗೊಂಡ ವಾರ್ಡನ್ ಕಿರಣ್, ಕೇಶಮುಂಡ ಮಾಡಿ ಶಿಕ್ಷೆ ನೀಡಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. [ಉಗ್ರರನ್ನು ಬೂಟುಗಾಲಲ್ಲಿ ತುಳಿದ ಬೆಂಗಳೂರು ವಿದ್ಯಾರ್ಥಿಗಳು]

ತಲೆ ಹೊಟ್ಟು ಕಾರಣ ನೀಡಿದ ಶಾಲೆ : ಶಾಲಾ ಆಡಳಿತ ಮಂಡಳಿ ಸಬಾಸ್ಟಿಯನ್ ಆರೋಪವನ್ನು ತಳ್ಳಿ ಹಾಕಿದೆ. ವಿದ್ಯಾರ್ಥಿಗಳ ತಲೆಯಲ್ಲಿ ಹೊಟ್ಟು ಹಾಗೂ ಹೇನುಗಳು ಇದ್ದವು. ಇದರಿಂದ ಇತರ ಮಕ್ಕಳಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಕೇಶಮಂಡನ ಮಾಡಲಾಗಿದೆ ಎಂದು ಸಮರ್ಥನೆ ನೀಡಿದೆ.

ಕೆಲವು ದಿನಗಳ ಹಿಂದೆ ನಡೆದ ವೇಲಾಂಕಣಿ ಉತ್ಸವಕ್ಕೆ ಹೋಗಿ ಬಂದಿದ್ದ ಮೂವರು ಮಕ್ಕಳ ತಲೆಯಲ್ಲಿ ಹೆಚ್ಚು ಹೇನುಗಳಾಗಿದ್ದವು. ಅಲ್ಲದೆ, ಸಬಾಸ್ಟಿನ್ ಅವರ ಮಕ್ಕಳು ಸೇರಿದಂತೆ ಐದು ವಿದ್ಯಾರ್ಥಿಗಳ ತಲೆಯಲ್ಲಿ ಹೊಟ್ಟಾಗಿತ್ತು. ಇದರಿಂದಾಗಿ ಕೇಶ ಮುಂಡನ ಮಾಡಲಾಗಿದೆ. ಇದನ್ನು ಶಿಕ್ಷೆ ಎಂದುಕೊಳ್ಳಬಾರದು ಎಂದು ಶಾಲೆಯ ಆಡಳಿತ ಮಂಡಳಿ ಹೇಳಿದೆ.

English summary
Two brothers were tonsured by the St. Joseph’s Indian High School, Bengaluru staff in school hostel as punishment for not attending classes. Father Sebastian Augustine lodged complaint in Cubbon Park Police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X