ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟೊಮೆಟೊ, ಸೊಪ್ಪು ಕೊಳ್ಳಿ: ಕ್ಯಾರೆಟ್, ಈರುಳ್ಳಿ ಸದ್ಯಕ್ಕೆ ಮರೆತುಬಿಡಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 14 : ಒಂದು ತಿಂಗಳಿನಿಂದ ಎಲ್ಲಾ ತರಕಾರಿ ಬೆಲೆಗಳು ಗಗನಕ್ಕೇರಿತ್ತು. ಆದರೆ ಇದೀಗ ಟೊಮೆಟೊ, ಸೊಪ್ಪು, ಏಲಕ್ಕಿ ಬಾಳೆಹಣ್ಣಿನ ಬೆಲೆಯಲ್ಲಿ ಇಳಿಕೆಯಾಗಿದೆ.

ಈರುಳ್ಳಿ ಮಹಾತ್ಮೆ: ಹೋಟೆಲ್ ತಿಂಡಿಗಳ ಬೆಲೆ ಏರಿಕೆ?ಈರುಳ್ಳಿ ಮಹಾತ್ಮೆ: ಹೋಟೆಲ್ ತಿಂಡಿಗಳ ಬೆಲೆ ಏರಿಕೆ?

ಕಳೆದ ಎರಡು ವಾರಗಳ ಹಿಂದೆ ಕೆ.ಜಿ.ಗೆ 60 ರೂ. ಇದ್ದ ಟೊಮೆಟೋ ಇದೀಗ 20 ರೂ.ಗೆ ಇಳಿಕೆ ಕಂಡಿದೆ. ಸೊಪ್ಪುಗಳ ದರವೂ ಗಣನೀಯ ಇಳಿಕೆಯಾಗಿದೆ. ಒಂದು ಕಂತೆಗೆ 30 ರೂ. ಇದ್ದಿದ್ದು ಇದೀಗ 10ರೂ.ಗೆ ಇಳಿಕೆಯಾಗಿದೆ. ದಾಳಿಂಬೆ, ಬಾಳೆಹಣ್ಣು ಮತ್ತಿತರೆ ಹಣ್ಣುಗಳ ಬೆಲೆಯೂ ಕಡಿಮೆಯಾಗಿದೆ.

Tometo price falls and fruits too

ಆದರೆ ಬೀನ್ಸ್, ಈರುಳ್ಳಿ, ಕ್ಯಾರೆಟ್ ತರಕಾರಿಗಳ ಬೆಲೆ ಏರುಗತಿಯಲ್ಲೇ ಸಾಗಿದೆ. ಟೊಮೆಟೋ ಮಾತ್ರ ಕೋಲಾರ ಮತ್ತಿತರ ಭಾಗಗಳಿಂದ ಹೊಸ ಬೆಳೆ ಬಂದಿದೆ. ಹೀಗಾಗಿ ಬೆಲೆಗಳು ಕಡಿಮೆಯಾಗಿದೆ. ದಾಳಿಂಬೆ, ಸೇಬು ಮತ್ತು ಬಾಳೆಹಣ್ಣು ಉತ್ತಮ ಬೆಳೆಯಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿರುವುದರಿಂದ ಬೆಲೆ ಕಡಿಮೆಯಾಗಿದೆ.

ಮಳೆ ತಂದ ಅವಾಂತರದಿಂದ ಈರುಳ್ಳಿ ಸೇರಿ ತರಕಾರಿ ಬೆಲೆ ಗಗನಕ್ಕೆಮಳೆ ತಂದ ಅವಾಂತರದಿಂದ ಈರುಳ್ಳಿ ಸೇರಿ ತರಕಾರಿ ಬೆಲೆ ಗಗನಕ್ಕೆ

ಕಳೆದ ಎರಡು ತಿಂಗಳ ಹಿಂದೆ ಹೆಚ್ಚು ಮಳೆಯಾಗಿದೆ. ಈ ಮಳೆಯಿಂದ ಕೆಲವು ಬೆಳೆಗಳು ಹಾಳಾಗಿದೆ. ಆಗ ತರಕಾರಿಗಳ ಬೆಲೆ ದಿಢೀರ್ ಏರಿಕೆಯಾಯಿತು. ಇದೀಗ ಕೆಲವು ಹೊಸ ಬೆಳೆ ಬಂದಿರುವುದರಿಂದ ಇಳಿಕೆಯಾಗಿದೆ. ಆದರೆ ಈರುಳ್ಳಿ-ಕ್ಯಾರೆಟ್ ದೀರ್ಘಾವಧಿ ಬೆಳೆಯಾಗಿರುವುದರಿಂದ ಇನ್ನೂ ಹೊಸದಾಗಿ ಬೆಳೆಗಳು ಬಂದಿಲ್ಲ. ಹೀಗಾಗಿ ಇವುಗಳ ಬೆಲೆ ಏರಿಕೆ ಮುಂದುವರೆದಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಹಣ್ಣು-ತರಕಾರಿ
ದರ. ರೂ.ಗಳಲ್ಲಿ
ಏಲಕ್ಕಿ ಬಾಳೆ 59.00
ಎಲೆಕೋಸು 32.00
ಟೊಮೆಟೊ 20.00
ಬೀಟ್ ರೂಟ್ 47.00
ಹಾಗಲಕಾಯಿ 28.00
ಕ್ಯಾರೆಟ್ ನಾಟಿ 66.00
ಕ್ಯಾರೆಟ್ ಊಟಿ 73.00
ಬೀನ್ಸ್ 50.00
ಬೆಂಡೆಕಾಯಿ 49.00
ಪಚ್ಚಬಾಳೆ 29.00
English summary
Tometo price falls and fruits too: Tometo price had come down to Rs.20 per KG from Rs.60 in last week and fruits like banana and pomegranate also decresing gradually.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X