ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಏರುತ್ತಿದೆ ಟೊಮೆಟೋ ಬೆಲೆ!

|
Google Oneindia Kannada News

ಬೆಂಗಳೂರು, ಮೇ 3: ಜನಜೀವನ ನೆಮ್ಮದಿಯಾಗಿ ಸಾಗಬೇಕಾದರೇ ಅಗತ್ಯವಸ್ತುಗಳ ಬೆಲೆ ಸ್ಥಿರವಾಗಿರಬೇಕು. ಆದರೆ ಅಕಾಲಿಕ ಮಳೆಯೋ ದಲ್ಲಾಳಿಗಳ ಕರಾಳ ದಂಧೆಯೋ ಕೆಲವು ಅಗತ್ಯ ವಸ್ತುಗಳ ಬೆಲೆ ವಿಪರೀತ ಏರಿಕೆಯನ್ನು ಕಂಡು ಬಿಡುತ್ತದೆ. ಮನೆಗೆ ಅತ್ಯಗತ್ಯವಾಗಿ ಬೇಕಾದ ಎಣ್ಣೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಗ್ರಾಹಕರ ಕಣ್ಣಲ್ಲಿ ನೀರು ತರುತ್ತಿದ್ದ ಈರುಳ್ಳಿ ಬೆಲೆ ಸ್ಥಿರವಾಗಿದೆ. ಆದರೆ ಒಂದು ವಾರದಿಂದ ಸುರಿಯುತ್ತಿರೋ ಮಳೆಯಿಂದಾಗಿ ಬೇಸಿಗೆಯಲ್ಲಿನ ನೀರಿನ ಅಭಾವದಿಂದಾಗಿ ಟೊಮೆಟೋ ಬೆಲೆ ನಿರಂತರವಾಗಿ ಏರುಗತಿಯಲ್ಲಿ ಸಾಗುತ್ತಿದೆ.

ಅಡುಗೆ ಮನೆಗೆ ಹೋದರೆ ಅಗತ್ಯವಾಗಿ ಒಂದಷ್ಟು ಪದಾರ್ಥ ಇರಲೇಬೇಕು. ಅಂಥದ್ದರಲ್ಲಿ ಟೊಮೆಟೋ ಕೂಡ ಅತ್ಯಗತ್ಯ ಪದಾರ್ಥವೇ. ತಕ್ಷಣಕ್ಕೆ ಯಾವ ಸಾಂಬರ್ ಮಾಡಬೇಕು ಅಂದರೆ ಟೊಮೆಟೋ ಸಾಂಬರ್, ತಿಂಡಿಗೆ ಟೊಮೆಟೋ ರೈಸ್, ಚಪಾತಿಗೆ ಟೊಮೆಟೋ ಗೊಜ್ಜು ಹೀಗೆ ಹೇಳುತ್ತಾ ಸಾಗಿದರೆ ಟೊಮೆಟೋ ಮಹಿಮೆ ಅಪಾರ. ಟೊಮಾಟೋಗೆ ಇಷ್ಟೇಲ್ಲಾ ಪೀಠಿಕೆಗೆ ಕಾರಣವಾಗಿದ್ದು ದಿನದಿಂದ ದಿನಕ್ಕೆ ಟೊಮಾಟೋ ಬೆಲೆ ಹೆಚ್ಚಾಗುತ್ತಿದೆ.

2 ತಿಂಗಳಿನಲ್ಲಿ ಯಶವಂತಪುರ ಎಪಿಎಂಸಿ ಸ್ಥಳಾಂತರ 2 ತಿಂಗಳಿನಲ್ಲಿ ಯಶವಂತಪುರ ಎಪಿಎಂಸಿ ಸ್ಥಳಾಂತರ

50 ರಿಂದ 60 ರೂ. ಗೆ ಏರಿಕೆ; ಬೆಂಗಳೂರಿನಲ್ಲಿ ಪ್ರತಿ ಕೆಜಿ ಟೊಮ್ಯಾಟೊ ಬೆಲೆ 60 ರೂ. ಗೆ ಹೆಚ್ಚಳವಾಗಿದೆ. ಇನ್ನು ಆನ್‌ಲೈನ್‌ನಲ್ಲಿ ಉತ್ತಮ ಗುಣಮಟ್ಟದ ಟೊಮ್ಯಾಟೊ ಬೆಲೆ 70 ರವರೆಗೆ ಮಾರಾಟವಾಗುತ್ತಿದೆ.

Tomatoes price is rising day by day in Bengaluru

ಕಳೆದ ಒಂದು ತಿಂಗಳ ಹಿಂದೆ ಕೆಜಿ ಟೊಮ್ಯಾಟೊ ದರ 10 ರಿಂದ 12 ರೂ. ಇತ್ತು. ಆದರೀಗ ಬರೋಬ್ಬರಿ 50 ರಿಂದ 60 ರೂ. ಗೆ ಟೊಮ್ಯಾಟೊ ಮಾರಾಟವಾಗುತ್ತಿದೆ. ಒಂದು ವಾರದಿಂದ ನಿರಂತರವಾಗಿ ಟೊಮ್ಯಾಟೊ ಬೆಲೆ ಏರಿಕೆಯಾಗುತ್ತಿದ್ದು ದಿಢೀರ್ ಏರಿಕೆ ಹಿನ್ನೆಲೆಯಲ್ಲಿ ಗ್ರಾಹಕರು ಕಂಗಾಲಾಗುತ್ತಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಟೊಮಾಟೋ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಬೆಲೆ ಏರಿಕೆ ಕಾರಣ; ಕೆಲ ತಿಂಗಳ ಹಿಂದೆ ಟೊಮಾಟೋ ದರ 100 ರೂ. ಗಡಿ ದಾಟಿತ್ತು. ಆಗ ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾಗಿ ಟೊಮಾಟೋ ಬೆಲೆ ಏರಿಕೆಯಾಗಿತ್ತು. ಇದೀಗ ಬೆಲೆ ಹಚ್ಚಳವಾಗಲು ಮತ್ತದೇ ಅಕಾಲಿಕ ಮಳೆ.

Tomatoes price is rising day by day in Bengaluru

ಬೇಸಿಗೆ ಹಿನ್ನಲೆಯಲ್ಲಿ ರೈತರಿಗೆ ನೀರಿನ ಅಭಾವ. ಬೇಸಿಗೆ ಕಾಲದಲ್ಲಿ ನೀರಿನ ಅಭಾವದಿಂದ ಟೊಮ್ಯಾಟೊ ಬೆಳೆ ಬೆಳೆಯಲು ರೈತರು ಹಿಂದೇಟು ಹಾಕಿದ್ದಾರೆ. ಹೊಸ ಇಳುವರಿ ಬರಲು ಮೂರರಿಂದ ನಾಲ್ಕು ತಿಂಗಳಾಗುವ ಸಾಧ್ಯತೆಯಿದ್ದು ಟೊಮಾಟೋ ಬೆಲೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ಉತ್ತಮ ಗುಣಮಟ್ಟದ ಟೊಮ್ಯಾಟೊ ಸಿಗುತ್ತಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಕೋಲಾರದಿಂದ ಬರುವ 14 ಕೆಜಿ ಬಾಕ್ಸ್ ಟೊಮ್ಯಾಟೊಗೆ 600 ರಿಂದ 800 ರೂ. ದರವಿದೆ. ಮೈಸೂರು ಭಾಗದಿಂದ ಬರುವ 22 ಕೆಜಿ ಬಾಕ್ಸ್ ಟೊಮ್ಯಾಟೊ 900 ರಿಂದ 1,100 ರೂ. ದರ.

ಸಿಲಿಕಾನ್ ಸಿಟಿ ಬೆಂಗಳೂರಿಗೆ ಅತ ಹೆಚ್ಚು ಟೊಮಾಟೋ ಬರುವುದು ಕೋಲಾರ ಮತ್ತು ಹಳೇ ಮೈಸೂರು ಭಾಗದಿಂದ. ಹೀಗಾಗಿ ಸದ್ಯ ಕೋಲಾರದಿಂದ ಬರುವ ಟೊಮಾಟೋ ಬೆಲೆ 14 ಕೆಜಿ ಬಾಕ್ಸ್ ಟೊಮ್ಯಾಟೊಗೆ 600 ರಿಂದ 800 ರೂಗೆ ಹೆಚ್ಚಾಗಿದೆ.

ಇನ್ನು ಮೈಸೂರು ಭಾಗದಿಂದ ಬರುವ ಟೊಮಾಟೋ 22 ಕೆಜಿ ಬಾಕ್ಸ್‌ಗೆ 900 ರಿಂದ 1,100ರೂ.ಗೆ ಹೆಚ್ಚಳವಾಗುತ್ತಿದೆ. ಕೆಲವು ಕಡೆ ಹಣ ಕೊಟ್ಟರು ಗುಣಮಟ್ಟದ ಟೊಮಾಟೋ ಸಿಗುತ್ತಿಲ್ಲ ಎಂಬ ದೂರು ಸಹ ಇದೆ.

Recommended Video

CSK ವಿರುದ್ಧ ಸೇಡು ತೀರಿಸಿಕೊಳ್ಳಲು ವಿರಾಟ್ ಹೇಗೆ ರೆಡಿಯಾಗಿದ್ದಾರೆ ಗೊತ್ತಾ? | Oneindia Kannad

ಟೊಮಾಟೋ ಬೆಲೆ ಏರಿಕೆಯಾಗಿರುವುದರಿಂದ ರೈತರಿಗೆ ಸಂತಸವಾಗಿದೆ. ಗ್ರಾಹಕನಿಗೆ ಬೆಲೆ ಏರಿಕೆಯ ಬಿಸಿ ತಾಗಲಿದೆ. ಇನ್ನು ಕೇವಲ ಟೊಮ್ಯಾಟೊ ಮಾತ್ರವಲ್ಲದೇ ತರಕಾರಿಗಳ ಬೆಲೆಗಳು ಹೆಚ್ಚಳವಾಗುವ ಮುನ್ಸೂಚನೆಗಳು ಕಾಣಿಸುತ್ತಿದೆ.

English summary
The price of tomatoes is rising day by day in Bengaluru. Due to summer and water shortages. Tomatoes kg 50 to 60 Rs in marker.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X