ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಟೊಮೆಟೋ ದರ 70 ರೂ.

|
Google Oneindia Kannada News

Tomato
ಬೆಂಗಳೂರು, ಜು. 17 : ರಾಜ್ಯದಲ್ಲಿ ಟೊಮೆಟೋ ಉತ್ಪಾದನೆ ಕುಸಿತವಾಗಿರುವ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಟೊಮೆಟೋ ಬೆಲೆ ಗಗನಕ್ಕೇರಿದೆ. ಮಾಲ್, ಹಾಪ್ ಕಾಮ್ಸ್ ಗಳಲ್ಲಿ ಕೆಜಿಗೆ 55-56 ರೂ. ಬೆಲೆ ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ 60-70ರೂ.ಗಳಿಗೆ ಮಾರಾಟವಾಗುತ್ತಿದೆ.

ಮುಂಗಾರು ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಟೊಮೆಟೋ ಉತ್ಪಾದನೆ ಕುಸಿತಗೊಂಡಿರುವುದು ಮತ್ತು ಹೊರ ರಾಷ್ಟ್ರಗಳಿಗೆ ರಫ್ತಾಗುತ್ತಿರುವ ಪರಿಣಾಮ ರಾಜ್ಯದಲ್ಲಿ ದರ ಹೆಚ್ಚಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ. ಮುಂಗಾರು ಮಳೆ ವಿಳಂಬದಿಂದಾಗಿ ಶೇ 50ರಷ್ಟು ಉತ್ಪಾದನೆ ಕುಸಿತಗೊಂಡಿದೆ. ಆದ್ದರಿಂದ, ಬೆಲೆಗಳು ಗಗನಕ್ಕೇರಿವೆ.

ಕಳೆದ ಒಂದು ವಾರದಿಂದ ಏರುತ್ತಿದ್ದ ಟೊಮೆಟೋ ದರ ಬುಧವಾರ ಚಿಲ್ಲರೆ ಮಾರಕಟ್ಟೆಗಳಲ್ಲಿ 60-70 ರೂ.ಗೆ ಬಂದು ನಿಂತಿದೆ. ಹಾಪ್ ಕಾಮ್ಸ್ ಮತ್ತು ಮಾಲ್ ಗಳಲ್ಲಿ ದರ 40-50ರೂ. ಆಗಿದೆ.

ಕರ್ನಾಟಕದಲ್ಲಿ ಬೆಳೆಯುವ ಟೊಮೆಟೋ ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಿಗೆ ರಫ್ತಾಗುತ್ತದೆ. ಈ ಬಾರಿ ಉತ್ಪಾದನೆ ಕುಸಿತಗೊಂಡ ಕಾರಣ ರಫ್ತು ಮತ್ತು ಸ್ಥಳೀಯ ಮಾರುಕಟ್ಟೆಗೆ ಟೊಮೆಟೋ ಬರುವುದು ಕಡಿಮೆಯಾಗಿದೆ. ಆದ್ದರಿಂದ ಬೆಲೆಗಳು ಹೆಚ್ಚಾಗಿವೆ.

ಬೆಂಗಳೂರು ನಗರಕ್ಕೆ ನಿತ್ಯ 150 ರಿಂದ 200 ಟನ್ ಟೊಮೆಟೋ ಅಗತ್ಯವಿದೆ. ರಾಜ್ಯಾದ್ಯಂತ ಸುಮಾರು 500 ಟನ್‌ ಗೂ ಅಧಿಕ ಹಣ್ಣು ಬೇಕಾಗುತ್ತದೆ. ಆದರೆ ನಮ್ಮ ರಾಜ್ಯಕ್ಕೆ ಬೇಕಾಗುವಷ್ಟು ಹಣ್ಣಿನ ಪೂರೈಕೆ ಆಗುತ್ತಿದೆ. ಹೊರ ರಾಷ್ಟ್ರಗಳಿಗೆ ರಫ್ತಾಗುತ್ತಿರುವುದರಿಂದ ಬೆಲೆ ಏರಿಕೆಯಾಗುತ್ತಿದೆ ಎಂಬುದು ವ್ಯಾಪಾರಿಗಳ ಮಾತು. [ತರಕಾರಿ ವ್ಯಾಪಾರಿಗಳಿಗೆ ನಷ್ಟ ಉಂಟುಮಾಡಿದ ಮಳೆ]

ಎಲ್ಲಿ ದರ ಎಷ್ಟು : ನಗರದ ಕೆ.ಆರ್. ಮಾರುಕಟ್ಟೆಯಲ್ಲಿ ನಾಟಿ ಟೊಮೆಟೋ ಕೆಜಿಗೆ 45 ರೂ. ಆಗಿದ್ದರೆ, ಫಾರಂ ಟೊಮೆಟೋ 40-50 ರೂ. ಆಗಿದೆ. ಹಾಪ್‌ ಕಾಮ್ಸ್ ನಲ್ಲಿ 56 ರೂ. ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ 60-70 ರೂ.ಗಳಿಗೆ ಏರಿಕೆಯಾಗಿದೆ.

ನಮ್ಮ ಮನೆಯಲ್ಲಿ ಟೊಮೆಟೋಗೆ ಜಾಗವಿಲ್ಲ : "ಉಪ್ಪಿಟ್ಟಿಗೆ ಟೊಮೆಟೋ ಖರೀದಿ ಮಾಡಲು ಬಂದೆ. ಇಲ್ಲಿನ ದರ ನೋಡಿದರೆ ಟೊಮೆಟೋ ಖರೀದಿ ಮಾಡಬಾರದು ಎಂದು ತೀರ್ಮಾನಿಸಿದ್ದೇನೆ. ದರ ಕಡಿಮೆ ಆಗುವ ತನಕ ನಮ್ಮ ಮನೆಯಲ್ಲಿ ಟೊಮೆಟೋಗೆ ಜಾಗವಿಲ್ಲ" ಎನ್ನುತ್ತಾರೆ ಕತ್ರಿಗುಪ್ಪೆ ಬಳಿಯ ಟೊಮೆಟೋ ಖರೀದಿಗೆ ಬಂದಿದ್ದ ಗೃಹಿಣಿ ಅನಿತಾ.

English summary
Vegetable prices have skyrocketed in Bangalore. Tomatoes have seen the sharpest hike in prices, touching Rs 70 kg in some parts of the city. Failed monsoon rain hiked tomato prices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X