ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟೊಮೆಟೊ ಬೆಲೆ ಏಕಾಏಕಿ ಏರಿಕೆ; ಕೆ.ಜಿ.ಗೆ ಗರಿಷ್ಠ 100 ರೂ ತಲುಪುವ ಸಾಧ್ಯತೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 10: ಕಳೆದ ವಾರದಿಂದ ಬೆಂಗಳೂರು ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಟೊಮೆಟೊ ಬೆಲೆ ಏಕಾಏಕಿ ಏರಿಕೆಯಾಗಿದೆ. ಸೆಪ್ಟೆಂಬರ್ ಆರಂಭದಲ್ಲಿ ಕೆ.ಜಿಗೆ 10 ರೂ ಇದ್ದ ಟೊಮೆಟೊ ಬೆಲೆ ಕೊನೆಗೆ ಕೆ.ಜಿಗೆ ಗರಿಷ್ಠ 15 ರೂಗೆ ತಲುಪಿತ್ತು. ಮತ್ತೆ ಕಳೆದ ಐದಾರು ದಿನಗಳಿಂದ ಬೆಲೆ ಇದ್ದಕ್ಕಿದ್ದಂತೆ ಏರಿಕೆಯಾಗಿದೆ.

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರಿಂದಾಗಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಟೊಮೆಟೊ ಬೆಲೆ 60 ರೂಗೆ ತಲುಪಿದೆ.

ಟೊಮ್ಯಾಟೊ ಬೆಲೆ ಏರಿಕೆ, ಕೇಂದ್ರ ಸಚಿವರ ಪಾಸ್ವಾನ್ ಸಮರ್ಥನೆಟೊಮ್ಯಾಟೊ ಬೆಲೆ ಏರಿಕೆ, ಕೇಂದ್ರ ಸಚಿವರ ಪಾಸ್ವಾನ್ ಸಮರ್ಥನೆ

ಇದೇ ರೀತಿ ಪರಿಸ್ಥಿತಿ ಮುಂದುವರೆದರೆ, ಬೆಂಗಳೂರಿನಲ್ಲಿ ಟೊಮೆಟೊ ಬೆಲೆ ಕೆ.ಜಿ.ಗೆ ನೂರು ರೂ ತಲುಪಬಹುದು ಎಂದು ವರ್ತಕರು ಅಂದಾಜಿಸಿದ್ದಾರೆ. ಸರಿಯಾದ ಪೂರೈಕೆ ಇಲ್ಲದ ಕಾರಣ, ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದ್ದರಿಂದ ದಿಢೀರ್ ಆಗಿ ಬೆಲೆ ವ್ಯತ್ಯಾಸ ಕಂಡುಬಂದಿದೆ.

 Tomato Prices Reached 70 Rs Per KG In Bengaluru

ಬೆಂಗಳೂರು ಗ್ರಾಮಾಂತರ ಹಾಗೂ ಮಹಾರಾಷ್ಟ್ರದಿಂದ ಟೊಮೆಟೊ ಪೂರೈಕೆ ಕೊರತೆಯಿಂದಾಗಿ ಬೆಲೆ ಹಠಾತ್ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಕರ್ನಾಟಕ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ ಹಾಗೂ ಒಡಿಶಾ ರಾಜ್ಯಗಳು ದೇಶದಲ್ಲಿ ಹೆಚ್ಚು ಟೊಮ್ಯಾಟೊ ಉತ್ಪಾದಿಸುವ ರಾಜ್ಯಗಳಾಗಿವೆ.

ಕಳೆದ ತಿಂಗಳ ಕೊನೆಯಲ್ಲಿ ನೆರೆಯ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನಿರಂತರ ಮಳೆಯಾಗಿದೆ. ಕಡಿಮೆ ತಾಪಮಾನದಿಂದಾಗಿ ಟೊಮೆಟೊ ಬೆಳೆಗೆ ತೀವ್ರ ಹೊಡೆತ ಬಿದ್ದಿದೆ. ನಿರಂತರ ಮಳೆಯಿಂದಾಗಿ ಟೊಮೆಟೊ ಬೆಳೆಯಲು ಸಾಧ್ಯವಾಗಿಲ್ಲ. ಮಳೆ ಪರಿಸ್ಥಿತಿಯಿಂದಾಗಿ ಬೆಳೆ ಉತ್ಪಾದನೆ ಮೇಲೆ ಶೇ 50ರಷ್ಟು ಪರಿಣಾಮ ಬೀರಿದೆ ಎನ್ನಲಾಗಿದೆ.

ಪಾತಾಳಕ್ಕೆ ಕುಸಿದ ಈರುಳ್ಳಿ ದರ: ರೈತರ ಕಣ್ಣಲ್ಲಿ ನೀರುಪಾತಾಳಕ್ಕೆ ಕುಸಿದ ಈರುಳ್ಳಿ ದರ: ರೈತರ ಕಣ್ಣಲ್ಲಿ ನೀರು

ಕೋಲಾರ, ಚಿಂತಾಮಣಿ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಮಾಲೂರು, ಮಾಗಡಿ ಹಾಗೂ ಸುತ್ತಮುತ್ತಲ ಪ್ರದೇಶದಿಂದ ಎಪಿಎಂಸಿಗೆ ಟೊಮೆಟೊ ಸಾಗಣೆಯಲ್ಲಿ 40% ತಗ್ಗಿದೆ. 'ಮಹಾರಾಷ್ಟ್ರದಿಂದಲೂ ನಮಗೆ ಟೊಮೆಟೊ ಬರುತ್ತಿಲ್ಲ. ಹೀಗಾಗಿ ಟೊಮೆಟೊಗೆ ಬೇಡಿಕೆ ಹೆಚ್ಚಿದ್ದು, ಸಾಗಾಟ ಕಡಿಮೆಯಾಗಿರುವುದರಿಂದ ಬೆಲೆ ಏರಿಕೆಯಾಗುತ್ತಿದೆ' ಎಂದು ತರಕಾರಿ ಮಾರಾಟ ಸಂಘದ ಅಧ್ಯಕ್ಷ ಗೋಪಿ 'ಡೆಕ್ಕನ್ ಹೆರಾಲ್ಡ್‌'ಗೆ ತಿಳಿಸಿದ್ದಾರೆ.

 Tomato Prices Reached 70 Rs Per KG In Bengaluru

'ಪ್ರತಿ ದಿನ ಎರಡು ಟನ್‌ಗಳಷ್ಟು ಟೊಮೆಟೊ ಬೆಳೆ ಪೂರೈಕೆಯಾಗುತ್ತದೆ. ಆದರೆ ಒಂದು ವಾರದಿಂದ ಟೊಮೆಟೊ ಸಾಗಣೆ ಮಟ್ಟ ಕಡಿಮೆಯಾಗಿದೆ. ಇದರಿಂದಾಗಿ ಬೆಲೆ ಏರಿಕೆಯಾಗಿದೆ. ದೇ ರೀತಿ ಇನ್ನೂ ಕೆಲವು ದಿನ ಮಳೆ ಮುಂದುವರೆದರೆ ಟೊಮೆಟೊ ಬೆಲೆ ಇನ್ನಷ್ಟು ಏರಿಕೆಯಾಗುವುದು ಖಚಿತ. ಕೆ.ಜಿ.ಗೆ ಗರಿಷ್ಠ 100 ರೂ ತಲುಪಬಹುದು. ಇದರಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳಲಿದೆ' ಎಂದು ವರ್ತಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Recommended Video

Dhoni ಪಂದ್ಯ ಮುಗಿದ ನಂತರ ಮಾಡಿದ್ದೇನು | Oneindia Kannada

ಬೆಂಗಳೂರಿನಲ್ಲಿ ಟೊಮೆಟೊ ಬೆಲೆ ಕಳೆದ ವಾರ ದಿಢೀರ್ ಏರಿಕೆಯಾಗಿದೆ. ಕೆ.ಜಿ.ಗೆ ಕನಿಷ್ಠ 30 ರೂ ಬೆಲೆಯಿಂದ ಗರಿಷ್ಠ 70ರೂ ಬೆಲೆವರೆಗೂ ಮಾರಾಟವಾಗುತ್ತಿದೆ. ಮಳೆ ಮುಂದುವರೆದರೆ ಈ ಬೆಲೆ 100 ರೂ ವರೆಗೂ ತಲುಪುವ ಅಂದಾಜು ಮಾಡಲಾಗಿದೆ.

English summary
The retail price of tomatoes has reached Rs 60 in various districts in Karnataka, especially Bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X