• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಫಾಸ್ಟ್‌ಟ್ಯಾಗ್ ಇಲ್ಲವೆಂದು ಕಾರಿನ ಗಾಜು ಒಡೆದ ಟೋಲ್ ಸಿಬ್ಬಂದಿ

|
   FasTag creates Drama , Toll Plaza employee breaks car glass

   ಬೆಂಗಳೂರು, ಫೆಬ್ರವರಿ 18 : ರಾಷ್ಟ್ರೀಯ ಹೆದ್ದಾರಿಯ ಟೋಲ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಬಳಕೆ ಕಡ್ಡಾಯವಾಗಿದೆ. ಫಾಸ್ಟ್‌ಟ್ಯಾಗ್ ಇಲ್ಲ ಎಂಬ ಕಾರಣಕ್ಕೆ ಟೋಲ್ ಸಿಬ್ಬಂದಿ ಕಾರು ಚಾಲಕನ ಮೇಲೆ ದರ್ಪ ತೋರಿದ್ದು, ಕಾರನ್ನು ಜಖಂಗೊಳಿಸಿದ್ದಾರೆ.

   ದೇವನಹಳ್ಳಿಯ ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯ ಟೋಲ್‌ನಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಟೋಲ್ ಸಿಬ್ಬಂದಿ ಮತ್ತು ಕಾರು ಚಾಲಕನ ನಡುವೆ ವಾಗ್ವಾದ ನಡೆದಿದ್ದು, ಈ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

   ಫೆ.29ರ ತನಕ ಫಾಸ್ಟ್ ಟ್ಯಾಗ್ ಶುಲ್ಕ ಪಾವತಿಸದೆ ಮುನ್ನಡೆಯಿರಿ

   ಫಾಸ್ಟ್‌ಟ್ಯಾಗ್ ವ್ಯವಸ್ಥೆ ಇಲ್ಲದ ಕಾರು ಟೋಲ್ ಫ್ಲಾಜಾ ಬಳಿ ಬಂದಾಗ ಸಿಬ್ಭಂದಿ ತಡೆದರು. ಫಾಸ್ಟ್‌ಟ್ಯಾಗ್ ಇಲ್ಲದ ಕಾರಣ ದುಪ್ಪಟ್ಟು ದಂಡವನ್ನು ಹಾಕಿದರು. ಇದರಿಂದಾಗಿ ಚಾಲಕ ಮತ್ತು ಸಿಬ್ಬಂದಿ ನಡುವೆ ಮಾತಿನ ಸಮರ ನಡೆಯಿತು.

   ನೈಸ್ ಕಂಪನಿಗೆ ಸೇರಿದ ಭೂಮಿ ವಶಕ್ಕೆ ಪಡೆಯಲಿದೆ ಸರ್ಕಾರ?

   ಆಗ ಟೋಲ್ ಸಿಬ್ಬಂದಿಗಳು ಕಾರಿನ ಚಾಲಕನ ಜೊತೆ ಜಗಳವಾಡಿದ್ದು, ಕಾರಿನ ಗಾಜನ್ನು ಜಖಂಗೊಳಿಸಿದ್ದಾರೆ. ಕಾರಿನ ಚಾಲಕ ಈ ಕುರಿತು ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

   ಕಾರವಾರ; ಸರ್ಕಾರಿ ಬಸ್ಸಲ್ಲಿ ಹೋಗುವವರಿಗೂ ಟೋಲ್ ಹೊರೆ, ಇದು ಯಾವ ನ್ಯಾಯ?

   ಕಾರಿನ ಚಾಲಕ ಮಾಧ್ಯಮಗಳ ಜೊತೆ ಮಾತನಾಡಿದ್ದು, "ಹೆಬ್ಭಾಳದಿಂದ ಏರ್ ಪೋರ್ಟ್‌ಗೆ ಹೋಗಿದ್ದೆ. 6.30ರ ಸುಮಾರಿಗೆ ವಾಪಸ್ ಬರುವಾಗ ಫಾಸ್ಟ್‌ಟ್ಯಾಗ್ ಲೈನ್ ಜಾಮ್ ಆಗಿತ್ತು. ಬೇರೆ ಎರಡು ಲೈನ್ ಓಪನ್ ಇತ್ತು" ಎಂದರು.

   "ಬೇರೆ ಲೈನ್‌ನಲ್ಲಿ ಹೋಗಲು ಅವರು ಬಿಟ್ಟರು ಪೇಟಿಎಂನಲ್ಲಿ ದುಡ್ಡಿತ್ತು. ಅಲ್ಲಿಗೆ ಹೋದರೆ ಬ್ಲಾಕ್ ಲಿಸ್ಟ್ ಆಗಿದೆ ಎಂದರು. ಆಗಲೇ 20 ನಿಮಿಷ ಲೇಟ್ ಆಗಿತ್ತು. ಒಂದು ರೌಂಡ್ ಹೋಗಿ ವಾಪಸ್ ಬರುವಂತೆ ಹೇಳಿದರು. ನಾನು ಮುಂದೆ ಹೋದಾಗ ಗಾಜು ಒಡೆದರು" ಎಂದು ಚಾಲಕ ಮಾಹಿತಿ ನೀಡಿದರು.

   "ಗಾಜು ಒಡೆದಿದ್ದನ್ನು ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ಬೈದರು. 12 ಜನರು ಹೊಡೆಯೋಕೆ ಬಂದರು. ಆಗ ನಮ್ಮ ಸಂಘಕ್ಕೆ ಮಾಹಿತಿ ನೀಡಿದೆ. ಸಂಘದವರು ಹೇಳಿದಂತೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ. ಫಾಸ್ಟ್‌ಟ್ಯಾಗ್ ವ್ಯವಸ್ಥೆ ಇಲ್ಲಿ ಸರಿ ಇಲ್ಲ, ಅದನ್ನು ಸರಿ ಮಾಡುವ ಬದಲು ಡ್ರೈವರ್ ಮೇಲೆ ದರ್ಪ ತೋರಿಸುತ್ತಿದ್ದಾರೆ" ಎಂದು ಆರೋಪಿಸಿದರು.

   English summary
   Using FASTag in National Highways across India is mandatory. Devanahalli toll plaza employees attacked car driver for not using FASTag.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X