ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೆ ಬಂದಿಳಿದ ಮಲೇಷಿಯನ್ ವಿಮಾನ

By Mahesh
|
Google Oneindia Kannada News

ಬೆಂಗಳೂರು, ಏ.21: ಮಲೇಷ್ಯಾದಿಂದ ಬೆಂಗಳೂರಿಗೆ ಹೊರಟಿದ್ದ ಎಂಎಚ್192 ವಿಮಾನವು ಟೇಕ್ ಆಫ್ ಆದ ಸ್ವಲ್ಪ ಹೊತ್ತಲ್ಲೇ ಕೌಲಾಲಂಪುರ ನಿಲ್ದಾಣಕ್ಕೆ ವಾಪಸಾದ ಘಟನೆ ಭಾನುವಾರ ರಾತ್ರಿ ನಡೆದಿತ್ತು. ವಿಮಾನದ ಟೈರ್ ಸ್ಫೋಟಗೊಂಡಿದ್ದ ಕಾರಣ ವಿಮಾನ ಹಿಂತಿರುಗಿತ್ತು. ರಾತ್ರಿ 11.40ರ ವೇಳೆಗೆ ವಿಮಾನವು ಸುರಕ್ಷಿತವಾಗಿ ಕೆಳಗಿಳಿಸಲಾಗಿತ್ತು. ಈಗ ವಿಮಾನ ತಡವಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ತ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಲ್ಯಾಂಡ್ ಆಗಿದೆ.

MH192 ಮಲೇಷಿಯನ್ ವಿಮಾನದಲ್ಲಿದ್ದ ಎಲ್ಲ 159 ಮಂದಿ ಪ್ರಯಾಣಿಕರು, 7 ಮಂದಿ ಸಿಬ್ಬಂದಿ ಸೇರಿದಂತೆ ಎಲ್ಲ 166 ಮಂದಿಯೂ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೌಲಾಲಂಪುರದಿಂದ ಬೀಜಿಂಗ್ ಗೆ ತೆರಳಬೇಕಿದ್ದ ಎಂಎಚ್ 370 ವಿಮಾನ ಮಾರ್ಗ ಮಧ್ಯದಲ್ಲಿ ಕಣ್ಮರೆಯಾದ ದುರಂತದ ಬೆನ್ನಲ್ಲೇ ಈ ವಿಮಾನದ ಸುರಕ್ಷತೆ ಬಗ್ಗೆ ಎಲ್ಲರೂ ಆತಂಕ ವ್ಯಕ್ತಪಡಿಸಿದ್ದರು. ಮಲೇಷಿಯನ್ ವಿಮಾನ ಸಂಸ್ಥೆ ಟ್ವೀಟ್ ಮಾಡಿ ಪ್ರಯಾಣಿಕರು ಸೇಫ್ ಎಂದು ಪ್ರಕಟಿಸಿದ್ದಾರೆ.

ಉಳಿದಂತೆ ಇಂದಿನ ಚಿತ್ರಗಳಲ್ಲಿ ಸುದ್ದಿಗಳತ್ತ ಗಮನ ಹರಿಸಿದರೆ, ವ್ಯಾಟಿಕನ್ ನಲ್ಲಿ ಈಸ್ಟರ್ ಸಂಭ್ರಮ, ಮೊನಾಕೋ ಟೆನ್ನಿಸ್ ಟೂರ್ನಿಯಲ್ಲಿ ಫೆಡರರ್ ಗೆ ಆಘಾತ, ಬೀಜಿಂಗ್ ನಲ್ಲಿ ಹೊಚ್ಚ ಹೊಸ ಕಾರು, ದೆಹಲಿಯ ಚಿಟ್ಟೆ, ಜಂತರ್ ಮಂತರ್ ಬಳಿ ನೃತ್ಯ, ಮುಂಬೈ ಫ್ಯಾಷನ್ ಶೋ ಮುಂತಾದ ಚಿತ್ರಗಳಿವೆ...

ಪ್ರಯಾಣಿಕರು ಸೇಫ್ ಎಂದು ಪ್ರಕಟಿಸಿದ್ದಾರೆ

ಮಲೇಷಿಯನ್ ವಿಮಾನ ಸಂಸ್ಥೆ ಟ್ವೀಟ್ ಮಾಡಿ ಪ್ರಯಾಣಿಕರು ಸೇಫ್ ಎಂದು ಪ್ರಕಟಿಸಿದ್ದಾರೆ.

ಕೆಂಪೇಗೌಡ ಅಂತಾರಾಷ್ತ್ರೀಯ ವಿಮಾನ ನಿಲ್ದಾಣದಲ್ಲಿ

ಕೆಂಪೇಗೌಡ ಅಂತಾರಾಷ್ತ್ರೀಯ ವಿಮಾನ ನಿಲ್ದಾಣದಲ್ಲಿ

ಮಲೇಷ್ಯಾದಿಂದ ಬೆಂಗಳೂರಿಗೆ ಹೊರಟಿದ್ದ ಎಂಎಚ್192 ವಿಮಾನವು ಟೇಕ್ ಆಫ್ ಆದ ಸ್ವಲ್ಪ ಹೊತ್ತಲ್ಲೇ ಕೌಲಾಲಂಪುರ ನಿಲ್ದಾಣಕ್ಕೆ ವಾಪಸಾದ ಘಟನೆ ಭಾನುವಾರ ರಾತ್ರಿ ನಡೆದಿತ್ತು. ವಿಮಾನದ ಟೈರ್ ಸ್ಫೋಟಗೊಂಡಿದ್ದ ಕಾರಣ ವಿಮಾನ ಹಿಂತಿರುಗಿತ್ತು. ಈಗ ವಿಮಾನ ತಡವಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ತ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಲ್ಯಾಂಡ್ ಆಗಿದೆ.

ನವದೆಹಲಿಯಲ್ಲಿ ಕಮಲ್ ಸಿಕ್ಕ ಕಮಾಲ್

ನವದೆಹಲಿಯಲ್ಲಿ ಕಮಲ್ ಸಿಕ್ಕ ಕಮಾಲ್

ನವದೆಹಲಿಯಲ್ಲಿ ಪಿಟಿಐ ಛಾಯಾಗ್ರಹಕ ಕಮಲ್ ಕಿಶೋರ್ ಕೆಮೆರಾ ಕಣ್ಣಿಗೆ ಸಿಕ್ಕ ಕಮಾಲ್. ಒಂದೇ ಹೂವಿನ ಮಕರಂದ ಹೀರಲು ಚಿಟ್ಟೆ ಹಾಗೂ ಜೇನ್ನೊಣದ ನಡುವೆ ಪೈಪೋಟಿ

ಅಮೃತಾ ರಾವ್ ಫ್ಯಾಷನ್ ಶೋ

ಅಮೃತಾ ರಾವ್ ಫ್ಯಾಷನ್ ಶೋ

Ramp for Champs ಹೆಸರಿನಲ್ಲಿ ನಡೆದ ಸ್ಮೈಲ್ ಫೌಂಡೇಷನ್ ಅವರ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಫ್ಯಾಷನ್ ಶೋ

ವ್ಯಾಟಿಕನ್ ನಲ್ಲಿ ಈಸ್ಟರ್ ಹಬ್ಬ ಚಿತ್ರ

ವ್ಯಾಟಿಕನ್ ನಲ್ಲಿ ಈಸ್ಟರ್ ಹಬ್ಬ ಚಿತ್ರ

ವ್ಯಾಟಿಕನ್ ನ ಸಂತ ಪೀಟರ್ಸ್ ವೃತ್ತದಲ್ಲಿ ಈಸ್ಟರ್ ಹಬ್ಬ ಆಚರಣೆಗಾಗಿ ಸೇರಿರುವ 100,000ಕ್ಕೂ ಅಧಿಕ ಮಂದಿಯನ್ನು ಫಿಶ್ ಐ ತಂತ್ರ ಬಳಸಿ ಸೆರೆಹಿಡಿದಾಗ ಕಾಣಿಸಿದ್ದು ಹೀಗೆ AP/PTI

ದಕ್ಷಿಣ ಕೊರಿಯಾದಲ್ಲಿ ವಿಶೇಷ ಪ್ರಾರ್ಥನೆ

ದಕ್ಷಿಣ ಕೊರಿಯಾದಲ್ಲಿ ವಿಶೇಷ ಪ್ರಾರ್ಥನೆ

ಶಾಲಾ ಮಕ್ಕಳ ಪ್ರವಾಸಕ್ಕೆ ತೆರಳಿದ್ದ 470 ಜನರಿದ್ದ ಹಡಗು ಮುಳುಗಿದ್ದು, ನೂರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ ಘಟನೆ ಇತ್ತೀಚೆಗೆ ನಡೆದಿದೆ. ಬದುಕುಳಿದ ಅಥವಾ ನಾಪತ್ತೆಯಾಗಿರುವ 300ಕ್ಕೂ ಅಧಿಕ ಜನರಿಗಾಗಿ ಅನ್ಸಾನ್ ನಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ. 350ಕ್ಕೂ ಅಧಿಕ Danwon ಹೈಸ್ಕೂಲ್ ವಿದ್ಯಾರ್ಥಿಗಳು, 100 ಜನ ಪ್ರಯಾಣಿಕರು 12 ಜನ ಸಿಬ್ಬಂದಿ ಈ ಹಡಗಿನಲ್ಲಿದ್ದರು

ಹೊಚ್ಚ ಹೊಸ ಕ್ರೀಡಾ ಕಾರು

ಹೊಚ್ಚ ಹೊಸ ಕ್ರೀಡಾ ಕಾರು

ಬೀಜಿಂಗ್ ನ ಆಟೋ ಪ್ರದರ್ಶನದಲ್ಲಿ ಕಂಡ ಆಸ್ಟ್ರಿಯಾ ಕಂಪನಿ KYM ತಯಾರಿಸಿರುವ ಹೊಸ ಕ್ರೀಡಾವಾಹನ

ಮೊನಾಕೋದಲ್ಲಿ ಫೆಡರರ್ ಗೆ ಆಘಾತ

ಮೊನಾಕೋದಲ್ಲಿ ಫೆಡರರ್ ಗೆ ಆಘಾತ

ಮೊನಾಕೋದಲ್ಲಿ ಫೆಡರರ್ ಗೆ ಆಘಾತವಾಗಿದ್ದು ಸ್ವಿಟ್ಜರ್ಲೆಂಡ್ ನ ಸಹ ಆಟಗಾರ ವಾವರಿಂಕ4-6, 7-6, 6-2. ರಲ್ಲಿ ಫೆಡರರ್ ಸೋಲಿಸಿ ಮಾಂಟೆ ಕಾರ್ಲೋ ಟೂರ್ನಿ ಕಪ್ ಎತ್ತಿದ್ದಾರೆ.AP/PTI

ಜಂತರ್ ಮಂತರ್ ಬಳಿ ನೃತ್ಯ

ಜಂತರ್ ಮಂತರ್ ಬಳಿ ನೃತ್ಯ

ಜಂತರ್ ಮಂತರ್ ಬಳಿ ಜನ ಜಾಗೃತಿಗಾಗಿ International Indecency Prevention ಸಂಸ್ಥೆಯಿಂದ ನೃತ್ಯ

English summary
Todays news stories in pics around the world: The Malaysian plane heading for India's Bangalore city with 166 people on board had to return to Kuala Lumpur late Sunday after developing technical problem during the take off, reportedly.Oneindia News brings to you interesting photographs from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X