ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭೂಮಿಯ ಸುತ್ತ ವಿಶಿಷ್ಟ ಸಂಗತಿಗಳ ಸುದ್ದಿ-ಚಿತ್ರ

By Mahesh
|
Google Oneindia Kannada News

ಬೆಂಗಳೂರು, ಏ.22: ಕರ್ನಾಟಕದ ಕ್ರೀಡಾಪ್ರೇಮಿಗಳ ಪಾಲಿಗೆ ಈ ವರ್ಷ ಆಶಾದಾಯಕವಾಗಿ ಕಾಣುತ್ತಿದೆ. ಕ್ರಿಕೆಟ್ ತಂಡ ರಣಜಿ ಸೇರಿದಂತೆ ದೇಶಿ ಕ್ರಿಕೆಟ್ ನ ಮೂರು ಪ್ರಮುಖ ಕಪ್ ಎತ್ತಿವೆ. ಹಾಕಿ ತಂಡ ಕೂಡಾ ಉತ್ತಮ ಸಾಧನೆ ತೋರುತ್ತಿದೆ. ಈಗ ಫುಟ್ಬಾಲ್ ಇಂಡಿಯನ್ ಲೀಗ್ ಗೆ ಮೊದಲ ಬಾರಿಗೆ ಎಂಟ್ರಿಕೊಟ್ಟ ಬೆಂಗಳೂರು ತಂಡ ಭರ್ಜರಿ ಪ್ರದರ್ಶನ ನೀಡಿ ಕಪ್ ತನ್ನದಾಗಿಸಿಕೊಂಡಿದೆ.

ಮರ್ಗೋವಾದಲ್ಲಿ ನಡೆದ ಡೆಂಪೋ ವಿರುದ್ಧದ ಅಂತಿಮ ಹಣಾಹಣಿಯಲ್ಲಿ ಸುನಿಲ್ ಛೇಟ್ರಿ ನೇತೃತ್ವದ ಬೆಂಗಳೂರು ಫುಟ್ಬಾಲ್ ಕ್ಲಬ್ 4-2 ಗೋಲುಗಳ ಅಂತರದಿಂದ ವಿಜಯದ ಕೇಕೆ ಹಾಕಿತು. ಪಂದ್ಯದಲ್ಲಿ ಸೀನ್ ರೂನಿ, ರಾಬಿನ್ ಸಿಂಗ್, ಜಾನ್ ಮೆನಿಯಂಗರ್ ಹಾಗೂ ಸುನಿಲ್ ಛೆಟ್ರಿ ಅವರು ಬೆಂಗಳೂರು ಎಫ್‌ಸಿ ಪರ ಗೋಲು ದಾಖಲಿಸಿದರು. ಡೆಂಪೊ ಪರ ಬೆಟೋ ಮತ್ತು ರೋಮೆಯೋ ಫೆರ್ನಾಂಡೀಸ್ ಗೋಲು ದಾಖಲಿಸಿದರು. ಬೆಂಗಳೂರು ಎಫ್ ‌ಸಿ 44 ಅಂಕಗಳನ್ನು ಗಳಿಸಿ ಛಾಂಪಿಯನ್ ಎನಿಸಿದರೆ ಈಸ್ಟ್ ಬೆಂಗಾಲ್ 40 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

1977ರ ಬಳಿಕೆ ರಾಜ್ಯಕ್ಕೆ ದೇಶಿ ಫುಟ್ಬಾಲ್ ಪ್ರಶಸ್ತಿ ಒಲಿದು ಬಂದಿದೆ. ಕರ್ನಾಟಕದ ಐಟಿಐ ತಂಡ 1977ರಲ್ಲಿ ಮೋಹನ್ ಬಾಗನ್ ವಿರುದ್ಧ ಜಯ ಗಳಿಸಿ ಕಪ್ ಗಳಿಸಿತ್ತು. ಬೆಂಗಳೂರು ಎಫ್ ಸಿ ತಂಡ 23 ಪಂದ್ಯಗಳಲ್ಲಿ 13 ಗೆಲುವು, 5 ಸೋಲು, 5 ಡ್ರಾದೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತ್ತು. ಐ ಲೀಗ್ ನ ಕಳೆದ ಬಾರಿ ಚಾಂಪಿಯನ್ಸ್ ಚರ್ಚಿಲ್ ಬ್ರದರ್ಸ್ ಈ ಬಾರಿ ಕಳಪೆ ಪ್ರದರ್ಶನ ನೀಡಿದೆ.

ಉಳಿದಂತೆ, ಚಿತ್ರಗಳಲ್ಲಿ ವಿಶ್ವ ಭೂ ದಿನಾಚರಣೆ, ನೇಪಾಳಿಗಳ ನೋವು, ದಕ್ಷಿಣ ಕೊರಿಯಾ ಹಡಗು ದುರಂತ, ಬೋಸ್ಟನ್ ಮ್ಯಾರಥಾನ್ ಮುಂತಾದ ಚಿತ್ರಗಳಿವೆ ತಪ್ಪದೇ ನೋಡಿ..

ಬಿಎಫ್ ಸಿಗೆ ಚೊಚ್ಚಲ ಐ ಲೀಗ್ ಪ್ರಶಸ್ತಿ

ಬಿಎಫ್ ಸಿಗೆ ಚೊಚ್ಚಲ ಐ ಲೀಗ್ ಪ್ರಶಸ್ತಿ

ಬೆಂಗಳೂರು ಫುಟ್ಬಾಲ್ ಕ್ಲಬ್ ಬಲಿಷ್ಠ ಡೆಂಪೋ ವಿರುದ್ಧ 4-2ರ ಗೋಲುಗಳ ಅಂತರದಲ್ಲಿ ಜಯ ದಾಖಲಿಸಿದೆ.

ಸುನಿಲ್ ಛೆಟ್ರಿ ಉತ್ತಮ ಪ್ರದರ್ಶನ

ಸುನಿಲ್ ಛೆಟ್ರಿ ಉತ್ತಮ ಪ್ರದರ್ಶನ

ಈ ಗೆಲುವಿನೊಂದಿಗೆ ಬೆಂಗಳೂರು ಕ್ಲಬ್ 2015ರ ಏಷ್ಯನ್ ಫೆಡರೇಷನ್ ಕಪ್ ಗೂ ಅರ್ಹತೆ ಪಡೆದುಕೊಂಡಿದೆ. ಭಾರತದಲ್ಲಿ ಕ್ಲಬ್ ಗಳ ನಡುವೆ ನಡೆಯುತ್ತಿದ್ದ ಎನ್ ಎಫ್ ಎಲ್ ಟೂರ್ನಿಯನ್ನು 2007-08ರಿಂದ ಐ-ಲೀಗ್ ಎಂದು ನಾಮಕರಣ ಮಾಡಲಾಗಿದೆ. ಡೆಂಪೊ ಮೂರು ಬಾರಿ ಪ್ರಶಸ್ತಿ ಗೆದ್ದಿದೆ. ನಂತರ ಚರ್ಚಿಲ್ ಬ್ರದರ್ಸ್ ಎರಡು ಬಾರಿ,ಸಲ್ಗಾಂವ್ಕರ್ ಎಫ್ ಸಿ ಒಮ್ಮೆ ಕಪ್ ಎತ್ತಿದೆ. (ಪಿಟಿಐ)

ಒಸ್ಮಾನಾಬಾದಿನಲ್ಲಿ ಆಲಿಕಲ್ಲು ಮಳೆ

ಒಸ್ಮಾನಾಬಾದಿನಲ್ಲಿ ಆಲಿಕಲ್ಲು ಮಳೆ

ಮಹಾರಾಷ್ಟ್ರದ ಒಸ್ಮಾನಾಬಾದಿನಲ್ಲಿ ಇತ್ತೀಚೆಗೆ ಬಿದ್ದ ಆಲಿಕಲ್ಲು ಮಳೆಯಿಂದ ಹಿಮವೃತಗೊಂಡ ರಸ್ತೆಗಳು

ಬೋಸ್ಟನ್ ನಲ್ಲಿ ವಿಶಿಷ್ಟ ಮ್ಯಾರಥಾನ್

ಬೋಸ್ಟನ್ ನಲ್ಲಿ ವಿಶಿಷ್ಟ ಮ್ಯಾರಥಾನ್

ಬೋಸ್ಟನ್ ನಲ್ಲಿ ವಿಶಿಷ್ಟ ಮ್ಯಾರಥಾನ್ ಆಯೋಜನೆಗೊಂಡಿತ್ತು. ಕಳೆದ ವರ್ಷ ನಡೆದ ಬಾಂಬ್ ಸ್ಫೋಟಕ್ಕೆ ಬಲಿಯಾದವರ ಸ್ಮರಣಾರ್ಥವಾಗಿ ವಿವಿಧ ಕ್ಷೇತ್ರದ ಗಣ್ಯರು ಇದರಲ್ಲಿ ಪಾಲ್ಗೊಂಡಿದ್ದರು. ಸ್ಫೋಟದಲ್ಲಿ ಗಾಯಗೊಂಡ ಸೆಲೆಸ್ಟೆ, ಅಕಾಬ್ಬೊ ಮುಂತಾದವರು ಕೂಡಾ 118ನೇ ಬೋಸ್ಟನ್ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದರು.

ಶಾರ್ಜಾದಲ್ಲಿ ಚಿಯರ್ ಗರ್ಲ್ಸ್ ನೃತ್ಯ

ಶಾರ್ಜಾದಲ್ಲಿ ಚಿಯರ್ ಗರ್ಲ್ಸ್ ನೃತ್ಯ

ಶಾರ್ಜಾದಲ್ಲಿ ಚಿಯರ್ ಗರ್ಲ್ಸ್ ನೃತ್ಯ ಅನುಮತಿ ಇದ್ದರೂ ಅರಬ್ ನಾಡಲ್ಲಿ ಎಲ್ಲಾ ತಂಡಗಳ ಚಿಯರ್ ಗರ್ಲ್ಸ್ ಮೈತುಂಬಾ ಬಟ್ಟೆ ತೊಡುವುದು ಅನಿವಾರ್ಯವಾಗಿದೆ. ಚಿತ್ರ: PTI Photo / BCCI

ನೈಜೀರಿಯಾದ ಸಾಂಪ್ರದಾಯಿಕ ನೃತ್ಯ

ನೈಜೀರಿಯಾದ ಸಾಂಪ್ರದಾಯಿಕ ನೃತ್ಯ

ನೈಜೀರಿಯಾದ ಸಾಂಪ್ರದಾಯಿಕ ನೃತ್ಯ ಪ್ರದರ್ಶನ ಲಾಗೊಸ್ ದ್ವೀಪದಲ್ಲಿ ಸೋಮವಾರ ನಡೆಯಿತು. ಲಾಗೋಸ್ ಕಾರ್ನಿವಲ್ ಅಂಗವಾಗಿ ಈಸ್ಟರ್ ನಂತರವೂ ಹಬ್ಬದ ವಾತವಾರಣ ಇಲ್ಲಿ ಮನೆ ಮಾಡಿದೆ. AP/PTI

ಬೋಧ್ ಗಯಾದಲ್ಲಿ ಥಾಯ್ ಆರ್ಮಿ

ಬೋಧ್ ಗಯಾದಲ್ಲಿ ಥಾಯ್ ಆರ್ಮಿ

ಬೋಧ್ ಗಯಾದಲ್ಲಿ ಥಾಯ್ ಆರ್ಮಿ, ಏರ್ ಫೋರ್ಸ್ ಹಾಗೂ ಪೊಲೀಸ್ ಪಡೆಗಳು ಬೌದ್ಧ ಭಿಕ್ಷುಗಳ ಉಡುಗೆಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಪಿಟಿಐ

English summary
Todays news stories in pics around the world: Bengaluru FC etched their names in the annals of Indian football history, beating Dempo 2-4 at the Nehru Stadium to be crowned the kings of the I-League in their debut season.Oneindia News brings to you interesting photographs from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X