• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಷ್ಟರೊಳಗೆ ಏನು ತಂತ್ರ, ಕುತಂತ್ರ ಮಾಡುತ್ತಾರೋ ಗೊತ್ತಿಲ್ಲ: ಮುನಿರತ್ನ!

|

ಬೆಂಗಳೂರು, ಅ. 31: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪ್ರಚಾರ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ತಮ್ಮ ಪ್ರಚಾರವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಆರ್ ಆರ್ ನಗರದಲ್ಲಿ ಉಪ ಚುನಾವಣೆ ಕುರಿತು ಮಾತನಾಡಿರುವ ಅವರು, ನಿನ್ನೆ ನಟ ದರ್ಶನ್ ನನ್ನ ಪರವಾಗಿ ಪ್ರಚಾರಕ್ಕೆ ಬಂದಿದ್ದರು. ದರ್ಶನ್ ಅವರು ಐದು ವಾರ್ಡ್‌ಗಳಲ್ಲಿ ಪ್ರಚಾರ ಮಾಡಿದ್ದಾರೆ. ಇವತ್ತು ನಮ್ಮ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಚಾರ ಮಾಡುತ್ತಾರೆ ಎಂದರು.

   ಕರ್ನಾಟಕ: ಕನ್ನಡ ರಾಜ್ಯೋತ್ಸವಕ್ಕೆ ಪ್ರತ್ಯೇಕ ಮಾರ್ಗಸೂಚಿ

   ಇಡೀ ಕ್ಷೇತ್ರಾದ್ಯಂತ ಸಿಎಂ ಯಡಿಯೂರಪ್ಪ ಅವರು ರೋಡ್ ಶೋ, ರ್ಯಾಲಿ ನಡೆಸಲಿದ್ದಾರೆ. ನಾಳೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಅಲ್ಲಿಂದಾಚೆಗೆ ಮತದಾರರು ಏನು ತೀರ್ಪು ಕೊಡುತ್ತಾರೆ ಅಂತ ನೋಡೋಣ. ಅಷ್ಟರೊಳಗೆ ಕಾಂಗ್ರೆಸ್ ಪಕ್ಷದವರು ಏನು ತಂತ್ರ, ಕುತಂತ್ರ ಮಾಡುತ್ತಾರೋ ಗೊತ್ತಿಲ್ಲ. ನಮ್ಮ ಕಾರ್ಯತಂತ್ರ ಬೇರೆ ಏನೂ‌ ಇಲ್ಲ ಎಂದರು.

   ಮತದಾರರರಿಗೆ ಪ್ರಾಮಾಣಿಕವಾಗಿ ಸೇವೆ ಮಾಡುವವರ ಆಯ್ಕೆಗೆ ಮನವಿ ಮಾಡಿಕೊಳ್ಳುತ್ತೇನೆ. ನಿಮ್ಮ ಕೈಗೆ ಸಿಗುವ ವ್ಯಕ್ತಿಗೆ ಮತದಾನ ಮಾಡಿ, ಅಭಿವೃದ್ಧಿ ನೋಡಿ ಮತದಾನ ಮಾಡಿ ಎಂದು ಮನವಿ ಮಾಡುತ್ತೇನೆ. ತಾತ್ಕಾಲಿಕವಾಗಿ ಬಂದವರ ಆಶ್ವಾಸನೆಯ ಮಾತುಗಳನ್ನು ಕೇಳಬೇಡಿ. ಅಮೂಲ್ಯ ಮತಗಳನ್ನು ಎಲ್ಲೆಂದರಲ್ಲಿ ಯಾರಿಗೋ ಕೊಟ್ಟು ವ್ಯರ್ಥ ಮಾಡಿಕೊಳ್ಳಬೇಡಿ. ನಮ್ಮದೇ ಸರ್ಕಾರ ಇದೆ. ಕೆಲಸ ಮಾಡುವ ಸರ್ಕಾರಕ್ಕೆ‌ ಮತ ಕೊಡಿ ಎಂದು ಕ್ಷೇತ್ರದ ಮತದಾರರಲ್ಲಿ ಮನವಿ ಮಾಡುವುದಾಗಿ ಮುನಿರತ್ನ ಅವರು ಹೇಳಿದರು.

   English summary
   Talking about the by-election in RR Nagar, BJP candidate Munirathna said that yesterday that actor Darshan had campaigned on my behalf. Darshan has campaigned in five wards. Today our Chief Minister B.S. Yediyurappa would campaign. Know more,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X