ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಡಪ್ರಭು ಕೆಂಪೇಗೌಡರ 513 ನೇ ಜಯಂತಿ: ಗಣ್ಯರಿಂದ ಶುಭಾಶಯಗಳ ಮಹಾಪೂರ

|
Google Oneindia Kannada News

ಭಾರತದ ಐಟಿ ರಾಜಧಾನಿ ಎನಿಸಿಕೊಂಡಿರುವ ಬೆಂಗಳೂರಿನಲ್ಲಿ 12 ಲಕ್ಷಕ್ಕೂ ಹೆಚ್ಚು ಸಾಫ್ಟ್‌ವೇರ್ ಇಂಜಿನಿಯರುಗಳಿದ್ದು, ಇಷ್ಟು ಅಪಾರ ಸಂಖ್ಯೆಯ ಪ್ರತಿಭಾವಂತರು ಹೀಗೆ ಬೇರೆಲ್ಲೂ ಒಂದೇ ನಗರದಲ್ಲಿ ನೆಲೆಗೊಂಡಿಲ್ಲ. ಇಂತಹ ಪ್ರತಿಭಾ ಸಮೃದ್ಧಿಯಿಂದಾಗಿಯೇ ರಾಜ್ಯದ ರಾಜಧಾನಿಯು ಭಾರತದ ಸಿಲಿಕಾನ್ ಕಣಿವೆಯೆಂಬ ಹೆಗ್ಗಳಿಕೆ ಪಡೆದಿದೆ. ಹೀಗೆ ವೇಗವಾಗಿ ಬೆಳೆಯುತ್ತಿರುವ, ಇಡೀ ಪ್ರಪಂಚದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡರ 513 ನೇ ಜಯಂತಿಯನ್ನು ಇಂದು ಆಚರಿಸಲಾಗುತ್ತಿದೆ. ಈ ನಿಮಿತ್ತ ಗಣ್ಯರು, ರಾಜಕೀಯ ಮುಖಂಡರು ಸಾಮಾಜಿಕ ವೇದಿಕೆ ಕೂ ನಲ್ಲಿ ಶುಭಾಶಯ ಕೋರಿದ್ದಾರೆ.

ನಾಡಿನ ಸಮಸ್ತ ಜನತೆಗೆ ನಾಡಪ್ರಭು ಕೆಂಪೇಗೌಡರ 513 ನೇ ಜಯಂತಿಯ ಹಾರ್ದಿಕ ಶುಭಾಶಯಗಳು. ಕೆಂಪೇಗೌಡರ ದೂರದೃಷ್ಟಿ, ಸಮರ್ಥ ಹಾಗೂ ಜನಪರ ಆಡಳಿತ ನಮ್ಮಲ್ಲರಿಗೂ ಸದಾ ಪ್ರೇರಣೆ ಯಾಗಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಭಾಶಯ ತಿಳಿಸಿದ್ದಾರೆ.

ನಾಡಪ್ರಭು ಕೆಂಪೇಗೌಡರ ಗೌರವಾರ್ಥ ಸರ್ಕಾರ ನೀಡುತ್ತಿರುವ 'ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ'ಗೆ ಭಾಜನರಾದ ಶ್ರೀ ಎಸ್.ಎಂ ಕೃಷ್ಣ, ಶ್ರೀ ಎನ್.ಆರ್ ನಾರಾಯಣ ಮೂರ್ತಿ, ಶ್ರೀ ಪ್ರಕಾಶ್ ಪಡುಕೋಣೆ ಅವರಿಗೆ ನನ್ನ ಅಭಿನಂದನೆಗಳು. ಈ ಪ್ರಶಸ್ತಿಯು ಸಮಾಜಕ್ಕೆ ಅವರು ಸಲ್ಲಿಸಿದ ನಿಸ್ವಾರ್ಥ ಸೇವೆಯ ಪ್ರತಿಫಲವಾಗಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಕೂ ಮಾಡಿದ್ದಾರೆ.

Today is Nadaprabhu Kempegowdas 513th Jayanti: Greetings from the elite

ಸಮಸ್ತ ಜನತೆಗೆ ನಾಡಪ್ರಭು ಕೆಂಪೇಗೌಡ ಅವರ 513ನೇ ಜಯಂತಿಯ ಶುಭಾಶಯಗಳು. ನಾಡಿನ ಹೆಮ್ಮೆಯ ಪುತ್ರ, ನವಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ 108 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಕಾರ್ಯದ ಕಿರು ನೋಟ ಎಂದು ವಿಡಿಯೋ ಮೂಲಕ ಶುಭಾಶಯ ತಿಳಿಸಿದ್ದಾರೆ.

Today is Nadaprabhu Kempegowdas 513th Jayanti: Greetings from the elite

ರಾಜಧಾನಿ ಬೆಂಗಳೂರಿಗೆ ಭದ್ರ ಅಡಿಪಾಯ ಹಾಕಿದ ಜನವಲ್ಲಭ, ಪ್ರಜಾಪ್ರಿಯ ಆಡಳಿತಗಾರ, ನಾಡಪ್ರಭು ಕೆಂಪೇಗೌಡರ ಜಯಂತಿಯಂದು ಆದರಪೂರ್ವಕ ಪ್ರಣಾಮಗಳು. ವೈಜ್ಞಾನಿಕ ದೃಷ್ಟಿಕೋನದೊಂದಿಗೆ ಮಹಾನಗರವನ್ನು ಬೆಳೆಸಿ, ಜನಜೀವನಕ್ಕೆ ಅನೇಕ ಮೂಲಸೌಕರ್ಯಗಳನ್ನು ಕಲ್ಪಿಸಿಕೊಟ್ಟ ಅವರು ಚಾರಿತ್ರಿಕ ವ್ಯಕ್ತಿಯಾಗಿದ್ದಾರೆ.

English summary
Nadaprabhu Kempegowder's 513th birth anniversary in Bangalore is being celebrated today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X