• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋರಮಂಗಲ ಕಾಲ್ ಗರ್ಲ್ಸ್: ಪೊಲೀಸರಿಗೆ ಪತ್ರ ಬರೆದ ರಾಮಲಿಂಗಾ ರೆಡ್ಡಿ

|
Google Oneindia Kannada News

ಬೆಂಗಳೂರು, ಜ. 20: ಸಿಲಿಕಾನ್ ಸಿಟಿ ಈಗ ಸೆಕ್ಸ್ ಸಿಟಿ ಆಗುತ್ತಿದೆಯಾ? ಹೌದು ಎನ್ನುತ್ತಿವೆ ಅಂತರ್ಜಾಲ ತಾಣಗಳು. ಬೆಂಗಳೂರಿನಲ್ಲಿ, ಅದರಲ್ಲೂ ಕೋರಮಂಗಲದ ಹೆಸರಿನಲ್ಲಿ ಇಂಥ ದಂಧೆ ಹೆಚ್ಚಾಗಿರುವುದು ಸಾರ್ವಜನಿಕರಿಂದಲೇ ಕೇಳಿ ಬಂದಿದೆ.

   ರಾಕೆಟ್ ಲ್ಯಾಂಡ್ ಆಗ್ತಿದ್ದಂತೆ ಜನರಲ್ಲಿ ಆತಂಕ | Iran | USA | Embassy | War | Oneindia Kannada

   ಸೂಕ್ತ ತನಿಖೆ ನಡೆಸಿ ಕಾನೂನು ಬಾಹೀರ ಚಟುವಟಿಕೆಗಳನ್ನು ತಡೆಯುವಂತೆ ಮಾಜಿ ಗೃಹ ಸಚಿವ, ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾರೆಡ್ಡಿ ಪೊಲೀಸರಿಗೆ ಪತ್ರ ಬರೆದಿದ್ದಾರೆ. ರಾಮಲಿಂಗಾರೆಡ್ಡಿ ಅವರ ದೂರು ಆಧರಿಸಿ ವೆಬ್‌ ತಾಣದಲ್ಲಿ KORAMANGALA CALL GIRLS ಎಂದು ಹುಡುಕಾಟ ನಡೆಸಿದಾಗ ಕಂಡುಬಂದಿದ್ದು ಆಘಾತಕಾರಿ ಸಂಗತಿಗಳು.

   ಕೋರಮಂಗಲ ಹೆಸರಿಗೆ 'escort' ಕಳಂಕ

   ಕೋರಮಂಗಲ ಹೆಸರಿಗೆ 'escort' ಕಳಂಕ

   ಬೆಂಗಳೂರಿನ ಕೋರಮಂಗಲ ಎಸ್ಕಾರ್ಟ್ಸ್ ಹೆಸರಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳನ್ನು ಕಂಡ ಸ್ಥಳೀಯರು, ಕೋರಮಂಗಲವನ್ನು ಪ್ರತಿನಿಧಿಸುವ ಮಾಜಿ ಗೃಹಸಚಿವ, ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾರೆಡ್ಡಿ ಅವರ ಗಮನಕ್ಕೆ ತಂದಿದ್ದಾರೆ. ಕೋರಮಂಗಲ ಹೆಸರಿಗೆ ಅಂತರ್ಜಾಲದಲ್ಲಿರುವ ಅನೈತಿಕ ವೆಬ್ ತಾಣಗಳು ಕಳಂಕ ತರುವಂತಾಗಿವೆ. ಸ್ಥಳೀಯರಿಂದ ದೂರು ಬರುತ್ತಿದ್ದಂತೆಯೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ರಾಜು ಅವರಿಗೆ ರಾಮಲಿಂಗಾರೆಡ್ಡಿ ಪತ್ರ ಬರೆದಿದ್ದಾರೆ.

   ಪರಿಚಯವಾದ 24 ಗಂಟೆಯೊಳಗೇ ಯುವತಿ ಖೆಡ್ಡಾಗೆ ಬಿದ್ದಿದ್ದ ಶಾಸಕ!<br />ಪರಿಚಯವಾದ 24 ಗಂಟೆಯೊಳಗೇ ಯುವತಿ ಖೆಡ್ಡಾಗೆ ಬಿದ್ದಿದ್ದ ಶಾಸಕ!

   ಕೋರಮಂಗಲದಲ್ಲಿ ಆಸೀಫಾ-733****111 Koramangala call girls ಎಂಬ ಶೀರ್ಷಿಕೆಯೊಂದಿಗೆ ಅಂತರ್ ಜಾಲದ ಮುಖೇನ ಕಾನೂನು ಬಾಹಿರ ಚಟುವೆಟಿಕೆಗಳು ನಡೆಯುತ್ತಿರುವುದಾಗಿ ಸಾರ್ವಜನಿಕರಿಂದ ತಿಳಿದು ಬಂದಿದ್ದು, ಈ ಕುರಿತು ಕೂಡಲೇ ತನಿಖೆ ನಡೆಸಿ, ಕಾನೂನು ಬಾಹಿರವಾಗಿ ನಡೆಯುತ್ತಿರುವ ಈ ಚಟುವಟಿಕೆಗಳನ್ನು ತಡೆಯಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಪತ್ರದಲ್ಲಿ ರಾಮಲಿಂಗಾರೆಡ್ಡಿ ಮನವಿ ಮಾಡಿಕೊಂಡಿದ್ದಾರೆ.

   ಕೋರಮಂಗಲ ಹೆಸರಿನಲ್ಲಿವೆ 100ಕ್ಕೂ ಹೆಚ್ಚು ಅನೈತಿಕ ವೆಬ್ ತಾಣಗಳು

   ಕೋರಮಂಗಲ ಹೆಸರಿನಲ್ಲಿವೆ 100ಕ್ಕೂ ಹೆಚ್ಚು ಅನೈತಿಕ ವೆಬ್ ತಾಣಗಳು

   ಕೈಯಲ್ಲೊಂದು ಸ್ಮಾರ್ಟ್‌ ಫೋನ್ ಇದ್ದರೆ ಇಡೀ ಜಗತ್ತೆ ಅಂಗೈಯಲ್ಲಿ ಇದ್ದಹಾಗೆ. ವಸತಿ, ಆಹಾರ, ಬಟ್ಟೆಯಿಂದ ಹಿಡಿದು ಎಲ್ಲ ಸೇವೆಗಳನ್ನೂ ವೆಬ್‌ತಾಣಗಳ ಮೂಲಕ ಪಡೆಯಬಹುದು. ಇದೀಗ ಹೊಸ ದಂಧೆಯೊಂದು ಬೆಂಗಳೂರಿನಲ್ಲಿ, ಅದರಲ್ಲೂ ಕೋರಮಂಗಲದ ಹೆಸರಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವುದು ಅಲ್ಲಿನ ನಿವಾಸಿಗಳಿಗೆ ಆಘಾತವುಂಟುಮಾಡಿದೆ. ಕೋರಮಂಗಲ ಎಸ್ಕಾರ್ಟ್ಸ್ ಹೆಸರನ್ನು ಹೊಂದಿರುವ 100ಕ್ಕೂ ಹೆಚ್ಚಿನ ಅನೈತಿಕ ವೆಬ್ ತಾಣಗಳು ಗೂಗಲ್ ಹುಡುಕಾಟದಲ್ಲಿ ಕಂಡುಬಂದಿವೆ.

   ನೀವು ಭೇಟಿ ನೀಡಿದರೆ ಊಹಿಸಿರಲು ಸಾಧ್ಯವಿಲ್ಲದ ಹಲವು ಸೇವೆಗಳು ಬಯಸಿದವರಿಗೆ ಅಲ್ಲಿ ಕಾಯುತ್ತಿವೆ. ಯಾವುದೇ ಮುಚ್ಚುಮರೆ ಇಲ್ಲದೆ, ಕಾನೂನಿನ ಭಯವೂ ಇಲ್ಲದೆ; ಎಲ್ಲವೂ ಇಲ್ಲಿ ಖುಲ್ಲಂ ಖುಲ್ಲಾ. ವಾಟ್ಸಪ್ ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸ, ಜೊತೆಗೆ ಹತ್ತು ಹಲವು ಬಗೆಯ ಫೋಟೊಗಳು, ಈ ತಾಣಗಳನ್ನು ಓಪನ್ ಮಾಡುತ್ತಿದ್ದಂತೆಯೆ ಝಗಮಗಿಸುತ್ತಿರುತ್ತವೆ. ಇದೆಲ್ಲವನ್ನೂ ಗಮನಿಸಿದ ಸ್ಥಳೀಯರು ಶಾಸಕರ ಗಮನಕ್ಕೆ ತಂದಿದ್ದಾರೆ.

   ಇಂತಹ ಸೇವೆಗೆ ಇಷ್ಟು ದರ ಎಂದು ನಿಗದಿ

   ಇಂತಹ ಸೇವೆಗೆ ಇಷ್ಟು ದರ ಎಂದು ನಿಗದಿ

   ಅಂತರ್ಜಾಲದಲ್ಲಿ ಸೇವೆ ನೀಡುತ್ತಿರುವವರ ವೇಗವಿದು. ಇದೇ ವಿಚಾರದಲ್ಲಿ ಇನ್ನೊಂದಿಷ್ಟು ಆಳಕ್ಕಿಳಿದರೆ ಹೈ ಪ್ರೊಫೈಲ್ ಎಸ್ಕಾರ್ಟ್ ಸೇವೆಗಳು ಯಾವ ಮಟ್ಟಕ್ಕೆ ಬೆಳವಣಿಗೆ ಆಗಿವೆ ಎಂಬುದಕ್ಕೆ ಹೊಸ ಪುರಾವೆಗಳು ಸಿಗುತ್ತಾ ಹೋದವು. ಕ್ರೀಯಾಶೀಲತೆಯಲ್ಲಿ ಯಾವುದಕ್ಕೂ ಕಡಿಮೆ ಇಲ್ಲದ, ಈ ವೆಬ್ ತಾಣಗಳಲ್ಲಿ ಎಸ್ಕಾರ್ಟ್ ಸೇವೆ ಬಗ್ಗೆ ದಂಗುಬಡಿಯುವಂತಹ ಬರವಣಿಗೆ ಇದೆ. ಅದೂ ಶುದ್ಧ ಇಂಗ್ಲಿಷ್ ಭಾಷೆಯಲ್ಲಿ. ಎಲ್ಲ ಅನೈತಿಕ ವೆಬ್‌ ತಾಣಗಳಲ್ಲಿಯೂ ಇಂತಹ ಸೇವೆಗೆ ಇಷ್ಟು ದರ ಎಂದು ನಿಗದಿ ಮಾಡಲಾಗಿದೆ.

   ಅಲ್ಲಿರುವ ಸೇವೆಗಳನ್ನು ಇಲ್ಲಿ ಬರೆಯುವುದು ಕೂಡ ಅಸಾಧ್ಯವಾಗಿದೆ.

   ವಾಟ್ಸಪ್ ಮೂಲಕ ನಡೆಯುವ ದಂಧೆ; ಪತ್ತೆ ಹಚ್ಚುವುದು ಕಷ್ಟ

   ವಾಟ್ಸಪ್ ಮೂಲಕ ನಡೆಯುವ ದಂಧೆ; ಪತ್ತೆ ಹಚ್ಚುವುದು ಕಷ್ಟ

   ಒಪ್ಪಿತ ಸೆಕ್ಸ್ ಕಾನೂನು ಪ್ರಕಾರ ಅಪರಾಧವಲ್ಲ. ಹಾಗಾಗಿ ಇಂಥ ಪ್ರಕರಣಗಳು ಕಂಡು ಬಂದರೂ ಪೊಲೀಸರು ತಕ್ಷಣಕ್ಕೆ ಪ್ರಕರಣ ದಾಖಲಿಸುವುದು ಕಷ್ಟಸಾಧ್ಯ. ಆದರೆ ಮಧ್ಯವರ್ತಿಯ ಮೇಲೆ ಪ್ರಕರಣ ದಾಖಲು ಮಾಡಬಹುದು. ಇಡೀ ದಂಧೆ ವಾಟ್ಸಪ್ ಮೂಲಕ ನಡೆಯುವುದರಿಂದ ಮಧ್ಯವರ್ತಿಗಳು ಟ್ರೇಸ್ ಆಗೋದೆ ಇಲ್ಲ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು.

   ವೆಬ್ ತಾಣಗಳಲ್ಲಿ ಹಾಕಿರುವ ವಾಟ್ಸಪ್ ನಂಬರ್ ಅಥವಾ ಇ-ಮೇಲ್ ವಿಳಾಸವನ್ನು ಹುಡುಕುತ್ತಾ ಹೋದರೆ ಲೊಕೇಶನ್ ಬೇರೆ ದೂರದ ಮಹಾನಗರಗಳಲ್ಲಿ ಪತ್ತೆ ಆಗುತ್ತದೆ. ಇದಲ್ಲದೆ ಸಿಕ್ಕಿಬಿದ್ದವರು ಒಪ್ಪಿಯೇ ಬಂದಿದ್ದೇವೆಂದು ಹೇಳಿಕೆ ಕೊಡುವುದರಿಂದ ಕಾನೂನು ಕ್ರಮಕೈಗೊಳಲೂ ಆಗದಂತಹ ಅಸಹಾಯಕ ಸ್ಥಿತಿ ನಮ್ಮದು. ಜೊತೆಗೆ ವೆಬ್‌ ತಾಣಗಳ ನಿಯಂತ್ರಣ ಕೂಡ ರಾಜ್ಯ ಸರ್ಕಾರದ ಕೈಯಲ್ಲಿ ಇಲ್ಲ. ಸೂಕ್ತಪುರಾವೆಗಳನ್ನು ಕೊಟ್ಟು ಒಂದು ವೆಬ್ ತಾಣವನ್ನು ಮುಚ್ಚಿಸುವಷ್ಟರಲ್ಲಿ ಮತ್ತೊಂದು ಹೆಸರಿನಲ್ಲಿ ವೆಬ್ ತಾಣವನ್ನು ತೆರೆಯುತ್ತಾರೆ ಎನ್ನುತ್ತಾರೆ ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು.

   ವೆಬ್‌ತಾಣಗಳ ಮೂಲಕ ನಂಬಿಸಿ, ನಂತರ ಬ್ಲಾಕ್‌ಮೇಲ್ ಮಾಡುತ್ತಾರೆ

   ವೆಬ್‌ತಾಣಗಳ ಮೂಲಕ ನಂಬಿಸಿ, ನಂತರ ಬ್ಲಾಕ್‌ಮೇಲ್ ಮಾಡುತ್ತಾರೆ

   ಹೀಗೆ, ಅಂತರ್ಜಾಲದಲ್ಲಿ ತುಂಬಿಹೋಗಿರುವ ವೆಬ್‌ ತಾಣಗಳನ್ನು ನಂಬಿ ಹೋದವರಿಗೆಲ್ಲರಿಗೂ ತಾಣಗಳಲ್ಲಿ ತೋರಿಸಿರುವ ಸೇವೆ ಸಿಗುತ್ತದೆ ಎಂಬುದಿಲ್ಲ. ವಾಟ್ಸಪ್ ಕಾಲ್ ಮಾಡಿಕೊಂಡು ಹೋದ ಮೇಲೆ ಅವರು ಫೋನ್‌ನಲ್ಲಿ ಕೇಳಿದ್ದಕ್ಕಿಂತ ಹೆಚ್ಚಿನ ಹಣ ಕಿತ್ತುಕೊಂಡರು. ಫೋಟೊದಲ್ಲಿರುವವರು ಕೂಡ ಅಲ್ಲಿ ಇರುವುದಿಲ್ಲ ಎಂದು ಮೋಸ ಹೋದವರು ಸಾಕಷ್ಟು ಬಾರಿ ನಮಗೆ ದೂರುಗಳನ್ನೂ ನೀಡುತ್ತಾರೆ. ದೂರು ಬಂದ ನಂತರ ಅಂತರ್ಜಾಲದಲ್ಲಿನ ಆ ನಂಬರ್‌ಗಳನ್ನು ಟ್ರ್ಯಾಕ್ ಮಾಡಿದರೆ ದಿಲ್ಲಿ, ಬಾಂಬೆ ಹೀಗೆ ಯಾವುದೋ ದೂರದ ನಗರಗಳಲ್ಲಿ ಟವರ್ ಲೊಕೇಶನ್ ಸಿಗುತ್ತದೆ ಎನ್ನುತ್ತಾರೆ ಬೆಂಗಳೂರಿನ ಪೊಲೀಸ್ ಅಧಿಕಾರಿಯೊಬ್ಬರು.

   ಇದಲ್ಲದೆ ವೇಶ್ಯಾವಾಟಿಕೆ ಜತೆಗೆ ವಿಡಿಯೋ ರೆಕಾರ್ಡಿಂಗ್ ಮಾಡಿಕೊಳ್ಳುತ್ತಾರೆ. ನಂತರ ಅದನ್ನು ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡುವುದು ಇತ್ತೀಚಿಗಿನ ದಿನಗಳಲ್ಲಿ ಹೆಚ್ಚಾಗಿದೆ. ಇವತ್ತು ಅಂತರ್ಜಾಲ, ವಾಟ್ಸಪ್ ನೆರವಿನೊಂದಿಗೆ ನಡೆಯುತ್ತಿರುವ ಈ ದಂಧೆ ಅತ್ಯಂತ ನಿಗೂಢವೂ ಕೂಡ. ಆದರೆ ಅತ್ಯಂತ ನಿಗೂಢ ಪ್ರಕರಣಗಳನ್ನು ಭೇದಿಸಿರುವ ಕರ್ನಾಟಕದ ಪೊಲೀಸರು ಇಂಥ ದಂಧೆಗೆ ಕಡಿವಾಣ ಹಾಕುತ್ತಾರೆ ಎಂಬ ನಂಬಿಕೆಯಲ್ಲಿ ಬೆಂಗಳೂರಿನ ಜನರಿದ್ದಾರೆ.

   English summary
   To stop bengaluru koramangala call girls racket former home minister Ramalinga reddy writes letter to DG IGP.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X