ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖದೀಮರ ಪತ್ತೆಗೆ ವಾಟ್ಸಪ್ ಸಂದೇಶ ಕಳಿಸಿದರೆ ಸಾಕು

|
Google Oneindia Kannada News

ಬೆಂಗಳೂರು, ಮೇ 30: ಜನರಿಗೆ ಹತ್ತಿರವಾಗುವುದರಲ್ಲಿ ಬೆಂಗಳೂರು ಪೊಲೀಸರು ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ವಾಟ್ಸಪ್ ಸಹಾಯವಾಣಿ ತೆರೆದಿದ್ದ ಪೊಲೀಸರು ಜನರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಯ ವಾಟ್ಸಪ್ ಗ್ರೂಪ್ ನಲ್ಲಿ ಮೊಬೈಲ್ ಸಂಖ್ಯೆ ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಈ ಬಗ್ಗೆ ಟ್ವಿಟ್ಟರ್ ನಲ್ಲಿ ತಿಳಿಸಿರುವ ಪೊಲೀಸ್ ಆಯುಕ್ತ ಎಂ ಎನ್ ರೆಡ್ಡಿ, ನಾಗರಿಕರು ಠಾಣೆಯ ಇನ್ಸ್ ಪೆಕ್ಟರ್ ಅಥವಾ ಠಾಣೆಯನ್ನು ಸಂಪರ್ಕಿಸಿ ಮೊಬೈಲ್ ಸಂಖ್ಯೆ ದಾಖಲಿಸಿಕೊಂಡರೆ ಸುಲಭವಾಗಿ ದೂರು ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.[ವಾಟ್ಸಪ್ ಸಹಾಯವಾಣಿ ತೆರೆದ ರೈಲ್ವೆ ಪೊಲೀಸರು]

police

ಈಗಾಗಲೇ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಠಾಣೆಗೆ ತೆರಳದೇ, ಸಮಯದ ಉಳಿತಾಯದೊಂದಿಗೆ ದೂರು ದಾಖಲಿಸಬಹುದು. ಅಲ್ಲದೇ ಇಲ್ಲಿ ಕೇವಲ ದೂರು ದಾಖಲಿಸಿಕೊಳ್ಳುವುದಲ್ಲದೇ ತಕ್ಷಣದ ಪರಿಹಾರ ಕ್ರಮಗಳನ್ನು ತಿಳಿಸಲಾಗುತ್ತದೆ.

ಹೊಸ ಹೊಸ ಕಾರ್ಯತಂತ್ರಗಳ ಮುಖಾಂತರ ಬೆಂಗಳೂರು ಪೊಲೀಸರು ಜನರ ಹಿತ ಕಾಯಲು ಮುಂದಾಗುತ್ತಿದ್ದು ನಾಗರಿಕರ ಸಹಕಾರವನ್ನು ಅಪೇಕ್ಷಿಸಿದ್ದಾರೆ. ಈಗಾಗಲೇ ಎಲ್ಲ ಠಾಣೆಗಳಲ್ಲೂ ವಾಟ್ಸಪ್ ಗ್ರೂಪ್ ಕಾರ್ಯನಿರ್ವಹಿಸಲು ಆರಂಭಿಸಿದೆ.

whatsapp
English summary
Bengaluru: Bengaluru city police introduced Whatsapp group in every local police station. To approach your jurisdictional police station and add your number.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X