ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ 4 ಮೇಲ್ಸೇತುವೆ ನಿರ್ಮಿಸಲು ಸರ್ಕಾರ 400 ಕೋಟಿ ಮೀಸಲು

|
Google Oneindia Kannada News

ಬೆಂಗಳೂರು ಜೂ.23: ಬೆಳೆಯುತ್ತಿರುವ ಬೆಂಗಳೂರು ನಗರಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿವೆ. ಇದಕ್ಕೆ ಪರಿಹಾರವಾಗಿ ನಗರದ ಹೃದಯ ಭಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೇಲ್ಸೇತುವೆ ಸೇರಿದಂತೆ ಇನ್ನೂ ನಾಲ್ಕು ಮೇಲ್ಸೇತುವೆಗಳು ಬೆಂಗಳೂರಿನಲ್ಲಿ ನಿರ್ಮಾಣವಾಗಲಿವೆ. ಇದಕ್ಕೆ ರಾಜ್ಯ ಸರ್ಕಾರ ಅಮೃತ್ ನಗರೊತ್ಥಾನ ಯೋಜನೆಯಡಿ ಒಟ್ಟು ಸುಮಾರು 400 ಕೋಟಿ ರು. ಒದಗಿಸಿದೆ.

ಸದಾ ಜನ ದಟ್ಟಣೆಯಿಂದ ಕೂಡಿರುವ ನಗರದ ಹೃದಯ ಭಾಗವಾದ ಹಡ್ಸನ್ ವೃತ್ತದಿಂದ ಮಿನರ್ವ ವೃತ್ತದ ವರೆಗೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಯೋಜನೆಗಾಗಿ ಒಟ್ಟು 20.64 ಕೋಟಿ ರು. ನಿಗದಿ ಮಾಡಲಾಗಿದೆ. ಈ ಭಾಗದಲ್ಲಿ ಮೇಲ್ಸೇತುವೆ ನಿರ್ಮಾಣವಾದರೆ ಹೆಚ್ಚು ರಸ್ತೆ ಸಿಗ್ನಲ್ ಗಳಿರುವ ಈ ಭಾಗದಲ್ಲಿ ವಾಹನ ಸವಾರರು ಕಾಯುವುದು ತಪ್ಪಲಿದೆ. ಸಂಚಾರವು ಸುಗಮವಾಗುತ್ತದೆ. ಯೋಜನೆ ಇನ್ನೇನು ಆರಂಭವಾಗಬೇಕಿದೆ ಎಂದು ಮೂಲಗಳು ತಿಳಿಸಿವೆ.

ಕನಕಪುರ-ಸಾರಕ್ಕಿ ಸಿಗ್ನಲ್ ವರೆಗೆ ಮೇಲ್ಸೇತುವೆ?

ಕನಕಪುರದಿಂದ ಸಾರಕ್ಕಿ ರಸ್ತೆ ಸಿಗ್ನಲ್ ವರೆಗೆ ಫ್ಲೈಓವರ್ ನಿರ್ಮಿಸಲು ಉದ್ದೇಶಿಸಲಾಗಿದೆ. ಸಾರಕ್ಕಿ ಸಿಗ್ನಲ್, ಇಲ್ಯಾಸ್ ನಗರ, ಸಿಂಧೂರ್ ಜಂಕ್ಷನ್ ಮಾರ್ಗವಾಗಿ ನಿರ್ಮಾಣಗೊಳ್ಳಬೇಕಿರುವ ಈ ಕಾಮಗಾರಿಗಾಗಿ ಅಧಿಕಾರಿಗಳು ಒಟ್ಟು 120ಕೋಟಿ ಅಗು ಹೆಚ್ಚಿನ ಹಣ ಮೀಸಲಿಟ್ಟಿದ್ದಾರೆ. ಈ ಭಾಗದಲ್ಲಿ ಸಹ ನಿತ್ಯ ಲಕ್ಷಾಂತರ ವಾಹನಗಳು ಓಡಾಡುತ್ತಿದ್ದು, ಇಲ್ಲಿ ಒಂದು ಮೇಲ್ಸೇತುವೆ ಅಗತ್ಯವಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಇಲ್ಲಿ ಎತ್ತರದ ಮೇಲ್ಸೇತುವೆ ನಿರ್ಮಿಸಬೇಕಿದ್ದು, ಎತ್ತರ, ಯೋಜನೆ ಕುರಿತು ಇನ್ನಷ್ಟು ವಿಷಯಗಳು ಅಂತಿಮಗೊಳ್ಳಬೇಕಿದೆ ಎನ್ನಲಾಗಿದೆ.

Bengaluru to get 4 more flyovers, as Karnataka Govt Released Rs 400 crore grants to BBMP

ರಿಂಗ್ ರಸ್ತೆಯಲ್ಲಿ ಫ್ಲೈ ಓವರ್

ನಗರದ ಇಟ್ಟಮಡು ಮತ್ತು ಕಾಮಾಕ್ಯ ಜಂಕ್ಷನ್ ವರೆಗೆ ಹೊರವರ್ತುಲ ರಸ್ತೆ ಉದ್ದಕ್ಕೂ ಮೇಲ್ಸೇತುವೆ ಯೊಂದನ್ನು ನಿರ್ಮಿಸಲು ಅಂದಾಜು 40.50ಕೋಟಿ ರು. ಹಾಗೂ ಪಶ್ಚಿಮ ಕಾರ್ಡ ರಸ್ತೆಯ ಭಾಗದಲ್ಲಿ ಬಸವೇಶ್ವರ ನಗರ ಜಂಕ್ಷನ್ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಮೇಲ್ಸೇತುವೆ ನಿರ್ಮಿಸಲು ಒಟ್ಟು ಸುಮಾರು 30ಕೋಟಿ ರು. ಮೀಸಲಿಡಲಾಗಿದೆ.

ಈ ರೀತಿಯಲ್ಲಿ ಸರ್ಕಾರ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ವಾಹನ ದಟ್ಟಣೆ ಆಧಾರದಲ್ಲಿ ಮೂಲಸೌಕರ್ಯ ಕಲ್ಪಿಸಲು ಮುಂದಾಗಿದೆ. ಈ ಯೋಜನೆಗಳು ಆರಂಭವಾಗಲು ದಿನಗಣನೆ ನೊಡುತ್ತಿವೆ. ಕೆಲವು ತಾಂತ್ರಿಕ ಕಾರಣಗಳಿಂದ ಮೇಲ್ಸೇತುವೆ ಕಾಮಗಾರಿ ಬೇಗ ಆರಂಭವಾಗುತ್ತಿಲ್ಲ ಎಂಬ ಮಾತುಗಳ ಕೇಳಿ ಬಂದಿವೆ.

Bengaluru to get 4 more flyovers, as Karnataka Govt Released Rs 400 crore grants to BBMP

ರಸ್ತೆಗಳ ಅಭಿವೃದ್ಧಿಗೂ ಆದ್ಯತೆ

ಕೇವಲ ಮೇಲ್ಸೇತುವೆಗಳಿಗೆ ಮಾತ್ರವಲ್ಲದೇ ರಸ್ತೆಗಳ ಅಭಿವೃದ್ಧಿಗೂ ಆದ್ಯತೆ ನೀಡಿರುವ ಸರ್ಕಾರ ಅದಕ್ಕಾಗಿ ಬಿಬಿಎಂಪಿಗೆ ಸುಮಾರು 100 ಕೋಟಿ ಗೂ ಅಧಿಕ ಅನುದಾನ ನೀಡಿದೆ. ಇಷ್ಟು ಹಣ ಟೆಂಡರ್ ಶ್ಯೂರ್ ಮಾರ್ಗಸೂಚಿಯನ್ವಯ ನಗರದ ತರಳಬಾಳು ರಸ್ತೆ, ಕೆಂಪೇಗೌಡ ರಸ್ತೆ, ನಾಗರಭಾವಿ 88ಅಡಿ ರಸ್ತೆ, ಥಣಿಸಂದ್ರ ಹಾಗೂ ಇನ್ನಿತರ ರಸ್ತೆ

ಅಭಿವೃದ್ಧಿಗೆ ಚಿಂತನೆ ನಡೆದಿದೆ.

ಈ ಕುರಿತುಪ್ರತಿಕ್ರಿಯಿಸಿರುವ ಪಾಲಿಕೆ ಅಧಿಕಾರಿಯೊಬ್ಬರು, ಬಿಬಿಎಂಪಿ ರಸ್ತೆಗಳ ಅಭಿವೃದ್ಧಿಗೆಂದೆ ಹೆಚ್ಚುವರಿಯಾಗಿ 50ಕೋಟಿ ರು. ಅನುದಾನ ಇಟ್ಟಿದೆ. ಆದರೆ, ಯಾವ ರಸ್ತೆಗಳನ್ನು ಈವರೆಗೂ ಗುರುತಿಸಿಲ್ಲ. ಅಲ್ಲದೇ ಈ ಹಣ ಪಾದಚಾರಿ ಮಾರ್ಗದ ಅಭಿವೃದ್ಧಿ, ಜಂಕ್ಷನ್ ಗಳ ಸುಂದರೀಕರಣಕ್ಕೆ ಬಳಸಲಾಗುವುದು ಎಂದು ತಿಳಿಸಿದ್ದಾರೆ.

Recommended Video

ಗೃಹಪ್ರವೇಶ ಸಮಾರಂಭಕ್ಕೆ ನುಗ್ಗಿ ದಾಂಧಲೆ ಮಾಡಿದ ಮಂಗಳಮುಖಿಯರು: ವಿಡಿಯೋ ವೈರಲ್ | *Viral | OneIndia Kannada

English summary
Bengaluru to get 4 more flyovers at a cost of Rs 400 crore. The funds have come from the Karnataka government’s Amruth Nagarothana scheme. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X