ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೆಪ್ಟೆಂಬರ್ 21ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 20: ಬೆಂಗಳೂರಿನ ವಿವಿಧೆಡೆ ಸೆಪ್ಟೆಂಬರ್ 21ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಹಲವು ಕಡೆ ಕರೆಂಟ್ ಇರುವುದಿಲ್ಲ.

ಬೆಳಗ್ಗೆ 9 ರಿಂದ 4 ಗಂಟೆಯವರೆಗೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ವಿದ್ಯುತ್ ಇರುವುದಿಲ್ಲ. ವಿದ್ಯಾನಗರ ಕ್ರಾಸ್, ದೊಡ್ಡಜಾಲ, ಚಿಕ್ಕಜಾಲ, ಸೋನಪ್ಪನಹಳ್ಳಿ, ಮೇಸಗಾನಹಳ್ಳಿ, ಹುಟ್ಟನಹಳ್ಳಿ, ಕೋಳಿಪುರ, ಕಾದಿಗಾನಹಳ್ಳಿ, ನವರತ್ನ ಅಗ್ರಹಾರ, ಸಾದಹಳ್ಳಿ ಗೇಟ್, ಚನ್ನಹಳ್ಳಿ, ಬೈನಹಳ್ಳಿ, ಥರಬನಹಳ್ಳಿ, ಗಾದೇನಹಳ್ಳಿ, ಹೊಸಹಳ್ಳಿ, ಹುಣಸಮಾರನಹಳ್ಳಿ, ಬೂದಿಗೆರೆ ಟೌನ್, ಗಂಗಾವರ, ಚೌಡಪ್ಪನಹಳ್ಳಿ, ನಾಗೇನಹಳ್ಳಿ, ರೆಡ್ಡಿಹಳ್ಳಿ, ಮಂಚಪ್ಪನಹಳ್ಳಿ, ಹುಣಸೂರು, ದೊಡ್ಡಹುಲ್ಲೂರು, ಚಿಕ್ಕನಲ್ಲೂರಹಳ್ಳಿ, ಯೆಲಚೇನಹಳ್ಳಿ, ತಾವರೆಕೆರೆ, ಗಂಗಾಪುರ, ಕಮ್ಮಸಂದ್ರ, ಅತ್ತಿಬೆಲೆ, ಸೂಲಿಬೆಲೆ, ನಲಗಾನಹಳ್ಳಿ, ಚನ್ನರಾಯಪಟ್ಟಣದಲ್ಲಿ ವಿದ್ಯುತ್ ಇರುವುದಿಲ್ಲ.

ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನವೇ ಅಬ್ಬರದ ಮಳೆ ಸುರಿದು ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಗುಡುಗು ಸಹಿತ ಮಳೆಯಾಗಿದೆ. ನಗರದಲ್ಲಿ ಬೆಳಗ್ಗೆಯಿಂದ ಬಿಸಿಲು ಹಾಗೂ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನ 2 ಗಂಟೆಯಿಂದಲೇ ಜಿಟಿ ಜಿಟಿ ಮಳೆ ಶುರುವಾಗಿತ್ತು. ನಂತರ ಭಾರಿ ಮಳೆ ಸುರಿಯಿತು.

Bengaluru To Face Power Cuts On September 21

ವಿಧಾನಸೌಧ, ಮೆಜೆಸ್ಟಿಕ್, ಎಂಜಿ ರಸ್ತೆ, ಯಶವಂತಪುರ, ರಾಜಾಜಿನಗರ, ವಿಜಯನಗರ, ಮಹಾಲಕ್ಷ್ಮೀ ಲೇಔಟ್, ಗಾಂಧಿನಗರ, ಬಸವೇಶ್ವರನಗರ, ಮಲ್ಲೇಶ್ವರ, ಕಾಮಾಕ್ಷಿಪಾಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಮಳೆಯಿಂದಾಗಿ ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ. ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

Recommended Video

ಸೋಲು ಕಣ್ಣ ಮುಂದೆ ಇದ್ರೂ RCB ಆಟಗಾರನ ಕಣ್ಣು ಈಕೆ ಮೇಲೆ | Oneindia Kannada

English summary
The Bangalore Electricity Supply Company Limited (BESCOM) on Monday, September 20, said that there will be power outages across the city on Tuesday, September 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X