ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಜೂ.27-29 ವಿದ್ಯುತ್ ವ್ಯತ್ಯಯ

|
Google Oneindia Kannada News

ಬೆಂಗಳೂರು, ಜೂ.25: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿ.(ಬೆಸ್ಕಾಂ) ವಿದ್ಯುತ್ ನಿರ್ವಹಣಾ ಕಾಮಗಾರಿ, ನೆಲದಡಿ ವಿದ್ಯುತ್ ಕೇಬಲ್ ಅಳವಡಿಕೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ಜೂ.27ರಿಂದ ಜೂ.29ರವರೆಗೆ ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಕಡಿತಕ್ಕೆ ಮುಂದಾಗಿದೆ.

ಒಟ್ಟು ಮೂರುದಿನ ಪೈಕಿ ವಿವಿಧ ಬಡಾವಣೆಗಳಲ್ಲಿ ವಿವಿಧ ಸಮಯದವರೆಗೆ ವಿದ್ಯುತ್ ಸರಬರಾಜಿನಲ್ಲಿ ಕಡಿತವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಕೋರಿದೆ.

ವಿದ್ಯುತ್ ಕಡಿತಗೊಳ್ಳುವ ಪ್ರದೇಶಗಳು:

ಜೂನ್ 27ರ ಸೋಮವಾರದಂದು ಕೋರಮಂಗಲದ ಮೂರರಿಂದ ಆರನೇ ಬ್ಲಾಕ್, ಸಕ್ರಾ ಆಸ್ಪತ್ರೆ ಪ್ರದೇಶದಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆವರೆಗೆ ವಿದ್ಯುತ್ ಕಡಿತಗೊಳ್ಳಲಿದೆ. ಹಳೆ ಬೈಯಪ್ಪನಹಳ್ಳಿ, ಕುಕ್ಸನ್ ರಸ್ತೆ, ಡೇವಿಸ್ ರಸ್ತೆ, ರಿಚರ್ಡ್ ರಸ್ತೆ, ಉದ್ಯನಾ ರಸ್ತೆ, ಆಯಿಲ್ ಮಿಲ್ ರಸ್ತೆ, ಸದಾಶಿವ ಟೆಂಪಲ್ ರಸ್ತೆ, ಕಾಮನಹಳ್ಳಿ ಮುಖ್ಯರಸ್ತೆ, ಕೆ.ಎಚ್.ಬಿ ಕಾಲೋನಿ, ಹಚಿನ್ಸ್ ರಸ್ತೆ, ವೀಲರ್ಸ್ ರಸ್ತೆ, ಬಾಣಸವಾಡಿ ರೈಲು ನಿಲ್ದಾಣ ರಸ್ತೆ, ಲಿಂಗರಾಜಪುರ, ಐಟಿಸಿ ಮುಖ್ಯರಸ್ತೆ, ಜೀವನಹಳ್ಳಿ ಮತ್ತು ಬಾಣಸವಾಡಿ ಮುಖ್ಯರಸ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 11ಗಂಟೆಯಿಂದ ಸಂಜೆ 5ರವರೆಗೆ ವಿದ್ಯತ್ ಸರಬರಾಜಿನಲ್ಲಿ ಕೊರತೆ ಉಂಟಾಗಲಿದೆ.

Bengaluru To Face Power Cuts On June 27 to June 29 full details

ಬಿಎಂಟಿಸಿ ಬಸ್ ಡಿಪೋ, ಶಂಕರಪ್ಪ ಎಸ್ಟೇಟ್ ಸೇರಿದಂತೆ ಇಸ್ರೋ ಲೇಔಟ್ ಮತ್ತು ನ್ಯೂ ಬಿಇಎಲ್ ರಸ್ತೆಯಲ್ಲಿ ಬೆಳಗ್ಗೆ 10ಗಂಟೆಯಿಂದ ಸಂಜೆ 5ರವರೆಗೆ ಸರಬರಾಜಿನಲ್ಲಿ ಕಡಿತವಾಗಲಿದೆ.

ಜೂ.28ರಂದು ಮಂಗಳವಾರ ಪೂರ್ವ ವಲಯ ಕೆಲವು ಪ್ರದೇಶಗಳಾದ ಎಚ್ ಆರ್ ಬಿಆರ್ ಬಡಾವಣೆ 2 ಮತ್ತು 3 ನೇ ಬ್ಲಾಕ್, ಕಾಮನಹಳ್ಳಿ, ಬಾಣಸವಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 11ಗಂಟೆಯಿಂದ ಸಂಜೆ 5ರ ವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.

ಬೆಳಗ್ಗೆಯಿಂದ ಸಂಜೆವರೆಗೆ ವಿದ್ಯುತ್ ಸ್ಥಗಿತ:

ಅಲ್ಲದೇ ಜೂ.29 ರಂದು ಬುಧವಾರ ಕೋರಮಂಗಲ 2ನೇ ಬ್ಲಾಕ್, ಮಡಿವಾಳ ಟೋಟಲ್ ಮಾಲ್, ದವನಂ ಜ್ಯುವೆಲರ್ಸ್ ಪ್ರದೇಶ, ಮಡಿವಾಳ, ಸಿದ್ಧಾರ್ಥ ಕಾಲೋನಿ, ಕೋರಮಂಗಲ 5ನೇ ಬ್ಲಾಕ್, ಕೈಗಾರಿಕಾ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 11ಗಂಟೆಯಿಂದ ಮಧ್ಯಾಹ್ನ 2 ರವರೆಗೆ ಹಾಗೂ ಸಿಎಂಆರ್ ರಸ್ತೆ, ಎಚ್‌ಆರ್‌ಬಿಆರ್ ಬಡಾವಣೆಯ 3ನೇ ಬ್ಲಾಕ್, ರಾಮಯ್ಯ ಬಡಾವಣೆ, ಕರವಳ್ಳಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ಪೂರ್ವ ವಲಯದ ಕೆಲವು ಪ್ರದೇಶಗಳಲ್ಲಿ ವಿವಿಧ ಕಾಮಗಾರಿ ನಡೆಯುವುದರಿಂದ ಬೆಳಗ್ಗೆ 11ಗಂಟೆಯಿಂದ ಸಂಜೆ 5.30ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ತುರ್ತು ಸಂದರ್ಭದ ಸಂಪರ್ಕಕ್ಕಾಗಿ ಸಹಾಯವಾಣಿ

ತುರ್ತು ಸಂದರ್ಭಗಳಲ್ಲಿ ಸಮಸ್ಯೆಗಳ ಬಗ್ಗೆ ದೂರು ನೀಡಲು ಮತ್ತು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು ಅನುಕೂಲವಾಗುವಂತೆ ಬೆಸ್ಕಾಂ ವಲಯವಾರು ವಾಟ್ಸಾಪ್ ಸಂಖ್ಯೆಗಳನ್ನು ಈ ಹಿಂದೆಯೇ ಬಿಡುಗಡೆ ಮಾಡಿತ್ತು. ಬೆಸ್ಕಾಂ ನಾಲ್ಕು ವೃತ್ತಗಳನ್ನು (ದಕ್ಷಿಣ, ಉತ್ತರ, ಪಶ್ಚಿಮ ಮತ್ತು ಪೂರ್ವ) ಹೊಂದಿರುವ ಬೆಂಗಳೂರು ನಗರ ಜಿಲ್ಲೆಗೆ ನಾಲ್ಕು ಪ್ರತ್ಯೇಕ ವಾಟ್ಸಪ್ ಸಹಾಯವಾಣಿ ನೀಡಿದೆ.

ಸಹಾಯವಾಣಿ ಸಂಖ್ಯೆಗಳು:

ದಕ್ಷಿಣ ವೃತ್ತ 8277884011

ಪಶ್ಚಿಮ ವೃತ್ತ 8277884012

ಪೂರ್ವ 8277884013

ಉತ್ತರ 8277884014 ಈ ಸಂಖ್ಯೆಗಳ ಮೂಲಕ ಬೆಸ್ಕಾಂ ಸಂಪರ್ಕಿಸಬಹುದಾಗಿದೆ.

English summary
He Bengaluru Electricity Supply Company Limited (BESCOM) has announced that several areas in Bengaluru city will face interruptions in power supply on On June 27 to June 29.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X