• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆರ್ಥಿಕವಾಗಿ ಹಿಂದುಳಿದ ಬೆಂಗಳೂರಿಗರಿಗೆ ಸಚಿವ ಆರ್. ಅಶೋಕ್ ಸಿಹಿಸುದ್ದಿ!

|

ಬೆಂಗಳೂರು, ಜ. 28: ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡು ಅತಂತ್ರ ಸ್ಥಿತಿಯಲ್ಲಿದ್ದ ಬೆಂಗಳೂರಿನ ಜನರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ಕೊಟ್ಟಿದೆ. ಅಕ್ರಮ ಸಕ್ರಮ ಯೋಜನೆಯಡಿ ಬೆಂಗಳೂರಿನ 10 ಸಾವಿರ ಫಲಾನುಭವಿಗಳಿಗೆ ಮನೆಯ ಹಕ್ಕುಪತ್ರ ಕೊಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಬಸವನಗುಡಿಯ ನ್ಯಾಶನಲ್ ಕಾಲೇಜು ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ಮನೆ ಹಕ್ಕುಪತ್ರ ಕೊಡಲಾಗುವುದು.

   ಅಂಬೇಡ್ಕರ್ ಮೊಮ್ಮಗನ ವಿವಾದಾತ್ಮಕ ಹೇಳಿಕೆ | AMBEDKAR | RAJARATHNA AMBEDKAR | GRANDSON | RSS

   ಹಕ್ಕುಪತ್ರದ ಜೊತೆಗೆ ಫಲಾನುಭವಿಗಳ ಹೆಸರಿಗೆ ನೋಂದಣಿ ಮಾಡಲು ಸಿದ್ಧತೆಗಳನ್ನು ಕಂದಾಯ ಇಲಾಖೆ ಮಾಡಿಕೊಂಡಿದ್ದು, ನಾಳೆ ಏಕಕಾಲಕ್ಕೆ ರಾಜ್ಯಾದ್ಯಂತ ಯೋಜನೆ ಜಾರಿಗೆ ಬರಲಿದೆ.

   ಇಂದು 10 ಸಾವಿರ ಫಲಾನುಭವಿಗಳಿಗೆ ಅಕ್ರಮ ಸಕ್ರಮದಡಿ ಹಕ್ಕುಪತ್ರ

   ಇಂದು 10 ಸಾವಿರ ಫಲಾನುಭವಿಗಳಿಗೆ ಅಕ್ರಮ ಸಕ್ರಮದಡಿ ಹಕ್ಕುಪತ್ರ

   ಕಳೆದ 30 ವರ್ಷಗಳಿಂದ ಆತಂಕದಲ್ಲಿದ್ದ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ಜನರಿಗೆ ಹಕ್ಕುಪತ್ರ ವಿತರಣೆಗೆ ಈಗ ಕಾಲ ಕೂಡಿ ಬಂದಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾಧಿಕಾರಿಗಳು ಹಲವು ಸಭೆ ನಡೆಸಿ ಹಕ್ಕುಪತ್ರ ವಿತರಣೆಗೆ ಸಿದ್ಧತೆ ನಡೆಸಿದ್ದಾರೆ. ಈ ಅರ್ಜಿಗಳು 30 ವರ್ಷದಿಂದ ವಿಲೇವಾರಿಯಾಗಿರಲಿಲ್ಲ. ಈಗ ಅರ್ಜಿಗಳನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಪತಿ ಮತ್ತು ಪತ್ನಿ ಹೆಸರಿಗೆ ಜಂಟಿ ಖಾತೆ ಮಾಡಿಕೊಡಲಾಗುವುದು. ನೋಂದಣಿ ಮಾಡಿಸಿಕೊಳ್ಳಲು ಬರುವ ಫಲಾನುಭವಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಸರ್ಕಾರ ಮಾಡಿದೆ.

   ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಾಂಕೇತಿಕವಾಗಿ ಹಕ್ಕುಪತ್ರ ವಿತರಣೆ ಮಾಡಿದ ಬಳಿಕ ನೋಂದಣಿ ಶುರುವಾಗಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಬಸವನಗುಡಿಯ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಸಮಾವೇಶದ ಸಿದ್ಧತೆಗಳನ್ನು ಅವರು ವೀಕ್ಷಣೆ ಮಾಡಿದ ಬಳಿಕ ಮಾಹಿತಿ ಕೊಟ್ಟಿದ್ದಾರೆ.

   ಸಿದ್ದರಾಮಯ್ಯ ಹುಲಿಯಾ ಆದರೆ ಸಿಎಂ ಯಡಿಯೂರಪ್ಪ ರಾಜಾಹುಲಿ

   ಸಕ್ರಮಗೊಳಿಸಲು ರಾಜ್ಯ ಭೂಕಂದಾಯ ಕಾಯ್ದೆಗೆ ತಿದ್ದುಪಡಿ

   ಸಕ್ರಮಗೊಳಿಸಲು ರಾಜ್ಯ ಭೂಕಂದಾಯ ಕಾಯ್ದೆಗೆ ತಿದ್ದುಪಡಿ

   ರಾಜ್ಯದಲ್ಲಿನ ಸರ್ಕಾರಿ ಭೂಮಿಯಲ್ಲಿ ಅನಧೀಕೃತವಾಗಿ ವಾಸಕ್ಕೆ ಮನೆ ನಿರ್ಮಿಸಿಕೊಂಡಿರುವ ಆರ್ಥಿಕ ಹಿಂದುಳಿದ ಎಲ್ಲರಿಗೂ ಯೋಜನೆ ಅನ್ವಯಲಾಗಲಿದೆ. ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿರುವ ಸಕ್ರಮ ಮಾಡಲು ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಕಲಂ 94(ಸಿ) ಹಾಗೂ 94(ಸಿಸಿ) ಅವಕಾಶವನ್ನು ಸರ್ಕಾರ ಕಲ್ಪಿಸಿದೆ.

   ತಿದ್ದುಪಡಿ ಕಲಂ 94(ಸಿಸಿ)ಕಾಯ್ದೆಯಡಿ ಗ್ರಾಮೀಣ ಪ್ರದೇಶದಡಿ(ಬಿಬಿಎಂಪಿ ವ್ಯಾಪ್ತಿ ಬಿಟ್ಟು) ಗರಿಷ್ಟ 4 ಸಾವಿರ ಚ. ಅಡಿಯಷ್ಟು ಅನಧೀಕೃತ ವಾಸದ ಮನೆಗಳನ್ನು ಸಕ್ರಮ ಮಾಡಲು ಅವಕಾಶವಿದೆ. ಹಾಗೂ ನಗರ ಪ್ರದೇಶ(ಬಿಬಿಎಂಪಿ) ವ್ಯಾಪ್ತಿ ಒಳಗೆ 6 ನೂರು ಚ.ಅಡಿ ಮತ್ತು ಬಿಬಿಎಂಪಿ ಸರಹದ್ದಿನ 18 ಕಿ.ಮೀ. ಒಳಗಡೆ 1200 ಚ.ಅಡಿವರೆಗಿನ ಅನಧೀಕೃತ ಮನೆಗಳನ್ನು ಸಕ್ರಮ ಮಾಡಲು ಅವಕಾಶವಿದೆ.

   1200 ಚದರ ಅಡಿಯಲ್ಲಿ ಕಟ್ಟಿದ ಮನೆಯೂ ಸಕ್ರಮವಾಗಲಿದೆ!

   2015ರ ವರೆಗೆ ಅಕ್ರಮವಾಗಿ ಮನೆ ನಿರ್ಮಿಸಿಕೊಂಡವರಿಗೆ ಯೋಜನೆ ಅನ್ವಯ

   2015ರ ವರೆಗೆ ಅಕ್ರಮವಾಗಿ ಮನೆ ನಿರ್ಮಿಸಿಕೊಂಡವರಿಗೆ ಯೋಜನೆ ಅನ್ವಯ

   ಫಲಾನುಭವಿಯು 2015ಕ್ಕೂ ಮೊದಲು ಅನಧೀಕೃತವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಮಾತ್ರ ಸಕ್ರಮ ಮಾಡಲು ಅವಕಾಶವಿದೆ. ಪ್ರಸ್ತು ಅರ್ಜಿಗಳನ್ನು ಸ್ವೀಕರಿಸುವ ಅವಧಿಯು 2019ರ ಮಾರ್ಚ್‌ 31ಕ್ಕೆ ಅಂತ್ಯಗೊಂಡಿದೆ. ಈಗಾಗಲೇ ಸ್ವೀಕರಿಸಿರುವ ಅರ್ಜಿಗಳನ್ನು ಇತ್ಯರ್ಥಪಡಿಸುವ ಕೆಲಸ ಮುಂದುವರೆದಿದೆ.

   ಇನ್ನು ಕನಿಷ್ಟ ಶುಲ್ಕವನ್ನು ಅಕ್ರಮ ಸಕ್ರಮಕ್ಕೆ ಸರ್ಕಾರ ವಿಧಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯ ವರ್ಗಕ್ಕೆ ಗರಿಷ್ಟ 3000 ರೂ.ಗಳನ್ನು ಎಸ್‌ಸಿ, ಎಸ್‌ಟಿ, ವಿಕಲಚೇತನರು ಹಾಗೂ ಮಾಜಿ ಸೈನಿಕರಿಗೆ 1500ರೂ.ಗಳನ್ನು ಸಕ್ರಮೀಕರಣಕ್ಕೆ ಶುಲ್ಕ ವಿಧಿಸಿದೆ. ಇನ್ನು ನಗರ ಪ್ರದೇಶದಲ್ಲಿ ಸಾಮಾನ್ಯ ವರ್ಗಕ್ಕೆ 5000 ರೂ.ಗಳನ್ನು ಎಸ್‌ಸಿ, ಎಸ್‌ಟಿ, ಮಾಜಿ ಸೈನಿಕರು ಹಾಗೂ ವಿಕಲಚೇತನರಿಗೆ ವಿಧಿಸಲಾಗಿದೆ.

   ಬಿಬಿಎಂಪಿ ವ್ಯಾಪ್ತಿಯಿಂದ 18 ಕಿ.ಮೀ. ಒಳಗಡೆ ಸಾಮಾನ್ಯ ವರ್ಗಕ್ಕೆ 10 ಸಾವಿರ ರೂ.ಗಳನ್ನು ನಿಗದಿ ಮಾಡಲಾಗಿದೆ. ಎಸ್‌ಸಿ, ಎಸ್‌ಟಿ, ವಿಕಲಚೇತನರು ಹಗೂ ಮಾಜಿ ಸೈನಿಕರಿಗೆ 5 ಸಾವಿರ ರೂ.ಗಳನ್ನು ನಿಗದಿ ಮಾಡಲಾಗಿದೆ.

   ಸಿಎಂ ಸ್ಥಾನದಿಂದ ಯಡಿಯೂರಪ್ಪ ಇಳಿಸಲು ಶಾ-ಮೋದಿ ತಂತ್ರ?

   ಯಾರು ಯಾರಿಗೆ ಎಲ್ಲಿ ಹಕ್ಕುಪತ್ರ ವಿತರಣೆ?

   ಯಾರು ಯಾರಿಗೆ ಎಲ್ಲಿ ಹಕ್ಕುಪತ್ರ ವಿತರಣೆ?

   ಬೆಂಗಳೂರು ನಗರ ಜಿಲ್ಲಾಡಳಿತದಿಂದ 9 ಸಾವಿರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದಿಂದ 1 ಸಾವಿರ ಫಲಾನುಭವಿಗಳಿಗೆ ನಾಳೆ ಹಕ್ಕುಪತ್ರ ವಿತರಿಸಿ ನೋಂದಣಿ ಮಾಡಿಕೊಡಲಾಗುತ್ತದೆ. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಕಂದಾಯ ಇಲಾಖೆ ಮಾಡಿಕೊಂಡಿದೆ.

   ತಾಲ್ಲೂಕುವಾರು, ವಿಧಾನಸಭಾ ಕ್ಷೇತ್ರವಾರು ವಿಂಗಡಿಸಿ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗುವುದು.

   ಫಲಾನುಭವಿಗಳಿಗೆ ಪಾರ್ಕಿಂಗ್ ಸೌಲಭ್ಯ

   ಫಲಾನುಭವಿಗಳಿಗೆ ಪಾರ್ಕಿಂಗ್ ಸೌಲಭ್ಯ

   ಬಸವನಗುಡಿಯ ನ್ಯಾಶನಲ್ ಕಾಲೇಜು ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ 10 ಸಾವಿರ ಜನರು ಭಾಗವಹಿಸಲಿದ್ದಾರೆ. ಇದಕ್ಕಾಗಿ 4 ಕಡೆಗಳಲ್ಲಿ ಪಾರ್ಕಿಂಗ್ ಸೌಲಭ್ಯವನ್ನು ಮಾಡಲಾಗಿದೆ. ಬೆಂಗಳೂರು ದಕ್ಷಿಣ ಹಾಗೂ ಆನೇಕಲ್ ತಾಲೂಕಿನಿಂದ ಬರುವವರಿಗೆ ಹೋ ಸ್ಕೂಲ್ ಜಂಕ್ಷನ್ ಬಳಿ, ಬೆಂಗಳೂರು ಉತ್ತರ ತಾಲೂಕಿನಿಂದ ಬರುವವರಿಗೆ ಶಂಕರ ಮಠ ರಸ್ತೆ, ಯಲಹಂಕ ತಾಲೂಕಿನಿಂದ ಬರುವವರಿಗೆ ಬುಲ್‌ಟೆಂಪಲ್ ರಸ್ತೆ, ಬೆಂಗಳೂರು ಪೂರ್ವ ತಾಲ್ಲೂಕು ಹಾಗೂ ಗ್ರಾಮಾಂತರ ಜಿಲ್ಲೆಯಿಂದ ಬರುವ ಫಲಾನುಭವಿಗಳಿಗೆ ನ್ಯಾಶನಲ್ ಕಾಲೇಜು ಜಂಕ್ಷನ್‌ನಿಂದ ಪ್ರೊ. ಶಿವಶಂಕರ್ ಜಂಕ್ಷನ್‌ನಲ್ಲಿ ಪಾರ್ಕಿಂಗ್ ಸೌಲಭ್ಯ ಒದಗಿಸಲಾಗಿದೆ.

   ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

   English summary
   Revenue minister R. Ashoka said the state government issuing title deeds under 94c and 94cc of Karnataka State Revenue act for the eligible applicants tomorrow.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X