ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಸಮಸ್ಯೆಗಳ ಬಗ್ಗೆ ಚರ್ಚಿಸಲು ಫೆ.14ರಂದು ಸಿವಿಕ್ ಫೆಸ್ಟ್‌

|
Google Oneindia Kannada News

ಬೆಂಗಳೂರು, ಫೆಬ್ರವರಿ 10 : ಬೆಂಗಳೂರು ನಗರದ ನಿವಾಸಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ವೇದಿಕೆಯೊಂದು ಸಿದ್ಧವಾಗಿದೆ. ಫೆ.14ರಂದು ಬೆಂಗಳೂರು ಸಿವಿಕ್ ಫೆಸ್ಟ್ 2019 ನಡೆಯಲಿದೆ.

ಐ ಚೇಂಜ್ ಮೈ ಸಿಟಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಂಟಿಯಾಗಿ Bengaluru Civic Fest 2019 ಆಯೋಜನೆ ಮಾಡಿವೆ. ಫೆ.14ರ ಗುರುವಾರ ನಗರದ ಫ್ರೀಡಂಪಾರ್ಕ್‌ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪ್ರವೇಶ ಉಚಿತ.

ಸಾಲದ ಬಗ್ಗೆ ಶ್ವೇತ ಪತ್ರ ಹೊರಡಿಸಿ: ಬಿಬಿಎಂಪಿಗೆ ಸರ್ಕಾರ ಆದೇಶಸಾಲದ ಬಗ್ಗೆ ಶ್ವೇತ ಪತ್ರ ಹೊರಡಿಸಿ: ಬಿಬಿಎಂಪಿಗೆ ಸರ್ಕಾರ ಆದೇಶ

ನಗರದ ಜನರು, ವಿವಿಧ ಸಂಘಟನೆಗಳು, ನಾಗರೀಕರ ಗುಂಪುಗಳು ನಗರದ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸಲು ಫೆಸ್ಟ್ ಆಯೋಜನೆ ಮಾಡಲಾಗಿದೆ. ಸರ್ಕಾರದ ವಿವಿಧ ಇಲಾಖೆಗಳು ಜನರ ಸಲಹೆಗಳನ್ನು ಪಡೆದು ನಗರವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಫೆಸ್ಟ್ ಸಹಕಾರಿಯಾಗಿದೆ.

ಫೆಬ್ರವರಿ 15 ಕ್ಕೆ ಬಿಬಿಎಂಪಿ ಬಜೆಟ್ ಮಂಡಿಸಲು ಸಿದ್ಧತೆಫೆಬ್ರವರಿ 15 ಕ್ಕೆ ಬಿಬಿಎಂಪಿ ಬಜೆಟ್ ಮಂಡಿಸಲು ಸಿದ್ಧತೆ

 Title : Bengaluru Civic Fest on February 14

ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ನಾಗರೀಕ ಸಂಘಗಳಗಳ ಸದಸ್ಯರು ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆಯ ತನಕ ನಡೆಯಲಿರುವ ಫೆಸ್ಟ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಸ್ಕಾಂ, ಬಿಎಂಆರ್‌ಸಿಎಲ್, ಜಲಮಂಡಳಿ, ಬಿಬಿಎಂಪಿ, ಬಿಟಿಪಿಯ ಅಧಿಕಾರಿಗಳು ನಗರದ ಅಭಿವೃದ್ಧಿ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಿದ್ದಾರೆ.

ಮಾರ್ಚ್‌ನಲ್ಲಿ ಬೆಂಗಳೂರಿನ ಎಲ್ಲಾ ಬೀದಿಗಳಲ್ಲಿ ಎಲ್‌ಇಡಿ ಬೆಳಕುಮಾರ್ಚ್‌ನಲ್ಲಿ ಬೆಂಗಳೂರಿನ ಎಲ್ಲಾ ಬೀದಿಗಳಲ್ಲಿ ಎಲ್‌ಇಡಿ ಬೆಳಕು

ಫೆಸ್ಟ್‌ನಲ್ಲಿ ಬೀದಿ ನಾಟಕ, ಸಂಗೀತ, ನಾಟಕ ಯಕ್ಷಗಾಗ, ಕಥೆ ಹೇಳುವುದು, ಚಿತ್ರಕಲೆ, ವಿದ್ಯಾರ್ಥಿಗಳು ಮಾಡಿದ ವಿವಿಧ ವಿಜ್ಞಾನ ಮಾದರಿಗಳ ಪ್ರದರ್ಶನ, ಗುಂಪು ಚರ್ಚೆ ಮುಂತಾದವುಗಳಿಗೂ ಅವಕಾಶ ಕಲ್ಪಿಸಲಾಗಿದೆ. ಬನ್ನಿ ಎಲ್ಲರೂ ಪಾಲ್ಗೊಳ್ಳಿ.

English summary
IChangeMyCity, an initiative of Janaagraha is organising the Bengaluru Civic Fest in partnership with the BBMP on February 14, 2019 at Freedom Park. The fest is a celebration of Active Citizenship. BESCOM, BMRCL, BWSSB, BBMP, BTP and others too will showcase their various projects and initiatives in the fest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X