ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿರಾನಗರದಲ್ಲಿ ಟೈಟಾನ್ ನಿಂದ ಮೊಟ್ಟ ಮೊದಲ ಸೀರೆ ಶೋರೂಮ್

ಭಾರತದಲ್ಲಿ ಮೊದಲ ಬಾರಿಗೆ ಟೈಟಾನ್‍ ನ ಮೊದಲ ಸೀರೆ ಶೋರೂಂ ಬೆಂಗಳೂರಿನ ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಆರಂಭವಾಗಿದೆ. 20 ಕ್ಕೂ ಹೆಚ್ಚು ರಾಜ್ಯಗಳ ಕೈಮಗ್ಗ, ಕರಕುಶಲ ಸೀರೆಗಳ ಕಣಜ ಇಲ್ಲಿ ಕಾಣಿರಿ...

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 3: ದೇಶದ ಪಾರಂಪರಿಕ ವೃತ್ತಿಯಾಗಿರುವ ಕೈಮಗ್ಗ ಮತ್ತು ಭಾರತೀಯ ನಾರಿಯ ಸಾಂಸ್ಕೃತಿಕ ಉಡುಗೆಯಾದ ಸೀರೆಯನ್ನು ಈ ಆಧುನಿಕ ಜಗತ್ತಿನಲ್ಲಿ ಮತ್ತಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಟೈಟಾನ್ ನ 'ತನೈರಾ' ಮುಂದಾಗಿದೆ.

ಇದಕ್ಕಾಗಿ ತನೈರಾದ ತಂಡ ದೇಶಾದ್ಯಂತ ಇರುವ ಪಾರಂಪರಿಕ ಕೈಮಗ್ಗ ನೇಕಾರರನ್ನು ಸಂಪರ್ಕಿಸಿ ಕೈಮಗ್ಗ ಉತ್ಪನ್ನಗಳು ಮತ್ತು ಕರಕುಶಲಯುಕ್ತ ಸೀರೆಗಳ ಸಂಗ್ರಹವನ್ನು ಬೆಂಗಳೂರಿನ ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಆರಂಭವಾಗಿರುವ ತನೈರಾ ಶೋರೂಂನಲ್ಲಿ ಪ್ರದರ್ಶಿಸುತ್ತಿದೆ.[ಕಾಲೇಜಿನಲ್ಲಿ ಸೀರೆಯುಟ್ಟು ಮಿಂಚಿದ ಬೆಡಗಿಯರು...]

ಬೆಂಗಳೂರಿನ ಮೊದಲ ಈ ಶೋರೂಂ ಅನ್ನು ಟೈಟಾನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಭಾಸ್ಕರ್ ಭಟ್ ಅವರು ಉದ್ಘಾಟನೆ ಮಾಡಿದರು. ಇಂದಿರಾನಗರದ 100 ಅಡಿ ರಸ್ತೆಯಲ್ಲಿರುವ ಪುನರ್‍ನವೀಕರಣ ಮಾಡಿರುವ ಈ ತನೈರಾ ಸ್ಟೋರಿನಲ್ಲಿ ಶಾಪಿಂಗ್ ಗೆ ಹೇಳಿ ಮಾಡಿಸಿದ ವಾತಾವರಣ ಸೃಷ್ಟಿಯಾಗಿದೆ. ತನೈರಾದಲ್ಲಿ ಏನೇನಿದೆ? ಮುಂದೆ ಓದಿ...

ಆಕರ್ಷಕವಾದ ಸೀರೆಗಳ ಕಣಜ

ಆಕರ್ಷಕವಾದ ಸೀರೆಗಳ ಕಣಜ

ಅಸ್ಸಾಂನ ಮುಗಾಸ್, ಚೆಟ್ಟಿನಾಡಿನ ಕಾಟನ್, ಭಗಲ್ಪುರದ ತುಸ್ಸಾರ್, ಗುಜರಾತ್, ಆಂಧ್ರಪ್ರದೇಶ ಮತ್ತು ಒರಿಸ್ಸಾದ ಇಕತ್, ಬಂಗಾಳದ ಜಾಮ್‍ಧಾನಿ, ಲಕ್ನೋದ ಚಿಕಂಕರಿ ಕುಶಲ, ಅತ್ಯಾಕರ್ಷಕವಾದ ಮತ್ತು ಶಾಸ್ತ್ರೀಯವಾದ ಬನಾರಸ್ ರೇಷ್ಮೆ, ಕಾಂಜೀವರಂ, ಪಟಾನ್ ಪಟೋಲಾಸ್ ಮತ್ತು ಮಸ್ಲಿನ್ ಜಾಮ್‍ಧಾನಿಯಂತಹ ಹೇರ್‍ಲೂಂ ಪೀಸ್ ನಂಥ ಆಕರ್ಷಕವಾದ ಸೀರೆಗಳನ್ನು ಐಟಿ ಸಿಟಿಗೆ ತಂದಿದೆ.[ಒಂದು ರುಪಾಯಿಗೆ ಒಂದು ಸೀರೆ ಎಂದಿದ್ದೇ ತಡ!]

ಯುವ ಮಹಿಳೆಯರನ್ನು ಆಕರ್ಷಿಸಲಿದೆ.

ಯುವ ಮಹಿಳೆಯರನ್ನು ಆಕರ್ಷಿಸಲಿದೆ.

3500 ಕ್ಕೂ ಅಧಿಕ ಸೀರೆ, ಲೆಹೆಂಗಾ, ಶಾಲುಗಳು ಮತ್ತು ದುಪಟ್ಟಾಗಳ ಕಣಜವೇ ಇದೆ. ಇವುಗಳ ಬೆಲೆ 2000 ರೂಪಾಯಿಯಿಂದ 2.5 ಲಕ್ಷ ರೂಪಾಯಿಗಳು. ಜತೆಗೆ ರೆಡಿಮೇಟ್ ಕುಪ್ಪಸಗಳು, ಗ್ರಾಹಕರಿಗೆ ಅನುಕೂಲಕ್ಕಾಗಿ ಹೊಲಿಗೆ ಸೇವೆಯನ್ನೂ ಕಲ್ಪಿಸಲಾಗುತ್ತಿದೆ. ಇಂದಿರಾನಗರದ 100 ಅಡಿ ರಸ್ತೆಯಲ್ಲಿರುವ ಈ ಮಳಿಗೆ ಯುವ ಮಹಿಳೆಯರನ್ನು ಆಕರ್ಷಿಸಲಿದೆ.[ಜವಳಿ ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ]

ಅಜಯ್ ಚಾವ್ಲ

ಅಜಯ್ ಚಾವ್ಲ

ಬೆಂಗಳೂರಿನ ಮೊದಲ ಈ ಶೋರೂಂ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ಟೈಟಾನ್ ಕಂಪನಿಯ ಸ್ಟ್ರಾಟೆಜಿ ಬ್ಯುಸಿನೆಸ್ ಇನ್‍ಕ್ಯುಬೇಷನ್ ನ ಎಸ್‍ವಿಪಿ ಅಜಯ್ ಚಾವ್ಲ, 'ಲೈಫ್ ಸ್ಟೈಲ್ ಉತ್ಪನ್ನಗಳ ವಿಸ್ತರಣೆ ಅವಕಾಶವನ್ನು ಟೈಟಾನ್ ಬಳಸಿಕೊಳ್ಳುತ್ತಿದೆ.
ಅಸಂಘಟಿತ ವಲಯ ಅಥವಾ ನಿರ್ಲಕ್ಷ್ಯಕ್ಕೆ ಒಳಗಾದ ವರ್ಗದವರು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಅವರಿಗೆ ನೆರವಾಗಲಿದ್ದೇವೆ. ತನೈರಾ ಮೂಲಕ ನಾವು ನಮ್ಮ ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ, ಪ್ರಾಕೃತಿಕ ಉತ್ಪನ್ನಗಳನ್ನು ಪೂರೈಕೆ ಮಾಡುತ್ತಿದ್ದೇವೆ'' ಎಂದರು.

ಶ್ಯಾಮಲಾ ರಮಣನ್

ಶ್ಯಾಮಲಾ ರಮಣನ್

ಗ್ರಾಹಕರಿಗೆ ಇಲ್ಲಿನ ಜವಳಿ ಉತ್ಪನ್ನಗಳ ಶುದ್ಧತನ ಮತ್ತು ಕರಕುಶಲತೆಯನ್ನು ಕಣ್ಣಾರೆ ಕಂಡು ಅವರಿಗೆ ವೈವಿಧ್ಯಮಯ ಮತ್ತು ವಿಭಿನ್ನವಾದ ಅನುಭವವನ್ನು ನೀಡಲಿದೆ. ಹತ್ತು ಹಲವಾರು ವಿನ್ಯಾಸದ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳಲು ಮಹಿಳೆಯರಿಗೆ ಸಾಕಷ್ಟು ಅವಕಾಶಗಳು ಇಲ್ಲಿವೆ'' ಎಂದು ಇದೇ ಸಂದರ್ಭದಲ್ಲಿ ಟೈಟಾನ್ ಕಂಪನಿಯ ವ್ಯವಹಾರಗಳ ಮುಖ್ಯಸ್ಥೆ ಶ್ಯಾಮಲಾ ರಮಣನ್ ತಿಳಿಸಿದರು.

English summary
Titan opens its first Handloom apparel store in Bengaluru’s upscale Indiranagar, marking its entry into the women wear segment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X