ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ರಾಫಿಕ್ ಪೊಲೀಸರ ಕಣ್ಣಿಗೆ 'ಸನ್ ಗ್ಲಾಸ್' ಹಾಕಿದ ಟೈಟಾನ್ ಐ

By Mahesh
|
Google Oneindia Kannada News

ಬೆಂಗಳೂರು, ಅ.18: ಟೈಟಾನ್ ಕಂಪನಿ ಲಿಮಿಟೆಡ್ ಭಾರತದ ಮುಂಚೂಣಿ ಕನ್ನಡಕ ವಹಿವಾಟು ಸಂಸ್ಥೆ ಟೈಟಾನ್ ಐ ಪ್ಲಸ್, ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಅವರ ನಿಸ್ವಾರ್ಥ ಸೇವೆ ಮತ್ತು ಬದ್ಧತೆಗಾಗಿ ಬೆಂಬಲ ಮುಂದುವರಿಸಿದೆ. ಬೆಂಗಳೂರು ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸರ ಕಣ್ಣಿಗೆ ಸನ್ ಗ್ಲಾಸ್ ತೊಡಿಸಿ, ಕಣ್ಣಿನ ರಕ್ಷಣೆ ಹೊಣೆ ಹೊತ್ತಿರುವುದಾಗಿ ಟೈಟಾನ್ ಐಪ್ಲಸ್ ಘೋಷಿಸಿದೆ.

ಈ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ(ಟ್ರಾಫಿಕ್) ಡಾ.ಎಂ.ಎ.ಸಲೀಂ, ಟೈಟಾನ್ ಕಂಪನಿ ಲಿಮಿಟೆಡ್‍ನ ಕನ್ನಡಕ ವಹಿವಾಟು ವಿಭಾಗದ ಸಿಇಒ ರೊನೈ ತಲಟಿಯೊಂದಿಗೆ ಅನೇಕ ಹಿರಿಯ ಅಧಿಕಾರಿಗಳು ಮತ್ತು ಆರಕ್ಷಕರು ಹಾಜರಿದ್ದರು.[ಪ್ರಜ್ವಲ್ ಯೋಜನೆಗೆ ಚಾಲನೆ]

ಟೈಟಾನ್ ಐಪ್ಲಸ್ ಬೆಂಗಳೂರು ಟ್ರಾಫಿಕ್ ಮ್ಯಾನೇಜ್ಮೆಂಟ್ ಕೇಂದ್ರದಲ್ಲಿ ಉಚಿತ ನೇತ್ರ ತಪಾಸಣೆ ನಡೆಸಿ ಸಾವಿರಾರು ಆರಕ್ಷಕ ಹಾಗೂ ಆರಕ್ಷಕಿಯರಿಗೆ ಸನ್ ಗ್ಲಾಸ್ ಗಳನ್ನು ವಿತರಿಸಲಾಯಿತು.

ನಗರದಾದ್ಯಂತ ಟೈಟಾನ್ ಐಪ್ಲಸ್ ಮಳಿಗೆಗಳಲ್ಲಿ ಆರಕ್ಷಕರು ಮತ್ತು ಅವರ ಕುಟುಂಬಕ್ಕೆ ಉಚಿತ ನೇತ್ರ ತಪಾಸಣೆ ನಡೆಯಲಿದೆ. ಗ್ಲಾಸ್ ಗಳು ಅಗತ್ಯವಿರುವವರಿಗೆ ಟೈಟಾನ್ ಬ್ರ್ಯಾಂಡ್ ಫ್ರೇಂಗಳ ಮೇಲೆ ವಿಶೇಷ ರಿಯಾಯಿತಿ ಘೋಷಿಸಿದೆ.[ಕಣ್ಣಿನ ಸುರಕ್ಷತಾ ಸಲಹೆಗಾಗಿ 'ವಿಶ್ವದೃಷ್ಟಿ ದಿನ']

ಈ ಸಂದರ್ಭದಲ್ಲಿ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ(ಟ್ರಾಫಿಕ್) ಡಾ.ಎಂ.ಎ.ಸಲೀಂ, ನಮ್ಮನ್ನು ಗುರುತಿಸಿ ಬೆಂಬಲಿಸುತ್ತಿರುವ ಟೈಟಾನ್ ಐಪ್ಲಸ್‍ನಿಂದ ನಾವು ತುಂಬಾ ಸಂತೋಷಗೊಂಡಿದ್ದೇವೆ. ನಾಗರೀಕರ ಸುರಕ್ಷತೆಗೆ ನಾವು ಶ್ರಮ ಹಾಕುತ್ತೇವೆ. ನಮ್ಮ ಕಣ್ಣಿನ ಸುರಕ್ಷತೆಗೆ ಟೈಟಾನ್ ಐಪ್ಲಸ್ ಶ್ರಮ ಹಾಕುತ್ತಿರುವುದು ನಿಜಕ್ಕೂ ಸಂತಸದ ಸಂಗತಿ ಎಂದರು.

ಸಿಇಒ ರೊನೈ ತಲಟಿ ಹಾಗೂ ಸಲೀಂ

ಸಿಇಒ ರೊನೈ ತಲಟಿ ಹಾಗೂ ಸಲೀಂ

ಟೈಟಾನ್ ಕಂಪನಿ ಲಿಮಿಟೆಡ್ ನ ಕನ್ನಡಕ ವಹಿವಾಟು ವಿಭಾಗದ ಸಿಇಒ ರೊನೈ ತಲಟಿ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತ(ಟ್ರಾಫಿಕ್) ಡಾ.ಎಂ.ಎ.ಸಲೀ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಮೊದಲಿಗೆ ಸಲೀಂ ಅವರ ಕಣ್ಣಿನ ಪರೀಕ್ಷೆ

ಮೊದಲಿಗೆ ಸಲೀಂ ಅವರ ಕಣ್ಣಿನ ಪರೀಕ್ಷೆ

ಮೊದಲಿಗೆ ಡಾ. ಸಲೀಂ ಅವರ ಕಣ್ಣಿನ ಪರೀಕ್ಷೆ ಮಾಡಲಾಯಿತು. ಅತ್ಯಾಧುನಿಕ ಯಂತ್ರಗಳ ನೆರವಿನಿಂದ ಸುಲಭವಾಗಿ ಸುರಕ್ಷಿತವಾಗಿ ಪರೀಕ್ಷೆ ನಡೆಸಲಾಗಿದೆ.

ಡಾ.ಎಂ.ಎ.ಸಲೀಂ ಮಾತನಾಡಿ

ಡಾ.ಎಂ.ಎ.ಸಲೀಂ ಮಾತನಾಡಿ

ಹೆಚ್ಚುವರಿ ಪೊಲೀಸ್ ಆಯುಕ್ತ(ಟ್ರಾಫಿಕ್) ಡಾ.ಎಂ.ಎ.ಸಲೀಂ ಮಾತನಾಡಿ, ನಮ್ಮನ್ನು ಗುರುತಿಸಿ ಬೆಂಬಲಿಸುತ್ತಿರುವ ಟೈಟಾನ್ ಐಪ್ಲಸ್ ನಿಂದ ನಾವು ತುಂಬಾ ಸಂತೋಷಗೊಂಡಿದ್ದೇವೆ. ನಾಗರೀಕರ ಸುರಕ್ಷತೆಗೆ ನಾವು ಶ್ರಮ ಹಾಕುತ್ತೇವೆ. ನಮ್ಮ ಕಣ್ಣಿನ ಸುರಕ್ಷತೆಗೆ ಟೈಟಾನ್ ಐಪ್ಲಸ್ ಶ್ರಮ ಹಾಕುತ್ತಿರುವುದು ನಿಜಕ್ಕೂ ಸಂತಸದ ಸಂಗತಿ ಎಂದರು.

ಪೊಲೀಸ್ ಪೇದೆಗಳಿಗೆ ಸನ್ ಗ್ಲಾಸ್

ಪೊಲೀಸ್ ಪೇದೆಗಳಿಗೆ ಸನ್ ಗ್ಲಾಸ್

ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಗಳಿಗೆ ಸನ್ ಗ್ಲಾಸ್ ತೊಡಿಸಲಾಯಿತು. ಚಿತ್ರದಲ್ಲಿ ಸಲೀಂ ಅವರನ್ನು ಕಾಣಬಹುದು.

ಸಿಇಒ ರೊನೈ ತಲಟಿ ಮಾತನಾಡಿ

ಸಿಇಒ ರೊನೈ ತಲಟಿ ಮಾತನಾಡಿ

ನಾವು ಸದಾ ಬೆಂಗಳೂರು ಟ್ರಾಫಿಕ್ ಪೊಲೀಸರ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸುತ್ತೇವೆ. ಟ್ರಾಫಿಕ್ ಪೊಲೀಸ್ ಸಮುದಾಯ ಸದಾ ಸಕ್ರಿಯವಾಗಿರುತ್ತದೆ, ಅದು ಮಳೆಯಾಗಲಿ, ಗಾಳಿಯಾಗಲಿ, ಬಿಸಿಲಾಗಲಿ. ನಮ್ಮ ರಕ್ಷಣೆಗಾಗಿ ಕಠಿಣ ವಾತಾವರಣ ಮತ್ತು ಮಾಲಿನ್ಯವನ್ನು ಎದುರಿಸುತ್ತಾರೆ ಎಂದರು.

ಪೊಲೀಸ್ ಸಮುದಾಯಕ್ಕೆ ಬೆಂಬಲ

ಪೊಲೀಸ್ ಸಮುದಾಯಕ್ಕೆ ಬೆಂಬಲ

ಟೈಟಾನ್ ಐಪ್ಲಸ್ ಪೊಲೀಸ್ ಸಮುದಾಯಕ್ಕೆ ಬೆಂಬಲವನ್ನು ವಿಸ್ತರಿಸುವ ಆಶಯ ಹೊಂದಿದೆ. ನಾವು ಸದಾ ಗುಣಮಟ್ಟ ಮತ್ತು ಬೆಳವಣಿಗೆಯನ್ನು ಸಾಧಿಸುವ ಬ್ರ್ಯಾಂಡ್. ಪೊಲೀಸರಿಗೆ ಸೇವೆ ಒದಗಿಸಲು ನಾವು ಅತ್ಯಂತ ಸಂತೋಷಪಡುತ್ತೇವೆ ಎಂದು ಟೈಟಾನ್ ಸಂಸ್ಥೆ ಹೇಳಿದೆ.

ಸನ್ ಗ್ಲಾಸ್ ತೊಟ್ಟ ಮಹಿಳಾ ಪೊಲೀಸ್

ಸನ್ ಗ್ಲಾಸ್ ತೊಟ್ಟ ಮಹಿಳಾ ಪೊಲೀಸ್

ಸನ್ ಗ್ಲಾಸ್ ತೊಟ್ಟ ಮಹಿಳಾ ಪೊಲೀಸ್ ಸಿಬ್ಬಂದಿಗಳು ಕಣ್ಣಿನ ಸುರಕ್ಷತೆ ಬಗ್ಗೆ ತಿಳಿದು ಕೊಳ್ಳುತ್ತಿದ್ದಾರೆ.

ವಿಶೇಷ ರಿಯಾಯಿತಿ ಘೋಷಿಸಿದೆ

ವಿಶೇಷ ರಿಯಾಯಿತಿ ಘೋಷಿಸಿದೆ

ನಗರದಾದ್ಯಂತ ಟೈಟಾನ್ ಐಪ್ಲಸ್ ಮಳಿಗೆಗಳಲ್ಲಿ ಆರಕ್ಷಕರು ಮತ್ತು ಅವರ ಕುಟುಂಬಕ್ಕೆ ಉಚಿತ ನೇತ್ರ ತಪಾಸಣೆ ನಡೆಯಲಿದೆ. ಗ್ಲಾಸ್ ಗಳು ಅಗತ್ಯವಿರುವವರಿಗೆ ಟೈಟಾನ್ ಬ್ರ್ಯಾಂಡ್ ಫ್ರೇಂಗಳ ಮೇಲೆ ವಿಶೇಷ ರಿಯಾಯಿತಿ ಘೋಷಿಸಿದೆ.

English summary
Titan Eyeplus, India’s leading eyewear retail chain, has extended support to the Bangalore Traffic Police for their selfless service and commitment, by providing them with eyecare services in an event held at the Bangalore Traffic Management Centre. Titan Eye Plus has distributed more than 1,000 sunglasses to traffic police personnel said M A Saleem, Additional Commissioner of Police (Traffic).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X