ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿಕ್ ಟಾಕ್ ಸ್ಟಾರ್ ಇನ್ ಸ್ಪೆಕ್ಟರ್ ನಿಜ ಮುಖವಾಡ ಬಯಲಿಗೆ!

|
Google Oneindia Kannada News

ಬೆಂಗಳೂರು, ಡಿಸೆಂಬರ್ 20: ಟಿಕ್ ಟಾಕ್ ವಿಡಿಯೋ ಮಾಡಿ ಜನಪ್ರಿಯವಾಗಿದ್ದ ಪೊಲೀಸ್ ಇನ್ ಸ್ಪೆಕ್ಟರ್ ಅವಾಚ್ಯ ಪದಗಳಿಂದ ನಿಂದಿಸಿ ಪೌರ ಕಾರ್ಮಿಕರ ಮೇಲೆ ದರ್ಪ ತೋರಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸ್ ಇನ್ಸ್ ಪೆಕ್ಟರ್ ದುಂಡಾವರ್ತನೆಯ ವಿಡಿಯೋಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿವೆ.

ಮಾಗಡಿ ರಸ್ತೆ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಆನಂದ ಮತ್ತು ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಪೌರ ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಿದ ಆರೋಪಕ್ಕೆ ಗುರಿಯಾದವರು. ನಟ ಡಾ. ರಾಜ್ ಕುಮಾರ್ ಅವರ ಹಾಡುಗಳ ಬಗ್ಗೆ ಟಿಕ್ ಟಾಕ್ ಮಾಡಿದ್ದ ಮಾಗಡಿ ರಸ್ತೆ ಸಂಚಾರ ಠಾಣೆ ಇನ್ಸ್ ಪೆಕ್ಟರ್ ಆನಂದ್ ಅವರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.

ಬೆಂಗಳೂರಲ್ಲಿ ಬೈಕ್ ಸವಾರನಿಗೆ 23 ಸಾವಿರ ರೂ. ದಂಡ!ಬೆಂಗಳೂರಲ್ಲಿ ಬೈಕ್ ಸವಾರನಿಗೆ 23 ಸಾವಿರ ರೂ. ದಂಡ!

ಪೊಲೀಸ್ ಸಿಬ್ಬಂದಿ ಮೆಚ್ಚಿಕೊಂಡು ಎರಡು ದಿನದ ಹಿಂದಷ್ಟೇ ಆನಂದ್ ಅವರಿಂದ ಹಾಡು ಹಾಡಿಸಲಾಗಿತ್ತು! ಆದರೆ ಈಗ ರಸ್ತೆ ಬದಿ ನಿಲ್ಲಿಸಿದ್ದ ಬಿಬಿಎಂಪಿ ಕಸದ ಆಟೋ ನಿಲ್ಲಿಸಿದ್ದ ಕಾರ್ಮಿಕರ ಮೇಲೆ ದೌರ್ಜನ್ಯವೆಸಗಿ ತನ್ನ ನಿಜವಾದ ಮುಖ ತೋರಿಸಿದ್ದಾರೆ. ಇನ್‌ಸ್ಪೆಕ್ಟರ್ ಆನಂದ್ ರಸ್ತೆಯಲ್ಲಿಯೇ ರೌದ್ರಾವತಾರ ತಾಳಿದ್ದನ್ನು ನೋಡಿದ ಸಾರ್ವಜನಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದಾರೆ.

Tik tok famous inspectors brutal face exposed by videos

ಮಾಗಡಿ ರಸ್ತೆಯ ರಾಯಪುರ ವಾರ್ಡ್ ಸಮೀಪ ರಸ್ತೆ ಬದಿ ಕಸ ತುಂಬಿದ್ದ ಆಟೋ ನಿಲ್ಲಿಸಲಾಗಿತ್ತು. ಅಲ್ಲಿಗೆ ಬರುವ ಸಬ್ ಇನ್‌ಸ್ಪೆಕ್ಟರ್ ಹಾಗೂ ಇನ್ ಸ್ಪೆಕ್ಟರ್, ನೋ ಪಾರ್ಕಿಂಗ್ ಮಾಡಿದ್ದ ವಾಹನಗಳಿಗೆ ದಂಡ ವಿಧಿಸಿ ಅವನ್ನು ತೆರವುಗೊಳಿಸಿ ಕ್ರಮ ಜರುಗಿಸಬೇಕಿತ್ತು. ಆದರೆ, ಬೀದಿಗೆ ಇಳಿದಿದ್ದೇ ಇನ್‌ ಸ್ಪೆಕ್ಟರ್ ಪೊಲೀಸ್ ಸಮುದಾಯವೇ ತಲೆ ತಗ್ಗಿಸುವಂತಹ ಪದಗಳನ್ನು ಬಳಸಿ ಪೌರ ಕಾರ್ಮಿಕರನ್ನು ನಿಂದಿಸಿದ್ದಾರೆ. ಬೋ ಮಗನೇ..ಸೂ.. ಮಗನೇ.. ಲೋ ಬಾಲ್... ಎಂಬ ಪದ ಬಳಸಿದ್ದಾರೆ.

Tik tok famous inspectors brutal face exposed by videos

ಮೊದಲು ಪೌರ ಕಾರ್ಮಿಕನ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಮಾತಿನ ಚಕಮಕಿ ನಡೆಯುತ್ತದೆ. ಇದನ್ನು ಸಾರ್ವಜನಿಕರು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಇದಾದ ಬಳಿಕ ಮತ್ತೊಂದು ಘಟನೆಯಲ್ಲಿ ನಿಮ್ಮ ಅಪ್ಪನದಾ ಈ ರಸ್ತೆ , ಒಳಗೆ ಪಾರ್ಕಿಂಗ್ ಮಾಡು. ಸೂ.. ಮಕ್ಕಳಾ ಎಂದು ಜೋರು ಧ್ವನಿಯಲ್ಲಿ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ.

Recommended Video

ಬೆಂಗಳೂರು: Corona ಹಿನ್ನೆಲೆ VaikuntaEkadasiಗೆ ದೇವಸ್ಥಾನಕ್ಕೆ ಭಕ್ತರಿಗೆ ನೋ ಎಂಟ್ರಿ! | Oneindia Kannada

ಅಲ್ಲದೇ ರಸ್ತೆ ಬದಿ ನಿಲ್ಲಿಸಿದ್ದ ವಾಹನವನ್ನು ಇನ್ ಸ್ಪೆಕ್ಟರ್ ಸ್ವತಃ ತಳ್ಳಿ ಬೀಳಿಸುವ ಮೂಲಕ ತನ್ನ ಅಸಲಿತನವನ್ನು ತೋರಿಸಿದ್ದಾರೆ. ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವ ಮಾಗಡಿ ರಸ್ತೆ ಪೊಲೀಸ್ ಇನ್ ಸ್ಪೆಕ್ಟರ್ ಆನಂದ್ ಮತ್ತು ಪೊಲೀಸ್ ಸಿಬ್ಬಂದಿ ವಿರುದ್ದ ಬಿಬಿಎಂಪಿ ಜಂಟಿ ಪೊಲೀಸ್ ಆಯುಕ್ತರಿಗೆ ದಲಿತ ಸಂಘರ್ಷ ಸಮಿತಿ ದೂರು ಸಲ್ಲಿಸಿದೆ.

English summary
Tik Tok star police inspector is exposed by videos for his brutal act against bbmp labours
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X