ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಬಿರುಗಾಳಿ ಸಹಿತ ಮಳೆ, ಬಿದ್ದಿದ್ದು ಬರೋಬ್ಬರಿ 83 ಮರಗಳು

|
Google Oneindia Kannada News

ಬೆಂಗಳೂರು, ಜೂನ್ 7: ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಸುರಿದ ಅರ್ಧಗಂಟೆ ಮಳೆಗೆ ವಿವಿಧೆಡೆ ಒಟ್ಟು 83 ಮರಗಳು ಧರೆಗುರುಳಿವೆ.

ರಾಜರಾಜೇಶ್ವರಿನಗರ ಹಾಗೂ ಬಸವನಗುಡಿಯಲ್ಲಿ ಅತಿ ಹೆಚ್ಚು ಮರಗಳು ಬಿದ್ದಿದೆ ಅತಿ ಹೆಚ್ಚು ಹಾನಿಯೂ ಉಂಟಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕೇವಲ ಅರ್ಧಗಂಟೆ ಮಳೆಗೆ ಬೆಂಗಳೂರು ಸ್ಥಿತಿ ಹೇಗಾಗಿದೆ ನೋಡಿ ಕೇವಲ ಅರ್ಧಗಂಟೆ ಮಳೆಗೆ ಬೆಂಗಳೂರು ಸ್ಥಿತಿ ಹೇಗಾಗಿದೆ ನೋಡಿ

ಎಲ್ಲಿ ನೋಡಿದರೂ ಮರ ಉರುಳಿರುವುದು, ಟ್ರಾನ್ಸ್‌ಫಾರ್ಮರ್ ವಾಹನಗಳ ಮೇಲೆ ಬಿದ್ದಿರುವುದು, ವಿದ್ಯುತ್ ಕಂಬಗಳು ಧರೆಗುರಳಿರುವುದು, ಟ್ರಾಫಿಕ್ ಜಾಮ್ ನೋಡಿ ಅರ್ಧ ಗಂಟೆ ಮಳೆ ಎಷ್ಟೊಂದು ಅವಾಂತರವನ್ನು ಸೃಷ್ಟಿಸಿದೆ. ಬಸವನಗಗುಡಿ, ಕೆಂಗೇರಿ, ರಾಜರಾಜೇಶ್ವರಿನಗರ, ಗಿರಿನಗರ ಪ್ರದೇಶದಲ್ಲಿ ಅತಿ ಹೆಚ್ಚು ಅನಾಹುತವಾಗಿದೆ.

ರಾತ್ರಿ 1 ಗಂಟೆಗೆ ದೂರು ನೀಡಿದರೂ ಸ್ಪಂದಿಸಿದ ಬೆಸ್ಕಾಂ

ರಾತ್ರಿ 1 ಗಂಟೆಗೆ ದೂರು ನೀಡಿದರೂ ಸ್ಪಂದಿಸಿದ ಬೆಸ್ಕಾಂ

ಹೊಸಕೆರೆಹಳ್ಳಿಯಲ್ಲಿ ಕಳೆದ ಎರಡು ಗಂಟೆಯಿಂದ ವಿದ್ಯುತ್ ಇಲ್ಲ ಎಂದು ರಾತ್ರಿ 1 ಗಂಟೆಗೆ ಟ್ವಿಟ್ಟರ್ ಮೂಲಕ ದೂರು ನೀಡಿದರೂ ಕೂಡ ಆಗಲೇ ಸ್ಪಂದಿಸಿದ್ದಾರೆ. ದಿನದ 24 ಗಂಟೆಯೂ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ರಾತ್ರಿಇಡೀ ಕಾರ್ಯ ನಿರ್ವಹಿಸಿದ ಬೆಸ್ಕಾಂ ಸಿಬ್ಬಂದಿಗಳು

ರಾತ್ರಿಇಡೀ ಕಾರ್ಯ ನಿರ್ವಹಿಸಿದ ಬೆಸ್ಕಾಂ ಸಿಬ್ಬಂದಿಗಳು

ಬಸವನಗುಡಿ, ರಾಜರಾಜೇಶ್ವರಿನಗರ ಸೇರಿದಂತೆ ಹಲವು ಕಡೆಗಳಲ್ಲಿ ಸೇರಿ ಒಟ್ಟು 83 ಮರಗಳು ಧರೆಗುರುಳಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಮಳೆ ಸ್ವಲ್ಪ ಕಡಿಮೆಯಾದ ಬಳಿಕ ಗ್ರಾಹಕರ ದೂರು ಆಲಿಸಿ ಬಂದ ಬೆಸ್ಕಾಂ ಸಿಬ್ಬಂದಿಗಳು ಬೆಳಗ್ಗೆಯವರೆಗೂ ಕಾರ್ಯ ನಿರ್ವಹಿಸಿದ್ದಾರೆ. ರಾತ್ರಿ 1 , 2 ಗಂಟೆ ಸಮಯದಲ್ಲೂ ಕೂಡ ಮರಗಳನ್ನು ಕಡಿದು, ವಿದ್ಯುತ್ ತಂತಿಗಳನ್ನು ಸರಿಪಡಿಸುವ ಕಾರ್ಯದಲ್ಲಿ ತೊಡಗಿದ್ದರು. ಬೆಂಗಳೂರು ಜನತೆ ಇವರಿಗೆ ಧನ್ಯವಾದ ಹೇಳಲೇ ಬೇಕು.

ಕೇರಳಕ್ಕೆ ಮುಂಗಾರು 2 ದಿನ ತಡ, ಕರ್ನಾಟಕಕ್ಕೆ ಯಾವಾಗ?ಕೇರಳಕ್ಕೆ ಮುಂಗಾರು 2 ದಿನ ತಡ, ಕರ್ನಾಟಕಕ್ಕೆ ಯಾವಾಗ?

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಿಬ್ಬಂದಿಗಳಿಗೆ ಪೀಕಲಾಟ

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಿಬ್ಬಂದಿಗಳಿಗೆ ಪೀಕಲಾಟ

ಮುಂಗಾರು ಆರಂಭವಾಗುವ ಮೊದಲೇ ಇಡೀ ಬೆಂಗಳೂರು ಸಮೀಕ್ಷೆ ನಡೆಸಿ, ವಿದ್ಯುತ್ ತಂತಿಗಳ ಸಮೀಪ ಇರುವ ಬೀಳುವ ಹಂತದಲ್ಲಿರುವ ಮರದ ರೆಂಬೆಗಳನ್ನು ಕತ್ತರಿಸುವುದು, ಅಥವಾ ಹಳೆಯ ಮರಗಳನ್ನು ಕತ್ತರಿಸುವ ಕೆಲಸವನ್ನು ಬಿಬಿಎಂಪಿ ಹಾಗೂ ಬೆಸ್ಕಾಂ ಸೇರಿ ಮಾಡಬೇಕಿತ್ತು. ಇದೀಗ ಮಳೆ ಬಂದ ನಂತರ ಅನಾಹುತ ಸಂಭವಿಸಿದ ಮೇಲೆ ಬೆಸ್ಕಾಂ ಸಿಬ್ಬಂದಿಗಳಿಗೆ ಇದು ತಲೆನೋವು, ಅಧಿಕಾರಿಗಳು ನಿರ್ಲಕ್ಷ್ಯಕ್ಕೆ ಲೈನ್‌ಮೆನ್‌ಗಳು ದಂಡ ತೆರವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜರಾಜೇಶ್ವರಿನಗರದ ಸ್ಥಿತಿ ನೋಡಿ ಹೇಗಿದೆ?

ರಾಜರಾಜೇಶ್ವರಿನಗರದ ಸ್ಥಿತಿ ನೋಡಿ ಹೇಗಿದೆ?

ರಾಜರಾಜೇಶ್ವರಿನಗರದಲ್ಲಿ ಅತಿ ಹೆಚ್ಚು ಅವಾಂತರವಾಗಿದೆ, ಇಡೀ ರಸ್ತೆಯ ತುಂಬೆಲ್ಲಾ ವಿದ್ಯುತ್ ಕಂಬಗಳು, ಮರಗಳು, ವಿದ್ಯುತ್ ತಂತಿಗಳೇ ಕಾಣಿಸುತ್ತಿವೆ, ಇವುಗಳನ್ನು ಸರಿಪಡಿಸಲು ಬೆಸ್ಕಾಂ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.

English summary
Heavy rain bring down 83 trees in Bengaluru on Thursday,The downpour affected power supply plunging many areas into darkness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X