ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರ್ತಿಕ್ ಗೌಡ ಬಂಧನಕ್ಕೆ ಮೂರು ವಿಶೇಷ ತಂಡ ರಚನೆ

|
Google Oneindia Kannada News

ಬೆಂಗಳೂರು, ಸೆ.5 : ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡರ ಪುತ್ರ ಕಾರ್ತಿಕ್ ಗೌಡ ಬಂಧನಕ್ಕೆ ಬೆಂಗಳೂರು ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಬೆಂಗಳೂರು, ಮಂಗಳೂರು, ಮಡಿಕೇರಿಗೆ ತಂಡಗಳನ್ನು ಕಳಿಸಲಾಗಿದ್ದು, ಹುಡುಕಾಟ ಆರಂಭವಾಗಿದೆ.

ನಟಿ ಮೈತ್ರಿಯಾ ಗೌಡ ಆರ್.ಟಿ.ನಗರ ಪೊಲೀಸರಿಗೆ ಕಾರ್ತಿಕ್ ಗೌಡ ವಿರುದ್ಧ ನೀಡಿರುವ ವಂಚನೆ ಮತ್ತು ಅತ್ಯಾಚಾರ ದೂರಿನ ಅನ್ವಯ ಪೊಲೀಸರು ಕಾರ್ತಿಕ್ ಗೌಡ ಅವರನ್ನು ವಿಚಾರಣೆ ನಡೆಸಬೇಕಾಗಿದೆ. ಎರಡು ಬಾರಿ ನೋಟಿಸ್ ನೀಡಿದರೂ ಕಾರ್ತಿಕ್ ಗೌಡ ಅವರು ವಿಚಾರಣೆಗೆ ಹಾಜರಾಗಿಲ್ಲ.

Karthik Gowda

ಆದ್ದರಿಂದ, ಗುರುವಾರ ಪೊಲೀಸರು ನ್ಯಾಯಾಲಯದಿಂದ ಬಂಧನದ ವಾರೆಂಟ್ ಪಡೆದುಕೊಂಡಿದ್ದಾರೆ. ಬಂಧನ ಭೀತಿ ಎದುರಿಸುತ್ತಿರುವ ಕಾರ್ತಿಕ್ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು 8ನೇ ಎಸಿಎಂಎಂ ನ್ಯಾಯಾಲಯ ಇಂದು ನಡೆಸಲಿದೆ. [ಮೈತ್ರಿಯಾ ಬಗ್ಗೆ ಡಾಟಿ ಸದಾನಂದ ಗೌಡರು ಹೇಳಿದ್ದೇನು?]

ಮೂರು ತಂಡಗಳ ರಚನೆ : ಕಾರ್ತಿಕ್ ಗೌಡ ಬಂಧನಕ್ಕೆ ವಾರೆಂಟ್ ಪಡೆದಿರುವ ಪೊಲೀಸರು ಜೆ.ಸಿ.ನಗರ ಉಪ-ವಿಭಾಗದ ಎಸಿಪಿ ಓಂಕಾರಯ್ಯ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚನೆ ಮಾಡಿದ್ದಾರೆ. ಮೂರು ತಂಡಗಳು ಕಾರ್ತಿಕ್‌ಗಾಗಿ ಹುಡುಕಾಟ ಆರಂಭಿಸಿವೆ. [ಯಾವುದೇ ಕ್ಷಣದಲ್ಲಿ ಕಾರ್ತಿಕ್ ಗೌಡ ಬಂಧನ]

ಒಂದು ತಂಡ ಬೆಂಗಳೂರಿನಲ್ಲಿ, ಒಂದು ತಂಡ ಮಡಿಕೇರಿಯಲ್ಲಿ ಮತ್ತೊಂದು ತಂಡ ಮಂಗಳೂರಿನಲ್ಲಿ ಕಾರ್ತಿಕ್ ಗೌಡ ಅವರಿಗಾಗಿ ಹುಡುಕಾಟ ನಡೆಸುತ್ತಿದೆ. ಕಾರ್ತಿಕ್ ಗೌಡ ಪತ್ತೆಯಾದರೆ, ತಕ್ಷಣ ಅವರನ್ನು ಬಂಧಿಸಿಲು ಪೊಲೀಸರು ಸಜ್ಜಾಗಿದ್ದಾರೆ.

English summary
Bangalore police formed Three special teams to arrest Karthik Gowda son of Minister D.V.Sadanada Gowda. The 8th additional chief metropolitan magistrate on Thursday issued a non-bailable warrant against Karthik Gowda who has not appeared for questioning in a rape case against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X