ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೀಘ್ರದಲ್ಲೇ ಬೆಂಗಳೂರಿನ ಮೂರು ರಸ್ತೆ ಅಗಲೀಕರಣ

|
Google Oneindia Kannada News

ಬೆಂಗಳೂರು, ಸೆ.9 : ಬನ್ನೇರುಘಟ್ಟ, ಉತ್ತರಹಳ್ಳಿ ಮತ್ತು ಸುಬ್ರಮಣ್ಯಪುರ ರಸ್ತೆಗಳ ಅಗಲೀಕರಣ ಕಾಮಗಾರಿಯನ್ನು ತಕ್ಷಣ ಆರಂಭಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಶಾಂತ ಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ರಸ್ತೆಗಳ ಅಗಲೀಕರಣ ಅನಿವಾರ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಮಂಗಳವಾರ ಮೇಯರ್ ಶಾಂತಕುಮಾರಿ ಅವರು ಬೆಂಗಳೂರು ದಕ್ಷಿಣ ಭಾಗದ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದರು, ಈ ಸಂದರ್ಭದಲ್ಲಿ ಬನ್ನೇರುಘಟ್ಟ, ಉತ್ತರಹಳ್ಳಿ, ಸುಬ್ರಹ್ಮಣ್ಯಪುರ ಮುಖ್ಯ ರಸ್ತೆಗಳನ್ನು ಅಗಲೀಕರಣ ಮಾಡುವ ಕಾಮಗಾರಿಯನ್ನು ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Shantha Kumari

ಈ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು, ಅಗಲೀಕರಣ ಅನಿವಾರ್ಯವಾಗಿದೆ. ರಸ್ತೆ ಅಗಲೀಕರಣದಿಂದ ಆಸ್ತಿ ಕಳೆದುಕೊಳ್ಳುವವರು ಜಾಗ ಬಿಟ್ಟುಕೊಡಲು ಸಿದ್ಧರಾಗಿದ್ದಾರೆ. ಆದ್ದರಿಂದ ಅವರಿಗೆ ಸೂಕ್ತ ಪರಿಹಾರವನ್ನು ನೀಡಿದ ತಕ್ಷಣ ಕಾಮಗಾರಿಯನ್ನು ಆರಂಭ ಮಾಡಿ ಎಂದು ಮೇಯರ್ ಶಾಂತ ಕುಮಾರಿ ಅವರು ಅಧಿಕಾರಿಗಳಿಗೆ ತಿಳಿಸಿದರು. [ಬೆಂ-ಮೈಸೂರು ಹೆದ್ದಾರಿಗೆ ಟೋಲ್ ಕಟ್ಟಲು ಸಜ್ಜಾಗಿ]

ಮೇಯರ್ ಮಿಂಚಿನ ಸಂಚಾರ : ಮಂಗಳವಾರ ಬೆಳಗ್ಗೆ ಉಪ ಮೇಯರ್ ರಂಗಣ್ಣ ಅವರೊಂದಿಗೆ ಮೊದಲು ಉತ್ತರಹಳ್ಳಿ ವಾರ್ಡ್ ನಂಬರ್ 184ಕ್ಕೆ ಭೇಟಿ ನೀಡಿ ಕಸ ಗುಡಿಸುವ ಪೌರ ಕಾರ್ಮಿಕರ ಆರೋಗ್ಯ ವಿಚಾರಿಸಿದರು. ಗ್ಲೌಸ್ ಕೊಟ್ಟಿದ್ದಾರೆಯೇ, ಸಮವಸ್ತ್ರ ನೀಡಲಾಗಿದೆಯೇ ಎಂಬ ಬಗ್ಗೆ ಅವರಿಂದ ಮಾಹಿತಿ ಸಂಗ್ರಹಣೆ ಮಾಡಿದರು. [ಜಯ­ನಗರ ಬಡಾವಣೆಗೊಂದು ಸ್ಮಾರ್ಟ್‌ ರಸ್ತೆ ನಿರ್ಮಾಣ]

ನಂತರ ಉತ್ತರಹಳ್ಳಿ ಕೆರೆಗೆ ಭೇಟಿ ನೀಡಿ ನೀರು ಶುದ್ಧೀಕರಣ ಘಟಕದ ಕಾಮಗಾರಿಯನ್ನು ಪರಿಶೀಲಿಸಿದರು. ನಂತರ ಯಾದಾಳಮ್ ನಗರಕ್ಕೆ ಭೇಟಿ ನೀಡಿದರು, ಅಲ್ಲಿನ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮೇಯರ್ ಅವರಿಗೆ ದೂರು ನೀಡಿದರು. ಈ ಬಗ್ಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಕೋಣನಕುಂಟೆ ಕ್ರಾಸ್‌ಗೆ ಭೇಟಿ ನೀಡಿದ ಅವರು, ಒಳ ಚರಂಡಿ, ರಸ್ತೆ ಮತ್ತು ರಾಜಕಾಲುವೆ ಕಾಮಗಾರಿಗಳನ್ನು ವೀಕ್ಷಿಸಿದರು. ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ, ಪಾಲಿಕೆ ಸದಸ್ಯರಾದ ರಮೇಶ್‍ ರಾಜು, ವಿಜಯ ರಮೇಶ್ ಹಾಗೂ ಪಾಲಿಕೆ ಅಧಿಕಾರಿಗಳು ಮೇಯರ್ ಜೊತೆಗಿದ್ದರು.

English summary
Bruhat Bangalore Mahanagara Palike(BBMP) Mayor Shantha Kumari said, Bannerghatta, Uttarahalli, Subramanyapura main road widening work will be taken up soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X