ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರೋ ಇಂಡಿಯಾ ಪ್ರದರ್ಶನಕ್ಕಾಗಿ ಬಂದಿಳಿದ ರಫೇಲ್ ವಿಮಾನಗಳು

|
Google Oneindia Kannada News

ಬೆಂಗಳೂರು, ಫೆಬ್ರವರಿ 14: ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ತನ್ನ ಪ್ರದರ್ಶನ ತೋರಲು ರಫೇಲ್ ವಿಮಾನಗಳು ಬುಧವಾರ ಸಂಜೆ ಬಂದಿಳಿದಿದೆ.

ಯುದ್ಧ ವಿಮಾನಗಳ ಅಬ್ಬರಿಸುವ ಸದ್ದು, ಅಬ್ಬರ ಬಳ್ಳಾರಿ ರಸ್ತೆಯ ಯಲಹಂಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೇಳಿಸುತ್ತಿದೆ.ಭಾರತದಲ್ಲಿ ಭಾರಿ ಸದ್ದು ಮಾಡುತ್ತಿರುವ ಫ್ರಾನ್ಸ್‌ನ ಡಸಾಲ್ಟ್ ಕಂಪನಿಯ ಮೂರು ರಪೇಲ್ ವಿಮಾನಗಳು ಬಂದಿವೆ.

ಏರೋ ಇಂಡಿಯಾ ಪ್ರದರ್ಶನಕ್ಕೆ ಸಜ್ಜಾದ ಏರ್‌ಬಸ್, ವಿಶೇಷತೆ ಏನು? ಏರೋ ಇಂಡಿಯಾ ಪ್ರದರ್ಶನಕ್ಕೆ ಸಜ್ಜಾದ ಏರ್‌ಬಸ್, ವಿಶೇಷತೆ ಏನು?

ಫೆಬ್ರವರಿ 21ರಂದು ಡ್ರೋನ್ ಒಲಿಂಪಿಕ್ಸ್ ಆಯೋಜಿಸಲಾಗಿದೆ. ಇದರಲ್ಲಿ ಭಾರತ ಮತ್ತು ವಿದೇಶಿ ಕಂಪನಿಗಳು ಭಾಗವಹಿಸುತ್ತಿವೆ. ನಿಗಾ ಮತ್ತು ಹಾರಾಟ ಸಾಮರ್ಥ್ಯ, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸರಕು ಸಾಗಣೆ ಮತ್ತು ಗುಂಡುಗಳಾಗಿ ಹಾರಾಟ ಸ್ಪರ್ಧೆ ಸೇರಿ ಒಟ್ಟು ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

Three rafales land in Bengaluru for Aero india show

ಪ್ರಾಥಮಿಕ ಹಂತದ ಸ್ಪರ್ಧೆಯು ಫೆ. 18 ಮತ್ತು 19ರಂದು ಜಕ್ಕೂರು ಏರೋಡ್ರಮ್‌ನಲ್ಲಿ ನಡೆಯಲಿದೆ. ಅಂತಿಮ ಹಂತದ ಸ್ಪರ್ಧೆಯು ಯಲಹಂಕ ವಾಯುನೆಲೆಯಲ್ಲಿ ಫೆ.21ರಂದು ಬೆಳಗ್ಗೆ 10ರಿಂದ ನಡೆಯಲಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಒಟ್ಟು 121 ಅರ್ಜಿಗಳು ಬಂದಿದ್ದು, 57 ಅರ್ಜಿದಾರರು ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಏರೋ ಇಂಡಿಯಾದಲ್ಲಿ 52 ವಿಮಾನಗಳ ಪ್ರದರ್ಶನಏರೋ ಇಂಡಿಯಾದಲ್ಲಿ 52 ವಿಮಾನಗಳ ಪ್ರದರ್ಶನ

ಏರೋ ಇಂಡಿಯಾದಲ್ಲಿ ಜನರ ಗಮನ ಸೆಳೆಯುವ ಹಾಗೂ ಬರಸೆಳೆದು ಕರೆಯುವ ಏರೋಬ್ಯಾಟಿಕ್ ತಂಡಗಳ ಪೈಕಿ ಯು.ಕೆ ಮೂಲದ ಏರೋಬ್ಯಾಟಿಕ್ ತಂಡ ಯುಕ್ಲೋವ್ಲೇವ್ ಆಕರ್ಷಕ ಪ್ರದರ್ಶನ ನೀಡಲು ಸಜ್ಜಾಗಿದೆ.

English summary
Three Rafale aircraft arrived in Bengaluru on Wednesday to participate in Aero India 2019, the biennial air show, which kicks off on February 20. The Rafale, made by French company Dassault, has been participating in this show since 2011.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X