ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೋಲಿಸ್ ಪೇದೆಯ ಬೈಕ್ ಸೇರಿ 16 ವಾಹನ ಕದ್ದ ಮೂವರು ಕಳ್ಳರ ಬಂಧನ

|
Google Oneindia Kannada News

ಬೆಂಗಳೂರು, ಏಪ್ರಿಲ್ 20: ಸಿಲಿಕಾನ್ ಸಿಟಿಯಲ್ಲಿ ವಾಹನ ಕಳ್ಳತನ ಮಾಡುವ ಕಳ್ಳರು ಹೆಚ್ಚಾಗಿದ್ದಾರೆ ಪೊಲೀಸರ ಕೈಗೆ ಸಿಗದೆ ತಮ್ಮ ಚಾಣಾಕ್ಷತನದಿಂದ ವಾಹನ ಕಳ್ಳತನ ನಡೆಸುತ್ತಿದ್ದಾರೆ. ಆದರೆ ನಿನ್ನೆ (ಮಂಗಳವಾರ) ಬೆಂಗಳೂರು ಸಿಟಿನಲ್ಲಿ ನಕಲಿ‌ ಕೀ ಬಳಸಿ ವಾಹನಗಳನ್ನು ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ನಗರ ಪೋಲಿಸರು ಬಂಧಿಸಿದ್ದು, ಇತ್ತೀಚೆಗೆ ಕಳ್ಳತನವಾಗಿದ್ದ ಒಟ್ಟು 16 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಗರಗಳ ವಿವಿಧ ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಭೇದಿಸಿರುವ ಮಡಿವಾಳ ಠಾಣೆಯ ಪೋಲಿಸರು ನಕಲಿ ಕೀ ಬಳಸಿ ಮತ್ತು ಕೀ ಮುರಿದು ಬೈಕ್ ಮತ್ತು ಇತರೆ ವಾಹನಗಳನ್ನು ಲಿಫ್ಟ್ ಮಾಡುವ ಮೂಲಕ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದರು.

ಬೆಂಗಳೂರಿನ ನಗರಗಳಲ್ಲಿ ವಾಹನಗಳ ಕಳ್ಳತನ ಮಾಡುತ್ತಿದ್ದ ವಿನೀತ್ ಕುಮಾರ್ ಹಾಗೂ ಮುಬಾರಕ್ ಈ ಕಳ್ಳರನ್ನು ಮಡಿವಾಳ ಪೋಲಿಸರು ಮಂಗಳವಾರ ಬಂಧಿಸಿದ್ದು ಇವರಿಬ್ಬರೂ ಆಡುಗೋಡಿಯ ಪೋಲಿಸ್ ಪೇದೆ ದೇವರಾಜ್ ಅವರ ಬೈಕ್ ಕಳ್ಳತನ ಮಾಡಿದ್ದರು. ಈ ಘಟನೆಯ ಕುರಿತು ಪೋಲಿಸ್ ಪೇದೆ ಕಳೆದ ಮಾ.10ರಂದು ಠಾಣೆಯಲ್ಲಿ ದೂರು ದಾಖಲಿಸಿದ್ದರು.

Three people arrested for theft of 16 vehicles in Bangaluru

ಪೋಲಿಸ್ ಪೇದೆ ದೇವರಾಜ್ ಅವರು ನಿನ್ನೆ ರಾತ್ರಿ ಸಮಯದಲ್ಲಿ ನಗರದ ಸಿಲ್ಕ್ ಬೋರ್ಡ್ ರಸ್ತೆ ಮೇಲ್ಸೇತುವೆ ಹತ್ತಿರ ತಮ್ಮ ಬೈಕ್ ನೋಡಿದ್ದಾರೆ ಈ ವೇಳೆ ವಿನೀತ್ ಮತ್ತು ಮುಬಾರಕ್ ನನ್ನು ಬಂಧಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ನಗರದಲ್ಲಿ 8 ವಾಹನಗಳನ್ನು ಕಳ್ಳತನ ಮಾಡಿದ್ದ ವೈಕ್ತಿಯನ್ನು ಕಲಾಸಿಪಾಳ್ಯ ಪೋಲಿಸರು ಬಂಧಿಸಿ 8 ಕಳ್ಳತನವಾಗಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಬೈಕ್, ವಾಹನಗಳ ಕೀ ಮುರಿದು ಕಳ್ಳತನ ನಡೆಸುತ್ತಿದ್ದ ಇಮ್ರಾನ್ ಮಹಿಳೆಯ ಬೈಕ್ ಕಳ್ಳತನ ಮಾಡಿದ್ದನು. ಈ ಕುರಿತು ಕಳೆದ ಮಾರ್ಚ್ 23ರಂದೇ ಕಲಾಸಿಪಾಳ್ಯ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸದ್ಯ ಇಮ್ರಾನ್ ಎಂಬಾತನನ್ನು ಬಂಧಿಸಿರುವ ಪೋಲಿಸರು ನಗರದ ವಿವಿಧ ಠಾಣೆಗಳಲ್ಲಿ ದೂರು ದಾಖಲಾಗಿದ್ದ ಒಟ್ಟು 8 ಪ್ರಕರಣಗಳನ್ನು ಪೋಲಿಸರು ಭೇದಿಸಿದ್ದಾರೆ.

Recommended Video

ಹಿಂದೂ ಆಕ್ಟಿವಿಸ್ಟ್ ಸಾದ್ವಿ ರಿತುಂಬರ್ ಏನ್ ಹೇಳಿದಾರೆ ಗೊತ್ತಾ!! | Oneindia Kannada

English summary
The Bengaluru city police were captured by the total of 16 vehicles that were arrested in the city of the city, who had been arrested in the city of two thiefs who stealed vehicles in Bengaluru City,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X